ಅರಬ್ ಮಹಿಳಾ ಲೋಕವನ್ನು ಅನಾವರಣ ಮಾಡುವ ಕವಿತೆಗಳನ್ನು ಹಿರಿಯ ಕವಯತ್ರಿ ಎಂ.ಆರ್. ಕಮಲ ಅವರು ಅನುವಾದ ಮಾಡಿದ್ದಾರೆ.
ಮನೆಯ ಉಪ್ಪರಿಗೆಯಿಂದ ನಕ್ಷತ್ರಗಳನ್ನು ಹೂವುಗಳಂತೆ ಬಿಡಿಸಿಕೊಳ್ಳುವ, ಮರುಭೂಮಿಯೆಲ್ಲ ವ್ಯಾಪಿಸುವ ಚಂದ್ರನ ಬೆಳದಿಂಗಳಿನಲ್ಲಿ ಮೀಯುವ, ತಿಳಿಗೊಳಗಳಿಂದ ಅಮೃತವನ್ನು ಕುಡಿಯುವ, ಖರ್ಜೂರದ ಸಿಹಿಫಲಗಳಿಂದ ತುಳುಕುವ ಈ ಪ್ರದೇಶವನ್ನು ಸ್ವರ್ಗವೆಂದು ಕರೆಯಲಾಗುತ್ತಿತ್ತು.
ಆದರೆ ಇಂದು ಕಣ್ಣು ಬಿಡದ ಕೂಸುಗಳು ಕೂಡ ಹಿಂಸೆಯ ಕಾಡತೂಸುಗಳಿಗೆ ಬಲಿಯಾಗಿ ರಕ್ತಸಿಕ್ತವಾಗುತ್ತಿವೆ. ಅಸಾಯಕ ಸಾಮಾನ್ಯ ಮನುಷ್ಯರು ಯುದ್ಧಗಳ ಅಟ್ಟಹಾಸಗಳಲ್ಲಿ ಚಿಂದಿಗಿಂತಲೂ ಕಡಿಮೆ ಬೆಲೆಯನ್ನು ಪಡೆಉ ಕೇವಲ ಉಸಿರಾಡುವ ಜೀವಂತ ಚೀಲಗಳಾಗಿದ್ದಾರೆ. ಮನುಷ್ಯನ ಕ್ರೌರ್ಯ, ಅತಾರ್ಕಿಕ ನೀಚತನ, ಎಷ್ಟು ನೆತ್ತರು ಹರಿಸಿದರೂ ತೀರದ ದಾಹಗಳಿಂದ ಇಲ್ಲಿನ ನಕ್ಷತ್ರ ತಿಳಿಗೊಳಗಳು, ಮರುಭೂಮಿಯ ಚಂದ್ರ, ಸಿಹಿಫಲಗಳು ನೆತ್ತರಲಿ ಎಂದು ಬಣ್ಣ ಕಳೆದುಕೊಂಡಿದೆ. ಅರಬ್ ನಾಗರಿಕತೆಯನ್ನು ಬೆಳೆಸಿದ, ಆದರಿಂದ ಭರವಸೆಯೇ ಕಾಣದ ಅರಬ್ ಮಹಿಳೆಯರು ಹಂಚಿಕೊಂಡ ತಮ್ಮ ನೆಲದ ನೋವುಗಳನ್ನು ’ನೆತ್ತರಲಿ ನೆಂದ ಚಂದ್ರ’ ಸಂಕಲನದ ಮೂಲಕ ಕನ್ನಡದಲ್ಲಿ ಮೊದಲ ಬಾರಿಗೆ ಓದುವ ಅವಕಾಶ ದೊರಕುತ್ತಿದೆ.
ಈ ಕೃತಿಯು 76 ಅಧ್ಯಾಯಗಳಾದ ಅಟಲ್ಲಾ ಎಸ್. ವಿ(ವೆಸ್ಟ್ ಬ್ಯಾಂಕ್ ಗೆ ಭೇಟಿ ನೀಡುತ್ತಾ, ಡಿಯಾಸ್ಪೋರ), ಅದೆಲ್ ನೆ ಜೆಮ್( ನಿದ್ರಾ ಸಂಚಾರಿ), ಅಮಲ್ ಅಲ್-ಜುಬುರಿ(ಎನ್ಕೆದ್ಯುಯಾನ ಮತ್ತು ಗಯಟೆ, ಪ್ರತಿಭಟನೆ), ಅಮೀನಾ ಸೈದ್( ಒಂದು ದಿನ ಈ ಹಾಳೆ), ಅಲ್-ಜಹ್ರಾ ಅಲ್-ಮನ್ಸೂರಿ(ಪರಿತ್ಯಕ್ತೆ), ಆಂದ್ರೆ ಶೆದಿ(ತಿರುವು, ಸ್ವಮತ ಭ್ರಷ್ಟ), ಆನ್ ಮೆರಿ ಜಸಿರ್ (ಪಿಸ್ತಾಷಿಯೋ ಐಸ್ ಕ್ರೀಮ್), ಆಯೇಷಾ ಅರ್ನೌತ್(ಬೆನ್ನು ಮೂಳೆ), ಇಮಾನ್ ಮೆರ್ಸಲ್(ಏಕಾಂತದ ಕಸರತ್ತುಗಳು)ಎಟೆಲ್ ಅದ್ನಾನ್(ವಸಂತದ ಸ್ವಂತ ಹೂಗಳಿಂದ), ಎನಾಯತ್ ಜಬೆರ್(ವೃತ್ತ, ಏಕಾಕಿತನ), ಎಲ್ಮಾಜ್ ಅಬಿ-ನಾದೆರ್(ಮನೆಯಿಂದ ಬಂದ ಪತ್ರಗಳು, ಹೊಸ ವರುಷದ ಬೆಳಗು), ಕ್ಲೇರ್ ಗೆಬೇಲಿ(ಬೈರುಟ್), ಘಾದಾ ಅಲ್ ಸಮ್ಮಾನ್( ನೀಲಿ ಬಣ್ಣದ ಪ್ರೇಮಿ ಸಾಗರದ ,ಮೇಲೆ ಬರೆಯುತ್ತೇನೆ, ಮಸಿ ಬಾವಿಯಲ್ಲಿ ಮಳೆಯ ಪ್ರೇಮಿ), ಘಾದಾ ಎಲ್-ಶಫಾಯಿ( ಅದೇ ಗಳಿಗೆಗೆ ಹೆಣೆದ ಸಾಲುಗಳು), ಜಕಿಯಾ ಮಲಲ್ಲಾ(ಹೆಣ್ಣುಮಕ್ಕಳು), ಜುಲೇಖಾ ಅಬು-ರಿಷಾ), ಖೊಬೆಜಾ(ಕೆನ್ನೀಲಿ ಬಣ್ಣದ ಹೂವು), ಜೊಯೆನ್ನಾ ಕಡಿ(ಹಿಂತಿರುಗಿ ನೋಡುತ್ತ), ತುರಯ್ಯ ಅಲ್-ಉರಯ್ಯಿದ್(ಬಾಯಾರಿಕೆ, ಅಚಲತೆಯ ಎಚ್ಚರಿಕೆಯಲ್ಲಿ), ತುರಯ್ಯ ಮಲ್ಹಾಸ್(ಅನಾಥೆ, ಸುಳ್ಳು-ಸುಳ್ಳು), ತೆರೇಸ್ ಅವ್ವಾದ್(ನನ್ನ ಒಂಟಿತನ), ದಹ್ಲಿಯ ರವಿಕೋವಿಚ್( ಚಿರಂತನ), ದಿಮಾ ಹಿಲಾಲ್(ಮರೆವಿನ ಪಾಪ, ಅರಬ್ಬೀ ಕಣ್ಣುಗಳು), ದೀಮಾ ಕೆ. ಶೆಹಾಬಿ(ಉಸಿರು), ದುನ್ಯಾ ಮಿಖೈಲ್( ಮಳೆ, ಕಿನ್ನರಿ ಮುಂಜಾವು), ದೋನಿಯಾ ಎಲ್-ಅಮಲ್ ಇಸ್ಮಾಯಿಲ್(ಶೋಕದ ಒಂದು ಗಳಿಗೆ), ನದಾ ಎಲ್ ಹೇಜ್( ನೆರಳಿನ ಪಯಣ, ಆಕಾಶಕ್ಕೆ ಕೈ ಚಾಚಿದ ಭೂಮಿ, ಹಿಂಬಾಲಿಸು, ತುಂಬಿ ಬಳಕು), ನದಿಯಾ ತುಯೇನಿ(ಲೆಬನಾನ್ ಬೆಟ್ಟಗಳಲ್ಲಿ, ದೇವದಾರು, ಬೈರುಟ್, ಟ್ರಿಪೊಲಿ), ನದಿಯಾ ಹಜ್ ಬೂನ್ ರೈಮರ್( ಹಳೆಯ ಗೆಳೆಯನಿಗೆ, ಕೆಲಸದ ಹುಚ್ಚಿ, ಮಧ್ಯ ಪ್ರಾಚ್ಯ), ನಯೋಮಿ ಶಿಹಾಬ್ ನೈ( ಹೆಬ್ರಾನ್ ಸಣ್ಣ ಹೂದಾನಿಗಳು, ಅರೇಬಿಕ್, ಹಳದಿ ಕೈಗವಸು), ನಿದಾ ಖೌರಿ(ದ್ರಾಕ್ಷಿ ಜನ, ಬೆಂಕಿ ಜನ, ಕೊನೆಯ ಗುಂಡು), ನೆದಾಲ್ ಅಬ್ಬಾಸ್(ನನ್ನ ಪ್ರೀತಿಯ ಗೆಳತಿಗೆ, ಸುರ-ಮ್ನ್-ರಾ), ಪೊಲಿನ್ ಕಲ್ಡಸ್(ಮನೆ), ಫತ್ಮಾ ಕಂದಿಲ್(ಬತ್ತಿದ ರಕ್ತನಾಳ, ಮುಳ್ಳುಬಿರುಕುಗಳು ಇದ್ದಕ್ಕಿದ್ದಂತೆ ಚಲಿಸುತ್ತವೆ), ಫದ್ವಾ ತುಖಾನ್(ಹೊಸ ವರುಷಕ್ಕಾಗಿ ಪ್ರಾರ್ಥನೆ), ಫಾದಿಶಾ ಶಬ್ಬಿ( ಇಪ್ಪತ್ತೊಂಬತ್ತನ್ನು ಕೆತ್ತುವಾಗ), ಫೋಜಿಯಾ ಅಬು-ಖಾಲಿದ್( ಇಬ್ಬರು ಪುಟ್ಟ ಹುಡುಗಿಯರು, ಒಂದು ದೇಶ, ಭಯಾನಕತೆಯನ್ನು ಸವಿಯುವುದು), ಮರಮ್ ಮಸ್ತ್ರಿ(ಸಣ್ಣ ಪುಟ್ಟ ಪಾಪಗಳು, ಹೆಸರಿಲ್ಲದ್ದು) ಮುನಿಯಾ ಸಮರಾ(ನಗರಗಳ ಬಾಗಿಲು), ಮೆಲ್ಹೆಮ್ ಡಿ. ಎಚ್(ಉಳಿದಿದ್ದು ಪ್ರೀತಿಯಲ್ಲಿ), ಮೇ ಮುಜಾಫರ್(ದನಿ, ಮಿಂಚು, ಭ್ರಮಣ, ಮೌನ, ಗೆಳೆಯರು), ಮೇ ಸಯಿಫ್(ನಿರ್ಗಮನ), ಮೊಹ್ಜಾ ಕಹ್ ಫ್(ಮೊದಲನೆಯದಾಗಿ), ಮೋನಾ ಫಯಾದ್(ಪಿಸುಮಾತು), ರವಿಯಾ ಮೊರ್‍ರಾ(ಗುರ್ಭಾದಿಂದ), ಲುಮಿಯಾ ಅಬ್ಬಾಸ್ ಅಮಾರ(ಸ್ಯಾನ್ ಡಿಯಾಗೊ(ಮಳೆಗಾಳದ ಒಂದು ದಿನ, ಆದೇಶಗಳು), ಲೀನಾ ಟಿಬಿ( ಒಂದು ದನಿ, ಸಾಯುವಾಗ), ಲೀಸಾ ಸುಹೇರ್ ಮಜಾಜ್( ಜೆರುಸಲೆಂ ಹಾಡು, ಋತುಮಾನದಲ್ಲಿ), ಲೊರೆನ್ ಜರೊ-ಜೊಜೊನಿಸ್(ಕಸೂತಿಯಾದ ನೆನಪು), ಲೈಲಾ ಅಲ್ ಸೈ(ಉದ್ವೇಗದ ಸೂಚನೆಗಳು), ಲೈಲಾ ಅಲ್ಲೂಶ್(ಒಲುಮೆ ಹಾದಿ), ಲೈಲಾ ಯಾಘಿ(ಕಣ್ಣೀರ, ಮಗು ಮತ್ತವಳ ಡೈರಿ), ಲೈಲಾ ಹಲಬಿ(ಕೈ ತುಂಬ ಗಾಳಿ, ಎಲ್ಲೋ ದೂರದಲ್ಲಿ), ವೇನಸ್ ಖೌರಿ ಮತ್ತು ಕತ್ತಲ ನಡುವೆ ಆಯ್ಕೆಗೆ ಹಿಂಜರಿದವರು, ನೆಲದ ಹಣೆಯಲ್ಲಿ ಋತುಮಾನ ಹಚ್ಚೆ ಹಾಕಿದ ಕಾಲ), ಸಕೀನಾ ಶಬೆನ್(ಬಿರುಗಾಳಿ), ಸಬಾಹ್ ಅಲ್ ಖರ್‍ರತ್ ಜೈನ್(ಬಾಗಿದ ಮನೆಯಿಂದ), ಸಫಾ ಫಾತಿ(ಋತುಮಾನಗಳು), ಸಲ್ಪಾ ಆಲ್ ನೈಮಿ(ಭ್ರಮೆ, ಪ್ರಲೋಭನೆ), ಸಲ್ಮಾ ಖದ್ರಾ ಜಯ್ಯುಸಿ(ಮುಳುಗಿರುವ ಹಡಗು, ಕಸ್ಬಾದಲ್ಲಿ), ಸಾದಿಯಾ(ಉರಿವ ಮರದ ಮೋಹಕತೆ), ಸಾನಿಯ್ಯಾ ಸಲೇಹ್( ಬಹಿಷ್ಕೃತ), ಸಿಮಿನ್(ಮುದ್ದಾಗಿ ನನ್ನತ್ತ ನಡೆದದು ಬಂದಳು), ಸಿಹಮ್ ದಾವೂದ್(ನಾನು ಬಳಿ ಮಸಿಯಲ್ಲಿ ಪ್ರೀತಿಸುತ್ತೇನೆ), ಸುಅದ್ ಅಲ್ ಮುಬಾರಕ್ ಅಲ್ ಸಬಾಹ್(ಹುಚ್ಚು ಹೆಂಗಸು), ಸುಮಯ್ಯಾ ಎಲ್. ಸೋಸಿ(ದನಿಗಳು), ಸುಹೇರ್ ಹಮ್ಮದ್(ಭಗ್ನ ಮತ್ತು ಭೈರುಟ್), ಹಬೀಬಾ ಮುಹಮ್ಮದಿ( ಹೆಸರಿಲ್ಲದ ಕವನಗಳು), ಹಮ್ದ ಖಮೀಸ್( ಖಿನ್ನತೆಗಿದು ಕಾಲ), ಹಲಾ ಮೊಹಮ್ಮದ್(ಬೆನ್ನು ಹತ್ತಿರುವುದೇನು?, ನಿರೀಕ್ಷೆಯ ಬಾಗಿಲಲ್ಲಿ, ಪ್ರೀತಿ-ಬೆಳಕ ನಂದಿಸಿತು), ಹುದಾ ಅಬ್ಮಾನ್(ಅಪರಿಚಿತರು), ಹೊದಾ ಹುಸೇನ್(ನನ್ನದೇ ಒಂದು ಕೋಣೆ), ಹೌದಾ ಆಲ್ ನಮಾನಿ(ಕೆನ್ನೀಲಿ ಚಿಂತನೆ) ಇವೆಲ್ಲಾವುಗಳನ್ನು ಒಳಗೊಂಡಿದೆ.
ಈ ಸಂಕಲನದ ಕವಿತೆಗಳ ಅನುವಾದ ಕುರಿತು ಯುವಕವಿ ರಾಜೇಂದ್ರ ಪ್ರಸಾದ್ ಹೀಗೆ ಬರೆದಿದ್ದಾರೆ-
ಈ ಕವಿತೆಗಳ ಅನುವಾದದ ಆರಂಭದ ನಂತರದ ನಡುವಿನ ಆರೇಳು ವರ್ಷಗಳಲ್ಲಿ ಕಮಲಾ ಅವರು ಫ್ರೆಂಚ್ ಭಾಷೆಯನ್ನೂ ಕಲಿತಿದ್ದಾರೆ. ಇದರಿಂದ ಓದಿಗೆ ಮತ್ತೊಂದು ಮಧ್ಯವರ್ತಿ ಭಾಷೆಯನ್ನು ಅವಲಂಬನೆ ತಪ್ಪಿದೆ ಮತ್ತು ಕಾವ್ಯದ ಮೂಲ ದ್ರವ್ಯವನ್ನು ನೇರವಾಗಿ ಫ್ರೆಂಚ್ ನಿಂದ್ ಕನ್ನಡಕ್ಕೆ ತಂದು ನಮಗೆ ಉಣಬಡಿಸಲು ಸಾಧ್ಯವಾಗಿದೆ. ಹಾಗಾಗಿಯೇ ಇಲ್ಲಿನ ಕವಿತೆಗಳ ಯಾವ ತುದಿಯಲ್ಲಿಯೂ ಒಗ್ಗದ ಪದವಿಲ್ಲ, ಒಲಿಯದ ನುಡಿಯಿಲ್ಲ, ಅಗ್ಗದ ಸಾಲುಗಳು ಖಂಡಿತ ಲಭ್ಯವಿಲ್ಲ. ಕಾವ್ಯದ ಹರಿತ, ಮೊನಚು ಮತ್ತು ಲೋಕದೃಷ್ಟಿ ಭಾಷೆಯಿಂದ ಭಾಷೆಗೆ, ದೇಶದಿಂದ ದೇಶಕ್ಕೆ ಹೋದಂತೆಲ್ಲಾ ಸೂಕ್ಷ್ಮವಾಗಬೇಕು. ಅಂತಹ ಸೂಕ್ಷ್ಮತೆಯನ್ನು ಕಮಲಾ ಅವರ ಅನುವಾದದಲ್ಲಿ ಕಾಣಬಹುದಾಗಿದೆ.
’ನೆತ್ತರಲಿ ನೆಂದ ಚಂದ್ರ’ ಕೃತಿಯ ಕುರಿತು ಲೇಖಕರಾದ ಎಂ ಆರ್ ಕಮಲ ಅವರ ಮಾತುಗಳು.
©2024 Book Brahma Private Limited.