‘ನವಚಾರಿತ್ರಿಕವಾದ’ ಕೃತಿಯು ಸಿ.ಆರ್. ಗೋವಿಂದರಾಜು ಅವರ ಲೇಖನಸಂಕಲನವಾಗಿದೆ. ಇಲ್ಲಿ ಹೊಸ ಹೊಸ ಜ್ಞಾನಶಾಖೆ ಮತ್ತು ಪರಿಕಲ್ಪನೆಗಳನ್ನು ಪರಿಚಯಿಸುತ್ತಿರುವ ಪ್ರಸಾರಾಂಗವು ಇದೀಗ ವಸಾಹತೋತ್ತರ ಚಿಂತನೆಗಳಲ್ಲೊಂದಾದ ನವಚಾರಿತ್ರಿಕವಾದವನ್ನು ಮುಂದಿಟ್ಟಿದೆ. ಮೂಲತಃ ಪಾಶ್ಚಾತ್ಯ ಪರಿಕಲ್ಪನೆಯಾಗಿ ಕಳೆದ ಶತಮಾನದ ಕೊನೆಯ ವೇಳೆಗೆ ಅದು ಸ್ಟೀಫನ್ ಜೆ. ಗ್ರೀನ್ ಬ್ಲಾಟ್ ಅವರಿಂದ ರೂಪುಗೊಂಡಿತು. ಅದನ್ನು ಅಂಗೀಕರಿಸಲು ಚಿಂತಕರನೇಕರು ಹಿಂದೇಟುಹಾಕಿದ್ದೂ ಇದೆ. ನವಚಾರಿತ್ರಿಕವಾದದ ಬಗ್ಗೆ ವಿದ್ವಾಂಸರಲ್ಲಿ ಇನ್ನೂ ದ್ವಂದ್ವಗಳು ಸಾಕಷ್ಟಿವೆ. ನಮ್ಮ ಭಾರತದ, ಕರ್ನಾಟಕದ ಸಂದರ್ಭದಲ್ಲಿ ಅದಿನ್ನೂ ಬಂದು ತಲುಪಿಲ್ಲದ ಅತಿಥಿ. ಅಲ್ಲಿ-ಇಲ್ಲಿ ಕೆಲವು ಪತ್ರಿಕೆಗಳಲ್ಲಿ ಮಾತ್ರ ಪ್ರಸ್ತಾಪ ಇರುವ ನವಚಾರಿತ್ರಿಕವಾದದ ಬಗ್ಗೆ ಯಾವುದೇ ಅಧ್ಯಯನಗಳನ್ನೂ ಆಗಿಲ್ಲ. ಈ ಕಿರುಹೊತ್ತಿಗೆ ಅದಕ್ಕೊಂದು ಪ್ರವೇಶವನ್ನೊದಗಿಸಬಹುದು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕರಾಗಿರುವ ಸಿ.ಆರ್. ಗೋವಿಂದರಾಜು ಅವರು ಜನಿಸಿದ್ದು 1968 ಮಾರ್ಚ್ 23ರಂದು ಜನಿಸಿದರು. ಇತಿಹಾಸ, ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಗೋವಿಂದರಾಜು ಅವರ ಪ್ರಮುಖ ಕೃತಿಗಳೆಂದರೆ ಕರ್ನಾಟಕದ ಏಕೀಕರಣ ಚಳವಳಿ ಹಾಗೂ ಕನ್ನಡ ಸಾಹಿತ್ಯ, ಕನ್ನಡ ಚಳವಳಿಗಳು, ಇತಿಹಾಸ ಭಾಗ-೧, ನವ ಚಾರಿತ್ರಿಕವಾದ, ಮೋವ್‌ಮೆಂಟ್ ಫಾರ್ ಯುನೈಟೆಡ್ ಕರ್ನಾಟಕ, ಚಾರಿತ್ರಿಕ ಕರ್ನಾಟಕ, ಸಿನಿಮಾ ಸಂಕಥನ, ಮುಂಬೈ ಕರ್ನಾಟಕದ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳು, ಕರ್ನಾಟಕದ ಮುಖ್ಯಮಂತ್ರಿಗಳು ಮುಂತಾದವು. ...
READ MORE(ಹೊಸತು, ಫೆಬ್ರವರಿ 2011, ಪುಸ್ತಕದ ಪರಿಚಯ)
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಕೃತಿಗಳನ್ನು ಹೊರ ತರುತ್ತಿದೆ. ಕನ್ನಡ-ಕನ್ನಡಿಗ-ಕರ್ನಾಟಕ ಎಂಬ ಅಭಿಮಾನದಿಂದ, ಕನ್ನಡ ಸಂಸ್ಕೃತಿಯನ್ನು ಬೆಳೆಸಬೇಕೆಂಬ ಉದ್ದೇಶದಿಂದ ಚಿಗುರಿ ಅಸ್ತಿತ್ವಕ್ಕೆ ಬಂದು ಇದೀಗ ಕಾರ್ಯೋನ್ಮುಖವಾಗಿ ಹತ್ತು ಹಲವು ಯೋಜನೆಗಳನ್ನು ಸಿದ್ಧಪಡಿಸಿ ಕಾರ್ಯಗತ ಗೊಳಿಸುತ್ತಿದೆ. 'ಮಂಟಪಮಾಲೆ'ಯ ಕಿರುಹೊತ್ತಿಗೆಗಳು ಕಡಿಮೆ ಬೆಲೆಯಲ್ಲಿ ಸಾಮಾನ್ಯ ಜನರ ಪ್ರಾಥಮಿಕ ತಿಳುವಳಿಕೆ ಹೆಚ್ಚಿಸುವ ಸಲುವಾಗಿ ರೂಪುಗೊಂಡಿದ್ದು ಇದು ಈ ಮಾಲೆಯ ೧೬೩ನೇ ಪುಸ್ತಕವಾಗಿದೆ. ಹೊಸ ಹೊಸ ಜ್ಞಾನಶಾಖೆ ಮತ್ತು ಪರಿಕಲ್ಪನೆಗಳನ್ನು ಪರಿಚಯಿಸುತ್ತಿರುವ ಪ್ರಸಾರಾಂಗವು ಇದೀಗ ವಸಾಹತೋತ್ತರ ಚಿಂತನೆಗಳಲ್ಲೊಂದಾದ ನವಚಾರಿತ್ರಿಕವಾದವನ್ನು ನಿಮ್ಮ ಮುಂದಿಟ್ಟಿದೆ. ಮೂಲತಃ ಪಾಶ್ಚಾತ್ಯ ಪರಿಕಲ್ಪನೆಯಾಗಿ ಕಳೆದ ಶತಮಾನದ ಕೊನೆಯ ವೇಳೆಗೆ ಅದು ಸ್ಟೀಫನ್ ಜೆ. ಗ್ರೀನ್ ಬ್ಲಾಟ್ ಅವರಿಂದ ರೂಪುಗೊಂಡಿತು. ಅದನ್ನು ಅಂಗೀಕರಿಸಲು ಚಿಂತಕರನೇಕರು ಹಿಂದೇಟುಹಾಕಿದ್ದೂ ಇದೆ. ನವಚಾರಿತ್ರಿಕವಾದದ ಬಗ್ಗೆ ವಿದ್ವಾಂಸರಲ್ಲಿ ಇನ್ನೂ ದ್ವಂದ್ವಗಳು ಸಾಕಷ್ಟಿವೆ. ನಮ್ಮ ಭಾರತದ, ಕರ್ನಾಟಕದ ಸಂದರ್ಭದಲ್ಲಿ ಅದಿನ್ನೂ ಬಂದು ತಲುಪಿಲ್ಲದ ಅತಿಥಿ. ಅಲ್ಲಿ-ಇಲ್ಲಿ ಕೆಲವು ಪತ್ರಿಕೆಗಳಲ್ಲಿ ಮಾತ್ರ ಪ್ರಸ್ತಾಪ ಇರುವ ನವಚಾರಿತ್ರಿಕವಾದದ ಬಗ್ಗೆ ಯಾವುದೇ ಅಧ್ಯಯನಗಳನ್ನೂ ಆಗಿಲ್ಲ. ಈ ಕಿರುಹೊತ್ತಿಗೆ ಅದಕ್ಕೊಂದು ಪ್ರವೇಶವನ್ನೊದಗಿಸಬಹುದು.