ಹಂಪಿ ಕನ್ನಡ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕರಾಗಿರುವ ಸಿ.ಆರ್. ಗೋವಿಂದರಾಜು ಅವರು ಜನಿಸಿದ್ದು 1968 ಮಾರ್ಚ್ 23ರಂದು ಜನಿಸಿದರು. ಇತಿಹಾಸ, ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಗೋವಿಂದರಾಜು ಅವರ ಪ್ರಮುಖ ಕೃತಿಗಳೆಂದರೆ ಕರ್ನಾಟಕದ ಏಕೀಕರಣ ಚಳವಳಿ ಹಾಗೂ ಕನ್ನಡ ಸಾಹಿತ್ಯ, ಕನ್ನಡ ಚಳವಳಿಗಳು, ಇತಿಹಾಸ ಭಾಗ-೧, ನವ ಚಾರಿತ್ರಿಕವಾದ, ಮೋವ್‌ಮೆಂಟ್ ಫಾರ್ ಯುನೈಟೆಡ್ ಕರ್ನಾಟಕ, ಚಾರಿತ್ರಿಕ ಕರ್ನಾಟಕ, ಸಿನಿಮಾ ಸಂಕಥನ, ಮುಂಬೈ ಕರ್ನಾಟಕದ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳು, ಕರ್ನಾಟಕದ ಮುಖ್ಯಮಂತ್ರಿಗಳು ಮುಂತಾದವು.