ಲೇಖಕ ಬಿ.ಎಂ. ಬಶೀರ್ ಅವರ ಹನಿಗವಿತೆಗಳ ಸಂಕಲನ--ನನ್ನ ಮಸೀದಿಯ ಧ್ವಂಸಗೈದವರಿಗೆ ಕೃತಜ್ಞ.... ಸೂಫಿಯ ಕಣ್ಣಲ್ಲಿ ಹನಿಗಳು ಎಂಬುದು ಈ ಕೃತಿಗೆ ನೀಡಿರುವ ಉಪಶೀರ್ಷಿಕೆ. ಧರ್ಮಾಂಧರನ್ನು ಕೇಂದ್ರೀಕರಿಸಿ ಬರೆದ ಹನಿಗವಿತೆಗಳು ಧರ್ಮ ಸಾಮರಸ್ಯವನ್ನು ಸಾರುವ ಸಂದೇಶವನ್ನು ಒಳಗೊಂಡಿವೆ. ಗಾತ್ರದಲ್ಲಿ ಹನಿಗವಿತೆಗಳೆನಿಸಿದರೂ ಭಾವತೀವ್ರತೆಯಿಂದ, ಪ್ರಖರ ವೈಚಾರಿಕತೆಯಿಂದ ಓದುಗರ ಮೇಲೆ ಸಾಮರಸ್ಯದ ಅಗತ್ಯ ಕುರಿತಂತೆ ಧನಾತ್ಮಕ ಪರಿಣಾಮಗಳನ್ನು ಉಂಟು ಮಾಡುವಲ್ಲಿ ಸಶಕ್ತವಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಸಮೀಪದ ಮಠ ಎಂಬ ಊರಿನಲ್ಲಿ ಜನಿಸಿದ ಬಶೀರ್ ಅವರು ಉಪ್ಪಿನಂಗಡಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಪದವಿ, ಮುಂಬೈ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಪಡೆದವರು. ಮಂಬಯಿ ಕರ್ನಾಟಕ ಮಲ್ಲ’ ಕನ್ನಡ ದೈನಿಕದಲ್ಲಿ ಐದು ವರ್ಷ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡಿದ ಅವರು ನಂತರ ಜನವಾಹಿನಿ’ ಕನ್ನಡ ದಿನಪತ್ರಿಕೆಯಲ್ಲಿ ಐದು ವರ್ಷ ಹಿರಿಯ ಉಪಸಂಪಾದಕನಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ಒಂದು ದಶಕಕಕ್ಕೂ ಹೆಚ್ಚು ಕಾಲದಿಂದ ವಾರ್ತಾಭಾರತಿ’ ದಿನಪತ್ರಿಕೆಯಲ್ಲಿ ಸುದ್ದಿ ಸಂಪಾದಕರಾಗಿದ್ದಾರೆ. ಗೌರಿ ಲಂಕೇಶ್, ಅಗ್ನಿ ...
READ MORE