ನಾ ಕಂಡ ಕರ್ನಾಟಕ

Author : ಕೃಷ್ಣಾನಂದ ಕಾಮತ್

Pages 296

₹ 150.00




Year of Publication: 2008
Published by: ಕರ್ನಾಟಕ ಇತಿಹಾಸ ಸಂಶೋಧನ ಮಂಡಲ
Address: ಧಾರವಾಡ- 580001

Synopsys

‘ನಾ ಕಂಡ ಕರ್ನಾಟಕ’ ಕೃತಿಯು ಕೃಷ್ಣಾನಂದ ಕಾಮತ್ ಅವರ ಕರ್ನಾಟಕ ಸುವರ್ಣ ಮಹೋತ್ಸವ ಗ್ರಂಥಮಾಲೆಯ-ಪುಷ್ಪ :25ರ ಲೇಖನಗಳ ಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ‘ಈ ಸಂಕಲನದಲ್ಲಿಯ ಇಪ್ಪತ್ತು ಪ್ರಬಂಧಗಳು ಕಾಲಕಾಲಕ್ಕೆ ಕನ್ನಡ ಪತ್ರಿಕೆಗಳು ಕಾಮತರಿಗೆ ವಿನಂತಿಸಿ, ಬರೆಯಿಸಿ ಪ್ರಕಟವಾದವುಗಳು. ಮೊದಲ ವಿಭಾಗದ 10 ಪ್ರಬಂಧಗಳು ಕರ್ನಾಟಕದ ಕಲಾ ಪ್ರಪಂಚಕ್ಕೆ ಸಂಬಂಧಿಸಿದವುಗಳು. ಎರಡನೆಯ ವಿಭಾಗದ 10 ಪ್ರಬಂಧಗಳು ಕರ್ನಾಟಕದ ಜನಜೀವನಕ್ಕೆ ಸಂಬಂಧಿಸಿವೆ. ಇವೆಲ್ಲ ಕಾಲು ಶತಮಾನಕ್ಕೂ ಹಿಂದೆ ಬರೆದವುಗಳು, ಈ ಅವಧಿಯಲ್ಲಿ ಜನಜೀವನ ಭರದಿಂದ ಬದಲಾಗಿದೆ. ಮುಖ್ಯವಾಗಿ, ತಲಕಾಡಿನ ಕಲಾವಿದರು  ಅವನ ಹಿಡಿಯಲಾಗದಷ್ಟು ಮಾರ್ಪಟ್ಟಿದೆ. ಈ ಪ್ರದೇಶದ ಪರಿಸರ ವಿನಾಶದ ಕುರಿತು ಕಾಮತರು ತುಂಬಾ ಹಿಂದಿನಿಂದಲೂ ಬರೆಯುತ್ತ ಬಂದಿದ್ದರು. ಎಚ್ಚರಿಸಿದ್ದರು. ನಾವೇ ನಮ್ಮ ಸಂಸ್ಕೃತಿ ಪರಿಸರಗಳ ನಾಶಕ್ಕೆ ಕಾರಣರಾದ ಈ ದಿನಗಳಲ್ಲಿ ಈ ವಿಚಾರಗಳು ಹಿಂದೆಂದಿಗಿಂತಲೂ ಪ್ರಸ್ತುತವಾಗಿವೆ’ ಎಂದು ವಿಶ್ಲೇಷಿತವಾಗಿದೆ.

About the Author

ಕೃಷ್ಣಾನಂದ ಕಾಮತ್
(29 September 1934 - 20 February 2002)

ಖ್ಯಾತ ಸಾಹಿತಿ ಹಾಗೂ ವಿಜ್ಞಾನಿಯಾದ ಕೃಷ್ಣಾನಂದ ಕಾಮತ್ ಅವರು 1934ರ ಸೆಟ್ಪಂಬರ್ 29 ರಂದು ಜನಿಸಿದರು. ಊರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ. ತಂದೆ ಲಕ್ಷ್ಮಣ ವಾಸುದೇವ ಕಾಮತ್, ತಾಯಿ ರಮಾಬಾಯಿ. ಕನ್ನಡದಲ್ಲಿ ಅನೇಕ ವೈಜ್ಞಾನಿಕ ಕೃತಿಗಳನ್ನು ರಚಿಸಿದ್ದಾರೆ.  ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೀಟ ವಿಜ್ಞಾನದಲ್ಲಿ ಎಂಎಸ್ಸಿ ಪದವಿ, ಅಮೇರಿಕಾದ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪರಿಸರ ಮತ್ತು ಅರಣ್ಯ ವಿಜ್ಞಾವ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ರಾಜಸ್ಥಾನದ ಉದಯಪುರ ವಿಶ್ವವಿದ್ಯಾಲಯದ ಜಾಬ್ನೇರ ಕೃಷಿ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್ ವೆಲ್ತ್ ಇನ್ಸ್ಟಿಟ್ಯೂಟ್ ...

READ MORE

Related Books