ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರ ಲೇಖನ ಸಂಕಲನ ಮುಗಿಲು ಸುರಿದ ಮುತ್ತು. ಲೇಖಕರೇ ಖುದ್ದು ಹೇಳಿರುವಂತೆ, ಇದು ಪುಸ್ತಕ ಪ್ರೀತಿಯ ಲೇಖನಗಳ ಸಂಖಲನ. ನೂರರು ಪುಸ್ತಕಗಳ ನಡುವೆ ನನಗೆ ತುಂಭಾ ಪ್ರಿಯವಾದ ಪುಸ್ತಕಗಳನ್ನು ಓದುವಾಗ ಮಾಡಿಕೊಮಡ ಟಿಪ್ಪಣಿಗಳಿವು. ಅವುಗಳನ್ನು ವಿಶ್ಲೇಷಣಾತ್ಮಕ ದೃಷ್ಟಿಯಿಂದ ನೋಡಿದ ನೋಟವಿದು. ಹಾಗೆ ಪುಸ್ತಕ ಬಿಡುಗಡೆ ಸಂದರ್ಭಗಳಲ್ಲಿ ಮಾಡಿರುವ ಪುಸ್ತಕ ಪರಿಚಯ, ಪತ್ರಿಕೆಗಳಿಗೆ ಬರೆದುಕೊಟ್ಟ ವಿಮರ್ಶೆ, ವಿಚಾರ ಸಂಕಿರಣದ ಸಂದರ್ಭದಲ್ಲಿ ಮಂಡಿಸಿದ ಪುಸ್ತಕಗಳ ಕುರಿತ ಲೇಖನಗಳು ಸೇರಿದಂತೆ ಕೆಲವು ಪುಸ್ತಕಳಿಗೆ ಬರೆದ ಮುನ್ನುಡಿಗಳನ್ನು ಸಂಕಲಿಸಿ, ಇದೀಗ ಓದುಗ ದೊರೆಗಳ ಕೈಸೇರುತ್ತಿವೆ ಎಂದಿದ್ದಾರೆ.
ಕೃತಿಯ ಪರಿವಿಡಿಯಲ್ಲಿ ಎದೆಯ ಅಂಗಳದಲಿ ಚಿತ್ರಿಸಿದ ರಂಗೋಲಿ, ಪ್ರೇಮ ಮಹಲಿನ ಮಜಲಿಗೆ ಗಜಲಿನ ನಿನಾದ, ಸೌಂದರ್ಯ ದಂಗಗಿಸುವಂತೆಮಾಡಿದ ‘ಪ್ರಣೀತೆ’, ಘಮ್ಮನೆ ತೆರೆದುಕೊಳ್ಳುವ ಖಯಾಲಿಯಲ್ಲಿ,‘ಮಹಾಚೇತನ’ ಯಶೋಗಾಥೆ, ಮುಳ್ಳುದಾರಿಯಿಂದ ಮೆಟ್ರೋ ಹಳಿಯತನಕ, ತನ್ಮಯತೆ, ಮೋಹಕತೆ ದಕ್ಕಿಸಿಕೊಂಡ ‘ಬಯಲು’, ಚಿಣ್ಣರ ಲೋಕದ ಚಮತ್ಕಾರಿತ ಸ್ವಗತ, ಮಹಿಳಾ ಲೋಕದ ಧೀಮಂತೆ, ಬುದ್ಧ ಕಾರುಣ್ಯ ದಯಪಾಲಿಸು, ‘ವರದಕ್ಷಿಣೆ’ಯೇ ನಾಟಕದ ಜೀವಾಳ ಸೇರಿದಂತೆ 25 ಶೀರ್ಷಿಕೆಗಳ ಲೇಖನಗಳಿವೆ.
ಕವಿ, ಕತೆಗಾರ ಮಹಿಪಾಲರೆಡ್ಡಿ ಮುನ್ನೂರು ಅವರು ಸೇಡಂನಲ್ಲಿ 1971ರ ನವೆಂಬರ್ 18 ರಂದು ಜನಿಸಿದರು. ಸಾಹಿತ್ಯ, ನಾಟಕ, ಪತ್ರಿಕೋದ್ಯಮ, ಸಿನಿಮಾ, ಚಿತ್ರಕಲೆ ಅವರ ಆಸಕ್ತಿಯ ಕ್ಷೇತ್ರ. ಮೂರು ಕವನ ಸಂಕಲನ, ಒಂದು ಕಥಾ ಸಂಕಲನ, ಐದು ಅಂಕಣ ಬರಹಗಳ ಸಂಕಲನ, 3 ಮಾಧ್ಯಮ ಸಂಬಂಧಿತ ಕೃತಿಗಳು, ಒಂದು ನಾಟಕ, ಒಂದು ಮಕ್ಕಳ ಕವನ ಸಂಕಲನ, ಎರಡು ಚರಿತ್ರೆ, 6 ಸಂಪಾದನೆ ಸೇರಿದಂತೆ 37 ಪುಸ್ತಕಗಳ ಪ್ರಕಟವಾಗಿವೆ. ‘ಲಕ್ಕಿ ನಂಬರ್, ಸಾಕ್ಷಿಕಲ್ಲು, ಜೋಕುಮಾರಸ್ವಾಮಿ, ಅಳಿಯ ದೇವರು, ಸಾಹೇಬರು ಬರುತ್ತಾರೆ’ ಮುಂತಾದ ನಾಟಕಗಳಲ್ಲಿ, ಮೂರು ಧಾರಾವಾಹಿಗಳಲ್ಲಿ , ಐದು ಸಿನಿಮಾ ಗಳಲ್ಲಿ, ದೂರದರ್ಶನ ನಾಟಕಗಳಲ್ಲಿ ಹಾಗೂ ...
READ MORE