ನಾ. ಕಾರಂತ ಪೆರಾಜೆಯವರ ‘ಮಣ್ಣ ಮಿಡಿತ’ ನುಡಿಚಿತ್ರ ಸಂಕಲನವಾಗಿದೆ. ಹಲವಾರು ವಿಚಾರ ವೈವಿಧ್ಯತೆಯನ್ನು ತಿಳಿಸುವ ಈ ಕೃತಿ ಸುತ್ತಮುತ್ತಲಿನ ಪರಿಸರವನ್ನು ಭಿನ್ನವಾಗಿ ಕಟ್ಟಿಕೊಟ್ಟಿದೆ. ಶೀರ್ಷಿಕೆಯೇ ಭಿನ್ನವಾಗಿದ್ದು, ಛಲ ಬಿಡದ ಲೇಖಕರ ಹುಡುಕಾಟ, ದಣಿವರಿಯದ ಮಾಹಿತಿ ಸಂಗ್ರಹ ಮತ್ತು ಓದುಗರ ಆಸಕ್ತಿಯನ್ನು ಕಾಯ್ದುಕೊಳ್ಳುವ ನಿರೂಪಣೆಯು ಇಲ್ಲಿ ಪ್ರಮುಖವಾಗಿದೆ.
ಪತ್ರಕರ್ತರಾಗಿರುವ ನಾ. ಕಾರಂತ ಪೆರಾಜೆ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ ಸುಳ್ಯದ ನಿವಾಸಿ ಅಗಿರುವ ಅವರು ಯಕ್ಷಗಾನದಲ್ಲಿ ವಿಶೇಷ ಅಸಕ್ತಿ ಉಳ್ಳವರು. ನಾ. (ನಾರಾಯಣ) ಕಾರಂತ ಪೆರಾಜೆಯವರು ಪತ್ರಕರ್ತ, ಸಾಹಿತಿ, ಯಕ್ಷಗಾನ ಕಲಾವಿದ, ಕೃಷಿಕ ಮತ್ತು ಚಿಂತಕ. ಅವರು ಕೃಷಿ ಮಾಸಿಕ ’ಅಡಿಕೆ ಪತ್ರಿಕೆ’ಯಲ್ಲಿ ಸಹಾಯಕ ಸಂಪಾದಕರಾಗಿದ್ದಾರೆ. ಕೃಷಿ, ಗ್ರಾಮೀಣ ರಂಗದ ಬಗ್ಗೆ, ಯಕ್ಷಗಾನದ ಬಗ್ಗೆ ಮಾಹಿತಿಪೂರ್ಣವಾಗಿ ಆಕರ್ಷಕವಾಗಿ ಬರೆಯುವ ಕಾರಂತರು 'ನೆಲದ ನಾಡಿ' (ಉದಯವಾಣಿ), ಹೊಸದಿಗಂತದಲ್ಲಿ 'ಮಾಂಬಳ' (ಹೊಸದಿಗಂತ) “ದಧಿಗಿಣತೋ' (ಪ್ರಜಾವಾಣಿ) ಅಂಕಣಗಳನ್ನು ಬರೆಯುತ್ತಿದ್ದಾರೆ. 'ತಳಿತಪಸ್ವಿ', 'ಮಾಂಬಳ', 'ಮನಮಿಣುಕು', 'ಮಣ್ಣಮಿಡಿತ', 'ಮಣ್ಣಮಾಸು', ...
READ MORE