'ಮನದ ಕೂಗು' ಕವಿ ಸ್ಟ್ಯಾನಿ ಲೋಪಿಸ್, ಕಾರ್ಗಲ್ ಅವರ ಕವನ ಸಂಕಲನ. ವಸ್ತು ವೈವಿಧ್ಯತೆಯಿಂದ ಕೂಡಿದ 51 ಕವನಗಳಿವೆ. ಸಾಹಿತಿ ನಾ. ಡಿ’ಸೋಜಾ ಮುನ್ನುಡಿ ಬರೆದು ‘ಇಲ್ಲಿಯ ಹಲವಾರು ಕವಿತೆಗಳು ನಮ್ಮ ಮನಸ್ಸನ್ನು ಸೆಳೆಯುತ್ತವೆ. ಮನದ ಕೂಗು, ಬಂಧು ಮಿತ್ರರು ಮುಪ್ಪು, ಮಾಯವಾದ ಮಂಜು ಮೊದಲಾದ ಕವಿತೆಗಳು ಚೆನ್ನಾಗಿವೆ. ತಮ್ಮ ಬಾವನೆಗಳಿಗೆ ಕವಿತೆಯ ರೂಪ ಆಕಾರ ಸೊಬಗು ನೀಡಬೇಕೆಂಬ ಉತ್ಸಾಹ ಕವಿಗೆ ಇದೆ. ಹಲವೆಡೆಗಳಲ್ಲಿ ಕಾವ್ಯ ತನ್ನ ಸೊಗಸಿನಿಂದ ಹೊರಹೊಮ್ಮಿದೆ’ ಎಂದು ಪ್ರಶಂಸಿಸಿದ್ದಾರೆ.
ಬದುಕಿನ ವಿವಿಧ ಚರ್ಯೆಗಳನ್ನು ಸ್ಪಷ್ಟವಾಗಿ ಗ್ರಹಿಸಿ ಕಾವ್ಯವಾಗಿಸುವ ಕಲೆ ಕವಿಗೆ ಸಿದ್ಧಿಸಿದೆ ಎಂದು ಶಿವಮೊಗ್ಗ ಮಲ್ಟಿ ಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ ನಿರ್ದೇಶಕ ವಂ.ವೀರೇಶ್ ವಿ. ಮೊರಾಸ್ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸ್ಟ್ಯಾನಿ ಲೋಪಿಸ್ ಕಾರ್ಗಲ್- ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್ ನಲ್ಲಿ 11-01-1990ರಲ್ಲಿ ಜನಿಸಿದರು. ತಂದೆ ಜೋಸೆಫ್ ಲೋಪಿಸ್, ತಾಯಿ ಸೌರೀನ್ ಲೋಪಿಸ್. ಪ್ರಾರ್ಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕಾರ್ಗಲ್ ನಲ್ಲಿ, ಪದವಿ ಶಿಕ್ಷಣವನ್ನು ಸಾಗರದಲ್ಲಿ ಪೂರೈಸಿದರು. ಎಂ.ಎ ಹಾಗೂ ಬಿಇಡಿ ಪದವೀಧರರು. ಸಾಗರದ ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿದ್ದಾರೆ. ರಾಜ್ಯ ಮಟ್ಟದ ಯುವಜನ ಮೇಳ ಏಕಪಾತ್ರಾಭಿನಯದಲ್ಲಿ ಪ್ರಥಮಸ್ಥಾನ ಪಡೆದಿರುತ್ತಾರೆ. ಹಲವು ಕಥೆ,ಕವನ, ನಾಟಕಗಳನ್ನು ಬರೆದಿದ್ದಾರೆ. ಅನೇಕ ಕಥೆಗಳು ಭದ್ರಾವತಿ ಆಕಾಶವಾಣಿಯಿಂದ ಪ್ರಸಾರವಾಗಿದೆ.'ಮನದ ಕೂಗು' ಕವನ ಸಂಕಲನ , 'ದುಡುಕಿದ ಜೀವ' ಕಥಾಸಂಕಲನ. 'ಹಾಡು-ಪಾಡು' ಸಾಮಾಜಿಕ ಭಾವಗೀತೆಗಳ ಧ್ವನಿಸುರುಳಿಯೂ ಬಿಡುಗಡೆಯಾಗಿದೆ. ' ...
READ MORE