ಸ್ಟ್ಯಾನಿ ಲೋಪಿಸ್ ಕಾರ್ಗಲ್- ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್ ನಲ್ಲಿ 11-01-1990ರಲ್ಲಿ ಜನಿಸಿದರು. ತಂದೆ ಜೋಸೆಫ್ ಲೋಪಿಸ್, ತಾಯಿ ಸೌರೀನ್ ಲೋಪಿಸ್. ಪ್ರಾರ್ಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕಾರ್ಗಲ್ ನಲ್ಲಿ, ಪದವಿ ಶಿಕ್ಷಣವನ್ನು ಸಾಗರದಲ್ಲಿ ಪೂರೈಸಿದರು. ಎಂ.ಎ ಹಾಗೂ ಬಿಇಡಿ ಪದವೀಧರರು. ಸಾಗರದ ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿದ್ದಾರೆ.
ರಾಜ್ಯ ಮಟ್ಟದ ಯುವಜನ ಮೇಳ ಏಕಪಾತ್ರಾಭಿನಯದಲ್ಲಿ ಪ್ರಥಮಸ್ಥಾನ ಪಡೆದಿರುತ್ತಾರೆ. ಹಲವು ಕಥೆ,ಕವನ, ನಾಟಕಗಳನ್ನು ಬರೆದಿದ್ದಾರೆ. ಅನೇಕ ಕಥೆಗಳು ಭದ್ರಾವತಿ ಆಕಾಶವಾಣಿಯಿಂದ ಪ್ರಸಾರವಾಗಿದೆ.'ಮನದ ಕೂಗು' ಕವನ ಸಂಕಲನ , 'ದುಡುಕಿದ ಜೀವ' ಕಥಾಸಂಕಲನ. 'ಹಾಡು-ಪಾಡು' ಸಾಮಾಜಿಕ ಭಾವಗೀತೆಗಳ ಧ್ವನಿಸುರುಳಿಯೂ ಬಿಡುಗಡೆಯಾಗಿದೆ. ' ಮುಪ್ಪು ' ಕಥೆಯನ್ನು ತಾವೇ ನಿರ್ದೇಶನ, ನಿರ್ಮಾಣ ಮಾಡಿ ಕಿರುಚಿತ್ರದ ಮೂಲಕ ಹೊರ ತಂದಿದ್ದು, ಹಲವು ಪ್ರಶಸ್ತಿಗಳೂ ಲಭಿಸಿವೆ. ಇವರಿಗೆ 2013-14 ರಲ್ಲಿ ಕರ್ನಾಟಕ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ' ಜಿಲ್ಲಾ ವೈಯಕ್ತಿಕ ಯುವ ಪ್ರಶಸ್ತಿ' ನೀಡಿ ಗೌರವಿಸಿದೆ.