ಲೇಖಕ ಸತೀಶ್ ಕುಮಾರ್ ಅಂಡಿಂಜೆ ಹವ್ಯಾಸಿ ಬರಹಗಾರರು. ಅವರ ’ಮಾಧ್ಯಮಲೋಕ’ ಕೃತಿಯು ಸಮಗ್ರ ಲೇಖನಗಳ ಕೃತಿಯಾಗಿದೆ. ಅವರ 250ಕ್ಕೂ ಹೆಚ್ಚು ಲೇಖನ, ನುಡಿಚಿತ್ರ, ಸಣ್ಣಕತೆಗಳು ಕನ್ನಡ, ಇಂಗ್ಲೀಷ್ ಮತ್ತು ತುಳು ಭಾಷೆಯ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿದ್ದೆಲ್ಲವನ್ನೂ ಕೃತಿಯಲ್ಲಿ ಸೇರ್ಪಡೆಯಾಗಿವೆ. ಸಣ್ಣ ಕತೆಗಳು ಮಂಗಳೂರು ಮತ್ತು ಭದ್ರಾವತಿ ಆಕಾಶವಾಣಿ ಕೇಂದ್ರಗಳಿಂದ ಪ್ರಸಾರಗೊಂಡಿದ್ದು, ವಿವಿಧ ಮಾಧ್ಯಮಗಳು ಮತ್ತು ಅವುಗಳ ಕಾರ್ಯ ವೈಖರಿಯನ್ನು ವಿಮರ್ಶಿಸಿ ಬರೆದ ಲೇಖನಗಳನ್ನು ಸಂಗ್ರಹಿಸಿ ’ ಮಾಧ್ಯಮಲೋಕ’ ಕೃತಿ ರಚಿಸಲಾಗಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಲ್ಲದೆ ಸಾಮಾನ್ಯ ಓದುಗರಿಗೂ ಕೂಡ ಉತ್ತಮ ಮಾಹಿತಿ ನೀಡುತ್ತದೆ.
ಲೇಖಕ ಸತೀಶ್ ಕುಮಾರ್ ಅಂಡಿಂಜೆ ಅವರು ಕಳೆದ 22 ವರ್ಷಗಳಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದ ಅಧ್ಯಾಪಕರಾಗಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಿಂದ ಎಂ.ಸಿ.ಜೆ. ಪದವೀಧರರು. ಕುವೆಂಪು ವಿಶ್ವವಿದ್ಯಾಲಯದಿಂದ ಪಿಹೆಚ್‌ಡಿ ಪದವೀಧರರು. . ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥ ಕಾಲೇಜು ಹಾಗೂ ಮಣಿಪಾಲದ ಎಂ.ಪಿ.ಎ. ಕಾಲೇಜುಗಳಲ್ಲಿ ಉಪನ್ಯಾಸಕರಾಗಿದ್ದು, ಕುವೆಂಪು ವಿವಿ, ಕನ್ನಡ ವಿವಿ, ಮಂಗಳೂರು ವಿವಿ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿವಿಗಳ ಪತ್ರಿಕೋದ್ಯಮ ಕೋರ್ಸ್ ಗಳ ಸ್ವಯಂ ಕಲಿಕಾ ಪಠ್ಯಗಳನ್ನು ರಚಿಸಿರುತ್ತಾರೆ. . ಹವ್ಯಾಸಿ ಬರಹಗಾರರಾಗಿದ್ದು, 250ಕ್ಕೂ ಹೆಚ್ಚು ಲೇಖನ, ನುಡಿಚಿತ್ರ, ಸಣ್ಣಕಥೆಗಳು ಕನ್ನಡ, ಇಂಗ್ಲಿಚ್ ಮತ್ತು ತುಳು ಭಾಷೆಗಳಲ್ಲಿ 30ಕ್ಕೂ ಹೆಚ್ಚು ಪತ್ರಿಕೆಗಳು ಮತ್ತು ...
READ MORE