ಕಾವ್ಯವೆಂದರೇನು?

Author : ಸುಮತೀಂದ್ರ ನಾಡಿಗ

Pages 108

₹ 30.00




Year of Publication: 1994
Published by: ಕರ್ನಾಟಕ ಬುಕ್‌ ಏಜನ್ಸಿ
Address: ತುಂಗಾ ಕಾಂಪ್ಲೆಕ್ಸ್‌, ಗಾಂಧಿನಗರ, ಬೆಂಗಳೂರು-
Phone: 2261871

Synopsys

ಹಿರಿಯ ಲೇಖಕ ಸುಮತೀಂದ್ರ ನಾಡಿಗ ಅವರ ಕೃತಿ ʼಕಾವ್ಯವೆಂದರೇನು?ʼ ಈ ಕೃತಿಯ ಮುನ್ನುಡಿಯಲ್ಲಿ ಹಿರಿಯ ಕವಿ ಡಾ. ಜಿ. ಎಸ್.‌ ಶಿವರುದ್ರಪ್ಪ ಅವರು, ಬಹಳ ಜನ ಪದ್ಯ ಬರೆಯುತ್ತಾರೆ. ಆದರೆ ಅದು ಎಷ್ಟೋ ವೇಳೆ ಕಾವ್ಯವಾಗಿರುವುದಿಲ್ಲ. ಹಾಗಾಗಿ ಪದ್ಯ ಬರೆಯಬಲ್ಲ ಮತ್ತು ಕಾವ್ಯದ ಬಗ್ಗೆ ಆಸಕ್ತಿಯುಳ್ಳ ಕೆಲವರಿಗಾದರೂ ಕವಿತೆಯನ್ನು ಬರೆಯುವುದು ಹೇಗೆಂದು ಹೇಳಿಕೊಡಲು ಕನ್ನಡದಲ್ಲೇ ಮೊಟ್ಟ ಮೊದಲ ಒಂದು ಪ್ರಯತ್ನವಾಗಿ ʼಕಾವ್ಯವೆಂದರೇನು?ʼ ಎಂಬ ಕಿರುಕೃತಿಯೊಂದು ಸಕಾಲಿಕವಾಗಿ ದೊರೆತಂತಾಗಿದೆ. ಸುಮತೀಂದ್ರ ನಾಡಿಗರು ತಾವೇ ಸ್ವತಃ ಒಳ್ಳೆಯ ಕವಿಗಳು. ಜೊತೆಗೆ ಅನೇಕ ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಕವಿತೆಯನ್ನು ಪಾಠ ಹೇಳಿರುವ ಮೇಷ್ಟ್ರು. ಕಾವ್ಯವನ್ನು ಕುರಿತು ಈಗಾಗಲೇ ಇರುವ ಸಾಹಿತ್ಯ ಚರ್ಚೆಯ ಪರಂಪರೆಯನ್ನು ಅಧ್ಯಯನದ ಮೂಲಕ ಅರಗಿಸಿಕೊಂಡವರು. ಹೀಗಾಗಿ ಕಾವ್ಯದ ಹಾದಿಯಲ್ಲಿ ಮೊದಲ ಹೆಜ್ಜೆಗಳನ್ನಿಡುತ್ತಿರುವ ತರುಣ ಕವಿಗಳಿಗೆ, ನಾಡಿಗರು ಹೇಳಿದ ಹಲವು ಮೌಲಿಕವಾದ ಮೊದಲ ಪಾಠಗಳು ಇಲ್ಲಿವೆ. ಕವಿ ಎಂದರೇನು ? ಕವಿತೆಯ ಪರಿಕರಗಳು ಯಾವುವು? ಕವಿಯಾಗಲು ಹೊರಟವನು ಮಾಡಿಕೊಳ್ಳಬೇಕಾದ ಪೂರ್ವಸಿದ್ಧತೆಗಳು ಯಾವುವು? ಕವಿಯ ಅನುಭವದ ಸ್ವರೂಪವೇನು? ಕವಿತೆಯೊಂದನ್ನು ಅರ್ಥ ಮಾಡಿಕೊಳ್ಳುವುದು, ಆಸ್ವಾದಿಸುವುದು, ವಿಶ್ಲೇಷಿಸುವುದು ಹೇಗೆ? ಇತ್ಯಾದಿ ಹತ್ತು ಹಲವು ಸಂಗತಿಗಳನ್ನು ನಾಡಿಗರು ತಮ್ಮ ಸ್ವಾನುಭವದ ಮೂಲಮಾನದಲ್ಲಿ, ಅತ್ಯಂತ ಆತ್ಮೀಯವಾಗಿ ಹಾಗೂ ತಿಳಿಯಾಗಿ ನಿರೂಪಿಸಿರುವುದು ಈ ಕೃತಿಯ ವೈಶಿಷ್ಟ್ಯವಾಗಿದೆ ಎಂದಿದ್ಧಾರೆ. ಕೃತಿಯ ಪರಿವಿಡಿಯಲ್ಲಿ ಕವಿ, ಗದ್ಯ, ಪದ್ಯ ಮತ್ತು ಕಾವ್ಯ, ಲಯ, ಛಂದಸ್ಸು, ಭಾವನೆ, ವ್ಯುತ್ಪತ್ತಿ, ಅನಿವಾರ್ಯತೆ, ವಸ್ತು ಪ್ರತಿರೂಪ, ಪ್ರತಿಮೆ, ಕ್ರಮಬದ್ಧತೆ ಮತ್ತು ಸೌಂದರ್ಯ, ಭಾವಾತಿರೇಕ, ಜೀವರೇಸಿಮೆಹುಳು, ಒಂದು ಪದ್ಯದ ಕತೆ, ಎರಡು ವಚನಗಳು, ರಸವೆಂದರೇನು?, ಸಾಮಾಜಿಕ ಪ್ರಜ್ಞೆ ದಲಿತ ಪ್ರಜ್ಞೆ ಇತ್ಯಾದಿ, ಅನುಬಂಧ- ನೆನಪುಗಳು ಸೇರಿದಂತೆ ಒಟ್ಟು 18 ಶೀರ್ಷಿಕೆಗಳಲ್ಲಿ ಕಾವ್ಯವನ್ನು ವಿವರಿಸಲಾಗಿದೆ.

About the Author

ಸುಮತೀಂದ್ರ ನಾಡಿಗ
(04 May 1935 - 07 August 2018)

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕಳಸದವರಾದ ಸುಮತೀಂದ್ರ ನಾಡಿಗರು ಜನಿಸಿದ್ದು 1935ರ ಮೇ 4ರಂದು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಡಾ. ಸುಮತೀಂದ್ರ ನಾಡಿಗ ಕಥೆ, ಕಾವ್ಯ, ವಿಮರ್ಶೆ, ಅನುವಾದ, ಮಕ್ಕಳ ಸಾಹಿತ್ಯ ಪ್ರಕಾರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕೃತಿಗಳು: ಸ್ಥಿತಪ್ರಜ್ಞ, ಗಿಳಿ ಮತ್ತು ದುಂಬಿ, ಕಾರ್ಕೋಟಕ, ಆಯ್ದ ಕಥೆಗಳು (ಕಥಾ ಸಂಕಲನಗಳು), ನಿಮ್ಮ ಪ್ರೇಮಕುಮಾರಿಯ ಜಾತಕ, ಕಪ್ಪುದೇವತೆ, ಉದ್ಘಾಟನೆ, ಭಾವಲೋಕ, ಇಂಪತ್ಯಗೀತೆ, ತಮಾಷೆ ಪದ್ಯಗಳು, ಕುಹೂಗೀತೆ, ನಟರಾಜ ಕಂಡ ಕಾಮನಬಿಲ್ಲು, ಸಮಗ್ರ ಕಾವ್ಯ, ಪಂಚಭೂತಗಳು, ಜಡ ಮತ್ತು ಚೇತನ (ಕವನ ಸಂಗ್ರಹಗಳು), ಅಡಿಗರ ಕಾವ್ಯ, ...

READ MORE

Related Books