About the Author

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕಳಸದವರಾದ ಸುಮತೀಂದ್ರ ನಾಡಿಗರು ಜನಿಸಿದ್ದು 1935ರ ಮೇ 4ರಂದು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಡಾ. ಸುಮತೀಂದ್ರ ನಾಡಿಗ ಕಥೆ, ಕಾವ್ಯ, ವಿಮರ್ಶೆ, ಅನುವಾದ, ಮಕ್ಕಳ ಸಾಹಿತ್ಯ ಪ್ರಕಾರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ.

ಕೃತಿಗಳು: ಸ್ಥಿತಪ್ರಜ್ಞ, ಗಿಳಿ ಮತ್ತು ದುಂಬಿ, ಕಾರ್ಕೋಟಕ, ಆಯ್ದ ಕಥೆಗಳು (ಕಥಾ ಸಂಕಲನಗಳು), ನಿಮ್ಮ ಪ್ರೇಮಕುಮಾರಿಯ ಜಾತಕ, ಕಪ್ಪುದೇವತೆ, ಉದ್ಘಾಟನೆ, ಭಾವಲೋಕ, ಇಂಪತ್ಯಗೀತೆ, ತಮಾಷೆ ಪದ್ಯಗಳು, ಕುಹೂಗೀತೆ, ನಟರಾಜ ಕಂಡ ಕಾಮನಬಿಲ್ಲು, ಸಮಗ್ರ ಕಾವ್ಯ, ಪಂಚಭೂತಗಳು, ಜಡ ಮತ್ತು ಚೇತನ (ಕವನ ಸಂಗ್ರಹಗಳು), ಅಡಿಗರ ಕಾವ್ಯ, ಕಾವ್ಯ ಎಂದರೇನು?, ವಿಮರ್ಶೆಯ ದಾರಿಯಲ್ಲಿ, ಸಖೀಗೀತದಲ್ಲಿ ಋತುವರ್ಣನೆ, ಹೀಗೊಂದು ಸಾಹಿತ್ಯ ಚರಿತ್ರೆ, ಇನ್ನೊಂದು ಸಾಹಿತ್ಯ ಚರಿತ್ರೆ, ನೆಲೆಗಳು (ವಿಮರ್ಶಾ ಲೇಖನಗಳು), ಹನ್ನೊಂದು ಹಂಸಗಳು, ಸಾಹಸ, ಗಾಳಿಪಟ, ಇಲಿ ಮದುವೆ (ಮಕ್ಕಳ ಸಾಹಿತ್ಯ). ಇವಲ್ಲದೆ ಇಂಗ್ಲಿಷ್‌ನಿಂದ ಅನೇಕ ಕತೆ, ಕಾದಂಬರಿ ಮತ್ತು ವಿಮರ್ಶಾ ಕೃತಿಗಳನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಸುಮತೀಂದ್ರ ನಾಡಿಗ

(04 May 1935-07 Aug 2018)