ಕೃಷಿ ವಿಜ್ಞಾನ ವ್ಯಾಸಂಗ ಮಾಡಿ ನಂತರ ಬ್ಯಾಂಕ್ ಉದ್ಯೋಗಿಯಾಗಿದ್ದ ಎಚ್. ದುಂಡಿರಾಜ್ ಅವರು ಬರೆಯುವ ಲೇಖನಗಳು ನಮ್ಮನ್ನು ಹಾಸ್ಯದ ಲೋಕದಲ್ಲಿ ಮುಳುಗಿಸುತ್ತದೆ. ದಾಂಪತ್ಯದ ಸೊಗಸು, ಇತ್ತೀಚೆಗೆ ಭಾರಿ ಚರ್ಚೆಗೆ ಕಾರಣವಾದ ಮೀಟೂ ಅಭಿಯಾನದ ಕುರಿತು ವ್ಯಂಗ್ಯವಾಗಿ ಈ ಕೃತಿಯಲ್ಲಿ ವಿವರಗಳನ್ನು ನೀಡಿದ್ಧಾರೆ. ಹೊಟ್ಟೆಯ ಸುತ್ತ ಒಂದು ಪುಟ್ಟ ಹರಟೆ, ಬಾಡಿ ಹಳೆಯದಾದರೂ ಶರ್ಟೂ ನವನವೀನ ಮೊದಲಾದ ಇಲ್ಲಿರುವ ಲೇಖನಗಳು ಹಾಸ್ಯವನ್ನು ಇನ್ನಷ್ಟು ಹೆಚ್ಚುಮಾಡುತ್ತದೆ.
ಎಚ್. ಡುಂಡಿರಾಜ್, ಕನ್ನಡದ ಹೆಸರಾಂತ ಚುಟುಕು ಕಾವ್ಯ ಸಾಹಿತಿ. ಈವರೆಗೆ ಸುಮಾರು 45 ಪುಸ್ತಕಗಳನ್ನು ಬರೆದಿರುವ ಇವರು, ತಮ್ಮ ಪುಸ್ತಕಗಳಲ್ಲಿ ಚುಟುಕು ಸಾಹಿತ್ಯದ ಕುರಿತಾಗಿನ ಎಳೆಗಳನ್ನು ಸೂಕ್ಷ್ಮವಾಗಿ ಬಿಡಿಸಿಟ್ಟಿದ್ದಾರೆ. ಸಾಹಿತ್ಯ ಮತ್ತು ಹಾಸ್ಯದ ಸಮ್ಮಿಲನ ಇವರ ಕೃತಿಗಳ ವಿಶೇಷತೆ. ಉಡುಪಿ ಜೆಲ್ಲೆಯ ಹಟ್ಟಿಕುದ್ರುವಿನಲ್ಲಿ 18 ಆಗಸ್ಟ್ 1956ರಲ್ಲಿ ಜನಿಸಿದ ಇವರು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿದ್ದಾರೆ. ಸದ್ಯಕ್ಕೆ ಮಂಗಳೂರಿನ ಕಾರ್ಪೋರೇಶನ್ ಬ್ಯಾಂಕ್‍ನ ಸಹಾಯಕ ಮಹಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. 2011ರಲ್ಲಿ ನಡೆದ ಸಂಯುಕ್ತ ಅರಬ್ ಸಂಸ್ಥಾನದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು, ...
READ MORE