‘ಕನ್ನಡ ಕಾವ್ಯ ಸಂಚಯ’ ಈ ಕೃತಿಯನ್ನು ರಂ.ಶ್ರೀ. ಮುಗಳಿ ಅವರು ಸಂಪಾದಿಸಿದ್ದಾರೆ. ಕೃತಿಯಲ್ಲಿ ಮೊದಲ ಭಾಗವಾದ ಹಳಗನ್ನಡ ಕಾವ್ಯ ಶೀರ್ಷಿಕೆಯಡಿ ‘ಶಾಸನ ಪದ್ಯ ಸಂಗ್ರಹ’ ವಿಭಾಗದಲ್ಲಿ ಕಲಿಯುಗ ವಿಪರೀತನ್-ಗುಣ ಮಧುರಾಂಕ- ನಂದಿಸೇನ ಮುನಿ-ಸರಸ್ವತಿ-ಭರತಕ್ಷೇತ್ರ- ಕರ್ಣಾಟಕವೇಶ-ಆದಿಗೌಂಡನ ವರ್ಣನೆ-ಕುವರ ಲಕ್ಷ್ಮನ ವರ್ಣನೆ. ಕವಿರಾಜಮಾರ್ಗ, ಆದಿಪುರಾಣ- ಆದರ್ಶ ಪ್ರಣಯ-ನೀಳಾಂಜನೆಯ ನೃತ್ಯ- ಭರತ- ಬಾಹುಬಲಿ ಸಂಘರ್ಷ, ಪಂಪ ಭಾರತ- ಹಸ್ತಿನಪುರ-ಬನವಾಸಿ-ವಸಂತಮಾಸ-ದ್ಯೂತ ಪ್ರಸಂಗ ದ್ರೌಪದೀ ಮಾನಭಂಗ- ಭೀಷ್ಮಪಟ್ಟ ಪ್ರಸಂಗ- ಕರ್ಣಾವಸಾನ- ದುರ್ಯೋಧನನ ಅಂತ್ಯಪ್ರಸಂಗ, ಅಜಿತ ಪುರಾಣ ಅತ್ತಿಮಬ್ಬೆ-ವೈರಾಗ್ಯ-ತಪಃಪ್ರಯಾಣ-ಪಾರ್ವನ ಪುಯ್ಯಲ್, ಗದಾಯುದ್ಧ- ಭೀಮಸೇನ ಪ್ರತಿಜ್ಞೆ- ಧೃತರಾಷ್ಟ್ರ ವಚನ- ದುರ್ಯೋಧನನ ವಿಲಾಪ- ದುರ್ಯೋಧನನ ಛಲ- ಭೀಮಸೇನಾಡಂಬರ- ಗದಾಯುದ್ಧ- ದುರ್ಯೋಧನವಸಾನ, ಕರ್ಣಾಟಕ ಕಾದಂಬರೀ ಸಂಗ್ರಹ- ಮಹಾಶ್ವೇತೆಯ ಸಂದರ್ಶನ- ಮಹಾಶ್ವೇತೆಯ ವೃತ್ತಾಂತ-ಕಾದಂಬರಿಯ ಪ್ರಥಮ ಸಂದರ್ಶನ. ಪಂಪ ರಾಮಾಯಣ- ಸೀತಾಸ್ವಯಂವರ- ಉಪರಂಭೆಯ ವ್ಯಾಮೋಹ- ಸೀತಾಪಹರಣ-ರಾವಣನ ಪಶ್ಚಾತ್ತಾಪ, ಹರಿಹರನ ಗಿರಿಜಾ ಕಲ್ಯಾಣ- ಬೃಹಸ್ಪತಿ ಕಾಮಸಂದರ್ಭ- ಕಾಮದಹನ- ರತಿವಿಳಾಪವಟು-ವೇಷದ ಶಿವನೊಡನೆ ಪಾರ್ವತಿ, ನೇಮಿಚಂದ್ರನ ಲೀಲಾವತಿ- ಹೇಮಂತವರ್ಣನೆ-ವಸಂತವರ್ಣನೆ, ನೇಮಿಚಂದ್ರನ ಅರ್ಧನೇಮಿ ಪುರಾಣ- ಮಳೆಗಾಲದ ವರ್ಣನೆ-ಕಂಸವಧೆ, ರುದ್ರಭಟ್ಟನ ಜಗನ್ನಾಥ ವಿಜಯ-ಕಂಸನಿಗೆ ಕೃಷ್ಣಭೀತಿ- ವೇಣುರಾಸಕೇಳಿ- ಕೃಷ್ಣನ ಬಾಲಲೀಲೆ, ಜನ್ನನ ಯಶೋಧರ ಚರಿತೆ- ಅಮೃತಮತಿಯ ವ್ಯಾಮೋಹ-ವ್ಯಾಮೋಹದ ಪರಿಣಾಮ, ಜನ್ನ: ಅನಂತನಾಥ ಪುರಾಣ- ಚಂಡಶಾಸನ ಕಥೆ, ಆಂಡಯ್ಯ: ಕಬ್ಬಿಗರ ಕಾವಂ- ಕಾಮನ ಸೈನ್ಯ- ತಪಸ್ವಿಯ ಮುಂದೆ ಕಾಮನ ಶರಣಾಗತಿ, ಷಡಕ್ಷರಿ: ಶಬರಶಂಕರ ವಿಳಾಸಂ- ಕಿರಾತಾರ್ಜುನರ ಸಂವಾದ- ಶಬರನಲ್ಲಿ ಶಿವದರ್ಶನ, ಷಡಕ್ಷರಿ: ರಾಜಶೇಖರ ವಿಳಾಸ- ಪುತ್ರದೋಹದ- ತಿರುಕೊಳವಿನಾಚಿಯ ಶೋಕ ಸಂಕಲಗೊಂಡಿದ್ದರೆ
ನಡುಗನ್ನಡ ಕಾವ್ಯ ವಿಭಾಗದಲ್ಲಿ ವಚನಗಳು- ಅಲ್ಲಮಪ್ರಭು-ಸಕಲೇಶ ಮಾದರಸ- ಬಸವೇಶ್ವರ- ಚೆನ್ನಬಸವೇಶ್ವರ- ಮಹಾದೇವಿಯಕ್ಕ-ಇತರ ವಚನಕಾರರು, ವಚನಗಳು, ಶೂನ್ಯ ಸಂಪಾದನೆ, ಹರಿಹರ:ಬಸವರಾಜದೇವರ ರಗಳೆ, ರಾಘವಾಂಕ: ಸಿದ್ಧರಾಮ ಚರಿತೆ- ಮಲ್ಲಿಕಾರ್ಜುನ ದರ್ಶನ- ಬಿಲ್ಲೇಶ ಬೊಮ್ಮಯ್ಯನ ಉದ್ಧಾರ, ರಾಘವಾಂಕ: ಸಿದ್ಧರಾಮ ಚರಿತೆ- ಮಲ್ಲಿಕಾರ್ಜುನ ದರ್ಶನ- ಬಿಲ್ಲೇಶ ಬೊಮ್ಮಯ್ಯನ ಉದ್ಧಾರ, ಹರಿಶ್ಚಂದ್ರ ಕಾವ್ಯ- ವಸಿಷ್ಠ ವಿಶ್ವಾಮಿತ್ರ ಕಲಹ- ಹರಿಶ್ಚಂದ್ರ- ಹೊಲತಿಯರ ಸಂವಾದ- ವಿಶ್ವಾಮಿತ್ರನಿಗೆ ಹರಿಶ್ಚಂದ್ರನ ವಚನ- ಚಂದ್ರಮತಿಯ ಪಾಡು. ಬಸವ ಪುರಾಣ- ಬಸವೇಶ್ವರನ ಭಕ್ತಿಪ್ರತಿಜ್ಞೆ-ಕೋಳೂರು ಕೊಡಗೂಸಿನ ಕಥೆ, ಕುಮಾರವ್ಯಾಸ ಭಾರತ- ಸಂಭವಪರ್ವ: ಪಾಂಡುವಿನ ಮರಣ: ಸಭಾಪರ್ವ, ದ್ರೌಪದಿಯ ಮಾನಭಂಗ: ವಿರಾಟಪರ್ವ: ಉತ್ತರಕುಮಾರ: ಕರ್ಣಪರ್ವ: ಕರ್ಣಚಾರಿತ್ರ್ಯ, ಪ್ರಭುಲಿಂಗಲೀಲೆ, ಅಲ್ಲಮ-ಸಿದ್ಧರಾಮ ಸಂಮಿಲನ, ನಂಜುಂಡನ ರಾಮನಾಥ ಚರಿತ್ರ- ಕರ್ಣಾಟಕ ವರ್ಣನೆ, ನಂಜುಂಡನ ರಾಮನಾಥ ಚರಿತ್ರ- ಕರ್ಣಾಟಕ ವರ್ಣನೆ, ಪುರಂದರದಾಸ: ಕೀರ್ತನೆಗಳು, ಉಗಾಭೋಗಗಳು, ಕನಕದಾಸ: ಕೀರ್ತನೆಗಳು, ನಿಜಗುಣಶಿವಯೋಗಿಗಳ ಕೀರ್ತನೆಗಳು, ಲಕ್ಷ್ಮೀಶನ ಜೈಮಿನಿ ಭಾರತ, ಚಂಡಿಯ ಕಥೆ- ಸೀತಾಪರಿತ್ಯಾಗ- ಚಂದ್ರಹಾಸ, ರತ್ನಾಕರವರ್ಣಿಯ ಭರತೇಶವೈಭವ- ಪೂರ್ಣ ಜೀವನ ದರ್ಶನ- ಸಂಗೀತವರ್ಣನೆ- ಆತ್ಮಧ್ಯಾನ- ವೀಣಾಲಾಪ- ಪಾರಣೆ- ಭರತ ಬಾಹುಬಲಿ ಸಂದರ್ಭ, ಚೆನ್ನಬಸವ ಪುರಾಣ- ನಾಡವರ್ಣನೆ- ವಸಂತವರ್ಣನೆ, ಮಹಲಿಂಗರಂಗನ ಅನುಭವಾಮೃತ- ತ್ವಂಪದಾರ್ಥ ಶೋಧನೆ, ಸರ್ವಜ್ಞ- ಗುರುಸ್ತುತಿ- ದೈವಸ್ತುತಿ- ಭಕ್ತ-ಜ್ಞಾನಿ-ದಾನಿ- ಕುಲಜಾತಿ ಖಂಡನ-ಲೇಸು ಪದ್ಧತಿ- ನಿಂದಾ ಪದ್ಧತಿ-ನೀತಿ ಪದ್ಧತಿ, ಮುಪ್ಪಿನ ಷಡಕ್ಷರಿ- ಸುಬೋಧಸಾರ, ನೀನೇ ಅಕಳಂಕಗುರು-ಎನ್ನ ಕರೆಯ ಬನ್ನಿ, ಹೊನ್ನಮ್ಮ- ಹದಿಬದೆಯ ಧರ್ಮ- ಪತಿಧರ್ಮ-ಸತಿಧರ್ಮ(ವಿರಹದಲ್ಲಿ), ಹರಿಕಥಾಮೃತ ಸಾರ- ಕರುಣಾಸಂಧಿ- ಸರ್ವಪ್ರತೀಕಸಂಧಿ-ಗೀತಗೋಪಾಲ- ಕೈವಲ್ಯ-ಕಲ್ಪವಲ್ಲರಿ- ಜಗನ್ನಾಥ ದಾಸರ ಕೀರ್ತನೆಗಳು.
ಹೊಸಗನ್ನಡ ಕಾವ್ಯ ವಿಭಾಗದಲ್ಲಿ ಬೆಳೆದ ಭಾರತ ದೇಶ- ಬಾಳಾಚಾರ್ಯ ಸಕ್ರಿ, ಕನ್ನಡ ತಾಯನೋಟ-ಬಿ.ಎಂ.ಶ್ರೀ, ತೆಂಕಣಗಾಳಿಯಾಟ-ಪಂಜೆ ಮಂಗೇಶರಾವ್, ಕೊಳಗುಳದ ಮನವಿ- ಗೋವಿಂದ ಪೈ, ಹೊಸತನವೆ ಬಾಳು-ಡಿ.ವಿ.ಜಿ, ಹಂಬಲು- ಸಾಲಿ ರಾಮಚಂದ್ರರಾಯರು, ಚೆಲುವ ದೇವಿ- ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕುಣಿಯೋಣು ಬಾರ- ದ.ರಾ. ಬೇಂದ್ರೆ, ಹೊಸದಿನ- ಬೆಟಗೇರಿ ಕೃಷ್ಣ ಶರ್ಮ, ಸುಗ್ಗಿ ಬರುತಿದೆ- ಕುವೆಂಪು, ಕಸ್ಮೈದೇವಾಯ-ವಿ. ಸೀತಾರಾಮಯ್ಯ, ನನ್ನ ನಲ್ಲ- ಚೆನ್ನಮಲ್ಲ ಹಲಸಂಗಿ, ಕಹಳೆ-ಕಡೆಂಗೋಡ್ಲು ಶಂಕರಭಟ್ಟ, ಮೂರ್ಛೆ ಬಂದಿತ್ತು- ಅರ್ಗಂ ಲಕ್ಷ್ಮಣರಾಯರು, ರಸಸರಸ್ವತಿ- ಪು.ತಿ. ನರಸಿಂಹಚಾರ್, ನೇತ್ರ ನಟಿಯರು- ತೀ.ನಂ. ಶ್ರೀಕಂಠಯ್ಯ, ಪಡುವಣದೆ ಪಂಚಮರು- ದಿನಕರ ದೇಸಾಯಿ, ರತ್ನನ್ ಪರ್ಪಂಚ- ಜಿ.ಪಿ. ರಾಜರತ್ನಂ, ಊರ್ಣನಾಭಾವತಾರ- ವಿ.ಕೆ. ಗೋಕಾಕ, ವೀಣೆ- ಡಿ.ಎಸ್. ಕರ್ಕಿ, ಕೋರಿಕೆ- ಈಶ್ವರ ಸಣಕಲ್ಲ, ವಿಜಯನಗರದ ಗಿಣಿಗಳು- ಎಸ್.ವಿ. ಪರಮೇಶ್ವರಭಟ್ಟ, ವರುಣ- ಪೇಜಾವರ ಸದಾಶಿವರಾಯರು, ಬರಿಗೊಡಗಳಿಗೆ ಸಮಾಧಾನ- ಕೆ.ಎಸ್. ನರಸಿಂಹಸ್ವಾಮಿ, ಮಣ್ಣಿನ ಮೆರವಣಿಗೆ- ಚೆನ್ನವೀರ ಕಣವಿ, ಜಡೆ- ಜಿ, ಎಸ್. ಶಿವರುದ್ರಪ್ಪ, ಗೊಂದಲಪುರ-ಗೋಪಾಲಕೃಷ್ಣ ಅಡಿಗ, ಫೈಲು- ಗಂಗಾಧರಚಿತ್ತಾಳ, ಅವತಾರ- ವಿ.ಜಿ. ಭಟ್ಟ, ಅವಧೂತ- ಎಸ್.ಆರ್. ಎಕ್ಕುಂಡಿ, ವಿಜ್ಞಾನ ಮಾನವ- ರಾಮಚಂದ್ರ ಕೊಟ್ಟಲಗಿ, ಮಾನಸಕೆ ಮೊರೆ- ಸಿದ್ಧಯ್ಯಪುರಾಣಿಕ, ಗಾಳಿಮರ- ಅಕಬರ ಆಲಿ, ಇಲ್ಲಿ-ಅಲ್ಲಿ- ಆರ್. ಸಿ. ಹಿರೇಮಠ, ಹಿಗ್ಗುತಿದೆ ವಿಶ್ವ- ಜಯದೇವಿತಾಯಿ ಲಿಗಾಡೆ, ಚಿಂತನ- ಕಯ್ಯಾರ ಕಿಇ್ಇಣ್ಣರೈ, ವೈಶಾಖ ಶುದ್ಧ ಪೂರ್ಣಿಮೆ- ರಾಮಚಂದ್ರ ಶರ್ಮ, ಅಗ್ನಿಗಾಥ- ಹೇಮಂತ, ನನ್ನ ನೆರಳು- ಚಂದ್ರಶೇಖರ ಪಾಟೀಲ ಕಾವ್ಯಗಳು ಸಂಕಲನಗೊಂಡಿವೆ.
ಕನ್ನಡ ಸಾಹಿತ್ಯ ಚರಿತ್ರೆಯ ಮೂಲಕ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾದ ರಂಗನಾಥ ಶ್ರೀನಿವಾಸ ಮುಗಳಿ ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರು. 1906ರ ಜುಲೈ 15ರಂದು ಜನಿಸಿದರು. ತಂದೆ ಶ್ರೀನಿವಾಸರಾವ್ ಮತ್ತು ತಾಯಿ ಕಮಲಕ್ಕ. ಬಾಗಲಕೋಟೆ, ಬಿಜಾಪುರಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. (1928) ಎಂ.ಎ. (1930) ಮಾಡಿದರು. 1932ರಲ್ಲಿ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಶಿಕ್ಷಕರಾಗಿ ಸೇರಿದರು. 1933ರಲ್ಲಿ ಸಾಂಗ್ಲಿಯ ವಿಲ್ಲಿಂಗ್ಟನ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ವಿಲ್ಲಿಂಗ್ಟನ್ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ 1966ರಲ್ಲಿ ನಿವೃತ್ತರಾದರು. ಕೆಲವು ಕಾಲ ಸರಕಾರದ ಸಾಹಿತ್ಯ ಸಂಸ್ಕೃತಿ ಇಲಾಖೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ...
READ MORE