'ಕಾಲದ ನೆರಳು’ ಕೃತಿಯು ಶೂದ್ರ ಶ್ರೀನಿವಾಸ್ ಅವರ ಲೇಖನ ಸಂಕಲನವಾಗಿದೆ. ಇಲ್ಲಿನ ವಿಚಾರಗಳು ಬರೀ ಕರ್ನಾಟಕ್ಕೆ ಮೀಸಲಾಗಿಲ್ಲ. ಕನ್ನಡ ಸಾಹಿತ್ಯ ಸಂಸ್ಕೃತಿಗಳಷ್ಟೇ ಮೀಸಲಾಗಿರದೆ ರಾಷ್ಟ್ರ ಜಾಗತಿಕ ಸಾಂಸ್ಕೃತಿಕ ಘಟನೆಗಳವರೆಗೂ ವಿಸ್ತರಿಸಿಕೊಂಡಿವೆ. ಈ ಲೇಖನಗಳಲ್ಲಿ ಅವರು ಉಲ್ಲೇಖಿಸುವ ಸಾಹಿತ್ಯ ತತ್ವಶಾಸ್ತ್ರ, ಚರಿತ್ರೆ, ವಿಜ್ಞಾನ, ಮಾನಸಿಕ, ಧಾರ್ಮಿಕ ಗ್ರಂಥಗಳು, ಪ್ರಸ್ತಾಪಿಸುವ ಲೇಕಕರು, ವಿಶ್ಲೇಷಿಸುವ ಘಟನೆಗಳು ವೈವಿಧ್ಯಮಯವಾದಂತಹವು. ಇಲ್ಲಿನ ಲೇಖನಗಳು ಐದು ಭಾಗಗಳಲ್ಲಿ ಹರಡಿಕೊಂಡಿವೆ; ಭಾಷೆ, ಸಂಸ್ಕೃತಿ, ಪರಂಪರೆ, ಸಾಂಸ್ಕೃತಿಕ ವ್ಯಕ್ತಿತ್ವದ ಸ್ಮೃತಿಗಳು, ಸ್ತ್ರೀ-ಸ್ತ್ರೀವಾದ-ಅಸ್ಮಿತೆ, ಪ್ರಕೃತಿ-ಸಂಸ್ಕೃತಿ-ವಿದ್ಯಮಾನ, ಸಾಹಿತ್ಯ-ಸಂಸ್ಕೃತಿ-ಸಂಗತಿ ಇಲ್ಲಿ ಮುಖ್ಯವಾದವು. ಈ ಐದು ಭಾಗಗಳಲ್ಲಿ ಒಟ್ಟು 67 ಲೇಖನಗಳಿವೆ. ಈ ಎಲ್ಲಾ ಲೇಖನಗಳು ಆಯಾ ಶೀರ್ಷಿಕೆಗೆ ಅನುಗುಣವಾಗಿ ತಮ್ಮ ವಿಚಾರಗಳನ್ನು ಮಾತ್ರ ಮಂಡಿಸದೆ ಎಲ್ಲಾ ಭಾಗದ ವಿಚಾರಗಳೂ ಮುಂದುವರಿಕೆಯಾಗಿ ಬರುತ್ತವೆ. ಎಲ್ಲಾ ಲೇಖನಗಳಲ್ಲಿ ಕನ್ನಡ ಸಂಸ್ಕೃತಿ, ಕರ್ನಾಟಕ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಪರಿಸರವನ್ನು ಕಟ್ಟಿಕೊಡುವುದರ ಜೊತೆಗೆ ಮಾನವೀಯ ಮೌಲ್ಯಗಳ ಶೋಧನೆ ಮತ್ತು ಮನುಷ್ಯರ ಸೌಹಾರ್ದಯುತ ಸಂಬಂಧಗಳ ಬಗೆಗಿನ ಚಿಂತನೆಗಳಿವೆ.
ಸೂಕ್ಷ್ಮ ಸಂವೇದನೆಯ ಕವಿ ಶೂದ್ರ ಶ್ರೀನಿವಾಸ್ ಅವರು ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕು ಮುತ್ತಾನಲ್ಲೂರು ಗ್ರಾಮದಲ್ಲಿ. ಈಗ ಬೆಂಗಳೂರು ವಾಸಿ. 1973ರಲ್ಲಿ ಶೂದ್ರ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿ ಅನೇಕ ವರ್ಷಗಳ ಕಾಲ ನಡೆಸಿದರು. 1996ರಲ್ಲಿ ಸಲ್ಲಾಪ ವಾರಪತ್ರಿಕೆ ಪ್ರಾರಂಭಿಸಿ ಒಂದು ವರ್ಷ ನಡೆಸಿದರು. 2002ರಲ್ಲಿ 'ನೆಲದ ಮಾತು' ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಶೂದ್ರ ಶ್ರೀನಿವಾಸ ಸಮಾಜವಾದಿ ರಾಜಕೀಯ ಚಿಂತನೆಯ ವ್ಯಕ್ತಿ. ಅವರು 1975-76ರಲ್ಲಿ 'ತುರ್ತು ಪರಿಸ್ಥಿತಿ'ಯಲ್ಲಿ ಎರಡು ಬಾರಿ ಬಂಧನ ಮತ್ತು ಸೆರೆಮನೆ ವಾಸ ಕಂಡವರು. 1976ರಲ್ಲಿ ಕೇರಳದ ಕೊಚ್ಚಿನ್‌ನಲ್ಲಿ ನಡೆದ ರಾಷ್ಟ್ರೀಯ ತುರ್ತು ...
READ MORE