‘ಇದೇನು ಕಥೆ’ ಲೇಖಕ ಬಸವಪ್ರಭು ಪಾಟೀಲರ ಲೇಖನ ಸಂಕಲನ. ಡಾ. ಬಸವಪ್ರಭು ಪಾಟೀಲರು ವೃತ್ತಿಯಿಂದ ವೈದ್ಯರಾಗಿ ದೈಹಿಕ ಆರೋಗ್ಯದ ಉಸ್ತುವಾರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಆರೋಗ್ಯವಂತ ದೇಹದಲ್ಲಿ ಒಂದು ಆರೋಗ್ಯಪೂರ್ಣ ಬುದ್ಧಿ ಇರುವದೆನ್ನುವದು ಪುರಾತನ ವಾಣಿ, ಪ್ರವೃತ್ತಿಯಿಂದ ಕವಿಗಳಾಗಿ ಮನವನ್ನು ಮಾನವತೆಯತ್ತ ತಿರುಗಿಸುವ ಪ್ರಯತ್ನ ಇವರದು. ವೈಚಾರಿಕ ಲೇಖನಗಳಿಂದ ಮಾನಸಿಕ ಆರೋಗ್ಯವನ್ನು, ಪ್ರಶ್ನೆಗಳನ್ನು ಹಾಕಿ, ದೈನಂದಿನ ಜಂಜಡಗಳ ಆಚೆಯೂ ಒಂದು ಲೋಕವಿದೆ ಎನ್ನುವ ಪ್ರಜ್ಞೆ ಮೂಡಿಸಿ, ವ್ಯಕ್ತಿಗಳ ದೈಹಿಕ, ಮಾನಸಿಕ ಆರೋಗ್ಯಗಳನ್ನು ಕಾಪಾಡಿ ತನ್ಮೂಲಕ ಆರೋಗ್ಯಪೂರ್ಣ ಸಮಾಜ ಕಟ್ಟುವ ಕಳಕಳಿ ಇಲ್ಲಿದೆ. ಇಲ್ಲಿನ ಲೇಖನಗಳಲ್ಲಿ ಅದಿಲ್ಲ, ಇದಿಲ್ಲ; ಅದೇಕೆ ? ಹೀಗೇಕೆ? ಎನ್ನುವ ನೇತ್ಯಾತ್ಮಕ ಪ್ರಶ್ನೆಗಳಷ್ಟೇ ಇಲ್ಲ. ಗುಣಾತ್ಮಕ ಅಂಶಗಳು ಬಹಳ ಇವೆ.
ಡಾ. ಬಸವಪ್ರಭು ಪಾಟೀಲರು ವೃತ್ತಿಯಿಂದ ವೈದ್ಯರು, ಪ್ರವೃತ್ತಿಯಿಂದ ಸಾಹಿತಿಗಳು, ಶರಣ ಜೀವನವನ್ನು ಅಳವಡಿಸಿಕೊಂಡವರು. ಬೆಟ್ಟದೂರದಂತಹ ಊರಲ್ಲಿ ಹುಟ್ಟಿ ಮನೆಯ ಕಲೆ-ಸಾಹಿತ್ಯ-ಸಂಸ್ಕೃತಿ ಸಂಗಮದ ಪರಿಸರದಲ್ಲಿ ಬೆಳೆದವರು. ಎಂ.ಬಿ. ಬಿ.ಎಸ್, ಎಫ್, ಸಿ. ಜಿ. ಪಿ., ಡಿ.ಎಫ್. ಎಚ್. ಪದವಿಯನ್ನು ವೈದ್ಯಕೀಯದಲ್ಲಿ ಪಡೆದರು. ರಾಯಚೂರು ಜಿಲ್ಲೆಯ ಮಾನವಿಯಲ್ಲಿ ಕಲ್ಯಾಣ ವೈದ್ಯಾಲಯ ಸ್ಥಾಪಿಸಿ ವೈದ್ಯರಾಗಿ ಜನಪರ ಸೇವೆ ಸಲ್ಲಿಸಿದ್ದಾರೆ. ಇವರು ಕವಿಯಾಗಿ, ವೈಚಾರಿಕ ಸಾಹಿತಿಯಾಗಿದ್ದರಿಂದ ಮಾತನಾಡಿ ಹೆಣಗಳೇ, ಕವನ ಸಂಕಲನ, ಇದೇನು ಕತೆ, ವಿಚಾರ ಲೇಖನಗಳ ಸಂಗ್ರಹ ಹಾಗೂ ನವ ಸಾಕ್ಷರಿಗಾಗಿ ಪ್ರಥಮ ಚಿಕಿತ್ಸೆ ಕೃತಿ ಪ್ರಕಟಿಸಿದ್ದಾರೆ. ಪ್ರಪಂಚ, ವಿಶ್ವಕಲ್ಯಾಣ, ಸಂಕ್ರಮಣ, ...
READ MORE