ಜಾತಿ ಮತ ಧರ್ಮ ನಿರಪೇಕ್ಷವಾದ ಮಾನವೀಯತೆ ಅಸ್ಥಿತ್ವ ಮತ್ತು ಜೀವಪರ ಕಾಳಜಿಯನ್ನು ಮೂಲದ್ರವ್ಯವಾಗಿರಿಸಿಕೊಂಡ ಲೇಖನಗಳ ಸಂಗ್ರಹವಿದು. ತಮಂಧದ ಕೇಡು ಕಳೆದು ಬೆಳಕಿನ ಬೆಳೆಯನ್ನು ಬೆಳೆಯುವ ಆಸೆಯನ್ನು ಹೊತ್ತ 30 ಲೇಖನಗಳು ನಾಡಿನ ಹೆಸರಾಂತ ಪತ್ರಿಕೆಯಲ್ಲಿ ಬೆಳಕು ಕಂಡಿವೆ. ಗಣೇಶ ಅಮೀನಗಡ ಅವರ ಮುನ್ನುಡಿ, ಅಲ್ಲಾಗಿರಿರಾಜ್ ಅವರ ಬೆನ್ನುಡಿಯಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಮಾನವೀಯ ಸಂಬಂಧಗಳು ಫಲಿಸದೇ ಹೋದಲ್ಲಿ ಒದಗುವ ಹತಾಸೆ, ನೋವು,ಭಯ, ನೋವು ಸಂಕಟಗಳಿಂದ ದೈನಂದಿನ ಬದುಕು ಸೊರಗುತ್ತಿದೆ ಎಂಬ ಸತ್ಯದೊಂದಿಗೆ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಇಲ್ಲಿನ ಲೇಖನಗಳು ಪ್ರಯತ್ನಿಸುತ್ತವೆ.
ಮೂಲತಃ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಬೇನಾಳ ಗ್ರಾಮದವರಾದ ಬರಹಗಾರ ಮಹಾದೇವ ಬಸರಕೋಡ ಅವರು ಜನಿಸಿದ್ದು 1972 ಜೂನ್ 14ರಂದು. ನಿಡಗುಂದಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಇಲಕಲ್ಲಿನ ಎಸ್.ಆರ್. ಕಂಠಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್ ಹಾಗೂ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಕನ್ನಡ ಸಾಹಿತ್ಯ ಆಸಕ್ತಿ ಕ್ಷೇತ್ರ. ಮಹಾದೇವ ಅವರ ಪ್ರಮುಖ ಕೃತಿಗಳೆಂದರೆ ಬದುಕು ಬೆಳಕು, ತಮಂಧ ಘನ ಕಳೆದು (ಕವನ ಸಂಕಲನ), ಒಡಲುಗೊಂಡವ (ವಚನ ಸಾಹಿತ್ಯ), ಹಸಿವೆಂಬ ಹೆಬ್ಬಾವು, ವರ್ತಮಾನದಲ್ಲಿ ನಿಂತು ...
READ MORE