ಭಾಷೆ ಹಾಗೂ ಗಡಿಯ ವಿವಾದ ಇರುವ ಬೆಳಗಾವಿಯವರಾದ ಲತಾ ಗುತ್ತಿಯವರು ಜಗತ್ತಿನ ಹಲವು ಹತ್ತು ದೇಶಗಳನ್ನು ಸುತ್ತಾಡಿದವರು. ಲತಾ ಅವರು ವಿದೇಶಗಳಲ್ಲಿ ಸಂಚರಿಸಿ ತಮ್ಮ ಪರಿಚಿತವಲ್ಲದ ಇನ್ನೊಂದು ಮುಖದ ಪರಿಚಯವನ್ನು ಪಡೆದಿದ್ದಾರೆ. ದೇಹ ಮತ್ತು ಮನಸ್ಸು ಹೊಸ ಪರಿಸರವನ್ನು ಅನುಭವಿಸುವಾಗ ಅವರ ಕವಿ ಕಣ್ಣು ಕ್ಯಾಮರಾದಂತೆ ಮುಖ್ಯ ಭಾಗಗಳನ್ನು ಸೆರೆ ಹಿಡಿದು ಕನ್ನಡದ ಓದುಗರಿಗೆ ಲಭ್ಯವಾಗುವಂತೆ ಮಾಡಿದ್ದಾರೆ. ಹಾಲೆಂಡಿನ ನಿಸರ್ಗ, ಆಲ್ಫ್ ಪರ್ವತಶ್ರೇಣಿ ಮತ್ತು ಜಿನೀವಾ ಸರೋವರ, ಪ್ಯಾರಿ ನಗರ ಕವಿತೆಗಳು ನಮ್ಮನ್ನು ಅವರೊಂದಿಗೆ ವಿದೇಶ ಪ್ರವಾಸ ಮಾಡಿಸುತ್ತವೆ.
ನೆದರ್ಲ್ಯಾಂಡಿನ ಹಳ್ಳಿ ಹೊಲಗದ್ದೆಗಳ ಕಾಲುವೆಗಳಲ್ಲಿ ಹರಿಯುವ ನೀರಿನ ನಿನಾದದಲ್ಲಿ ನಮ್ಮನ್ನು ಕರೆದುಕೊಂಡು ಹೋಗುತ್ತವೆ. ತಾವು ಆ ಮೊದಲು ವೀಕ್ಷಿಸಿದ ಕ್ಯಾಬರೆ ಮತ್ತು ರಾಕ್ ಅಂಡ್ ರೋಲ್ಗಳಿಗಿಂತ ಆಕರ್ಷಣೀಯವಾಗಿತ್ತು ಎನ್ನುವ ಮೂಲಕ ತಮ್ಮ ಮನದಾಳದ ಬೇರುಗಳು ಇರುವುದೆಲ್ಲಿ ಎಂಬುದನ್ನು ತೋರಿಸುತ್ತಾರೆ. ಇವರು ತಮ್ಮ ಕಾವ್ಯಭಾಷೆಯಾಗಿ ಸಾಮಾನ್ಯ ಬರವಣಿಗೆಯ ಕನ್ನಡವನ್ನು ಬಳಸಿರುವರಾದರೂ ಅಲ್ಲೊಂದು ಇಲ್ಲೊಂದು ಉತ್ತರ ಕರ್ನಾಟಕದ ಶೈಲಿಯಲ್ಲಿ ರಚನೆಯಾಗಿವೆ. ಭಾಷೆಯ ಸೊಗಸು ನಮ್ಮನ್ನು ಎಷ್ಟರಮಟ್ಟಿಗೆ ಹಿಡಿದಿಡುತ್ತದೆಯೆಂದರೆ ಕವಿತೆಯನ್ನು ಒಮ್ಮೆ ಓದಿ ಮುಗಿಸಿದ ತರುವಾಯ ಮುಂದಿನ ಪುಟಕ್ಕೆ ಹಾಯದೆ ಮತ್ತೊಮ್ಮೆ ಆ ಕವಿತೆಗಳನ್ನು ಓದುವಂತೆ ಒತ್ತಾಯಿಸುತ್ತವೆ.
ಮೂಲತಃ ಬೆಳಗಾವಿಯವರಾದ ಡಾ. ಲತಾ ಗುತ್ತಿ ಅವರು ತಮ್ಮ ಪ್ರವಾಸ ಕಥನ ಹಾಗೂ ಕವಿತೆಗಳ ಮೂಲಕ ಚಿರಪರಿಚಿತರಿದ್ದಾರೆ. ಲತಾ ಅವರು ಜನಿಸಿದ್ದು 1953ರ ಆಗಸ್ಟ್ 12ರಂದು. ಬೆಂಗಳೂರು ಕಂಪ್ಯೂಟರ್ ಟೆಕ್ನಾಲಜಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ ನಾಗನಗೌಡ, ತಾಯಿ -ಶಾಂತಾದೇವಿ ಪಾಟೀಲ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಿಎಚ್.ಡಿ. ಪದವಿ ಪಡೆದಿರುವ ಅವರು ಮೈಸೂರು ವಿಶ್ವವಿದ್ಯಾಲಯಿಂದ ಇಂಗ್ಲಿಷಿನಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಯುರೋನಾಡಿನಲ್ಲಿ (1993), ನಾ ಕಂಡಂತೆ ಅರೇಬಿಯಾ (1995), ಅಂಡಮಾನಿನ ಎಳೆಯನು ಹಿಡಿದು (2013), ಚಿರಾಪುಂಜಿಯವರೆಗೆ (2017) ಅವರ ಪ್ರವಾಸ ಕಥನಗಳಾದರೆ ಹೆಜ್ಜೆ (2004), ಕರಿನೀರು (2015) ಕಾದಂಬರಿಗಳು. “ಪ್ರವಾಸ ಸಾಹಿತ್ಯ ...
READ MORE