ದೇವರಿಗೂ ಬೀಗ

Author : ನಾಮದೇವ ಕಾಗದಗಾರ

Pages 158

₹ 150.00




Year of Publication: 2020
Published by: ಧನ್ಯ ಪ್ರಕಾಶನ
Address: ಡಾ. ನಿಂಬಣ್ಣನವರ ಆಸ್ಪತ್ರೆ ಎದುರು, ಕೆ.ಸಿ.ರಾಣಿ ರಸ್ತೆ, ಗದಗ
Phone: 919448357024

Synopsys

ದೇವರಿಗೂ ಬೀಗ-ಲೇಖಕ ನಾಮದೇವ ಕಾಗದಗಾರ ಅವರ ಪತ್ರಿಕಾ ಲೇಖನಗಳ ಸಂಗ್ರಹ ಕೃತಿ. ಜೀವನದ ಶ್ರಮಿಕರ ಬದುಕು ಬವಣೆ, ಮರೆಯಾದ ವಿಶಿಷ್ಟ ಸಂಸ್ಕತಿ, ಆಚರಣೆಗಳು, ಕೃಷಿ, ಪರಿಸರ, ಜನರ ಬದುಕಿನ ಸುತ್ತ ಹೆಣೆದಿರುವ ಸುಮಾರು 39 ಲೇಖನಗಳಿವೆ. ಮಾನವೀಯ ಪ್ರೀತಿ , ಕಂಬಳಿ ನೇಕಾರಿಕೆ , ದೊಡ್ಡ ದೊಡ್ಡ ಕಂಪನಿಗಳ ವಿಭಿನ್ನವಾದ ಶಾಲು, ರಗ್ಗುಗಳ ಭರಾಟೆಯಲ್ಲಿ ದೇಸೀಯ ಕಂಬಳಿ ಮರೆಯಾಗುತ್ತಿವೆ. ಹೀಗಾಗಿ, ಕುಲಕಸಬುಗಳ ಬಗ್ಗೆ ಚಿಂತಿಸುವ ಅಗತ್ಯವನ್ನು ಇಲ್ಲಿಯ ಲೇಖನಗಳು ಎಚ್ಚರಿಸುತ್ತವೆ. 

`ಬಾತುಕೋಳಿ ಬೆನ್ನಹತ್ತಿ ಬದುಕುವವರ ಬದುಕಿನ ವೈಶಿಷ್ಟತೆ, `ಜಾನುವಾರು ಪಾದರಕ್ಷೆ ’, ಸೃಜನಶೀಲ ಆಯ್ಕೆಗಳನ್ನು ವರ್ತಮಾನಕ್ಕೆ ಜೋಡಿಸಿ, ವರ್ತಮಾನದ ಬಿಕ್ಕಟ್ಟುಗಳಿಗೆ ಪರಿಹಾರದ ರೂಪದಲ್ಲಿ ತಮ್ಮ ಬರಹಗಳನ್ನು ವಿಸ್ತರಿಸಿ ಕೊಂಡಿದ್ದಾರೆ. ದೇವರನ್ನು ಗಡಿಪಾರು ಮಾಡುವ ಪರಂಪರೆ ಇರುವ ಕುರಿತ ಮತ್ತೊಂದು ವಿಶಿಷ್ಟ ಲೇಖನ `ದೇವರಿಗೇ ಗಡಿಪಾರು' ಇದೆ. 

About the Author

ನಾಮದೇವ ಕಾಗದಗಾರ
(14 May 1976)

ನಾಮದೇವ ಕಾಗದಗಾರ ಅವರು ಚಿತ್ರಕಾರರು. ಹವ್ಯಾಸಿ ಪತ್ರಕರ್ತರು. ವನ್ಯಜೀವಿ ಛಾಯಾಗ್ರಾಹಕ ಹಾಗೂ ವ್ಯಂಗ್ಯಚಿತ್ರಕಾರರು. ಮೂಲತಃ  ಹಾವೇರಿ ಜಿಲ್ಕೆಯ ( ಜನನ: 14-05-1976) ರಾಣೆಬೆನ್ನೂರು ನವರು. ಫೈನ್ ಆರ್ಟ್ಸ್ ಪದವೀಧರರು. ಸದ್ಯ, ರಾಣೆಬೆನ್ನೂರಿನ ಖಾಸಗಿ ಕಾಲೇಜಿನಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  10 ಸಾವಿರಕ್ಕೂ ಹೆಚ್ಚು ಇವರ ವ್ಯಂಗ್ಯಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಚಿತ್ರಕಲೆ, ವ್ಯಂಗ್ಯಚಿತ್ರ ಹಾಗೂ ವನ್ಯಜೀವಿ ಛಾಯಾಗ್ರಹಣಕ್ಕೆ ಸೇರಿ 50 ಕ್ಕೂ ಹೆಚ್ಚು ರಾಷ್ಟ್ರೀಯ, ಅಂತಾರಾಷ್ಟ್ರೀಯ ಬಹುಮಾನಗಳು ಲಭಿಸಿವೆ. ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತ ಸಂಘದಿಂದ 2018 ನೇ ಸಾಲಿನ ಕೆಯುಡಬ್ಲ್ಯು ಜೆ ಪ್ರಶಸ್ತಿ ದೊರೆತಿದೆ.  20 ಅಡಿ ಉದ್ದದ ಕ್ಯಾನ್ ...

READ MORE

Related Books