ನಾಮದೇವ ಕಾಗದಗಾರ ಅವರು ಚಿತ್ರಕಾರರು. ಹವ್ಯಾಸಿ ಪತ್ರಕರ್ತರು. ವನ್ಯಜೀವಿ ಛಾಯಾಗ್ರಾಹಕ ಹಾಗೂ ವ್ಯಂಗ್ಯಚಿತ್ರಕಾರರು. ಮೂಲತಃ ಹಾವೇರಿ ಜಿಲ್ಕೆಯ ( ಜನನ: 14-05-1976) ರಾಣೆಬೆನ್ನೂರು ನವರು. ಫೈನ್ ಆರ್ಟ್ಸ್ ಪದವೀಧರರು. ಸದ್ಯ, ರಾಣೆಬೆನ್ನೂರಿನ ಖಾಸಗಿ ಕಾಲೇಜಿನಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
10 ಸಾವಿರಕ್ಕೂ ಹೆಚ್ಚು ಇವರ ವ್ಯಂಗ್ಯಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಚಿತ್ರಕಲೆ, ವ್ಯಂಗ್ಯಚಿತ್ರ ಹಾಗೂ ವನ್ಯಜೀವಿ ಛಾಯಾಗ್ರಹಣಕ್ಕೆ ಸೇರಿ 50 ಕ್ಕೂ ಹೆಚ್ಚು ರಾಷ್ಟ್ರೀಯ, ಅಂತಾರಾಷ್ಟ್ರೀಯ ಬಹುಮಾನಗಳು ಲಭಿಸಿವೆ. ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತ ಸಂಘದಿಂದ 2018 ನೇ ಸಾಲಿನ ಕೆಯುಡಬ್ಲ್ಯು ಜೆ ಪ್ರಶಸ್ತಿ ದೊರೆತಿದೆ.
20 ಅಡಿ ಉದ್ದದ ಕ್ಯಾನ್ ವಾಸ್ ಮೇಲೆ ಪೆನ್ನುಗಳಿಂದ ಗೀಚಿದ ಚಿತ್ರಕ್ಕೆ 2017-2018 ಸಾಲಿನಲ್ಲಿ ‘ಇನ್ ಕ್ರೇಡಿಬಲ್ ಬುಕ್ ಆಫ್ ರಿಕಾರ್ಡ್’ ವಿಶ್ಖದಾಖಲೆಗೆ ಅಯ್ಕೆ ಯಾಗಿದ್ದಾರೆ. ‘ದೇವರಿಗೂ ಬೀಗ" ಎಂಬುದು ಅವರ ಲೇಖನಗಳ ಕೃತಿ.