ಚಿಂತನ ದೀಪ್ತಿ ಬಿ.ಎನ್.ಗೋವಿಂದ ರಾವ್ ಅವರ ಲೇಖನಗಳ ಸಂಗ್ರಹವಾಗಿದೆ. ಲೇಖನಗಳ ಬಗ್ಗೆ ಹೇಳುವುದಾದರೆ ಇಲ್ಲಿ ಯಾವುದೂ ಒಂದು ವಿಷಯಕ್ಕೆ ಸಂಬಂಧಿಸಿಲ್ಲ. ಪ್ರತಿಯೊಂದು ಒಂದೊಂದು ಬೇರೆ ಬೇರೆ ವಿಷಯಗಳನ್ನು ಕುರಿತು ಹೇಳಿದ್ದಾಗಿದೆ. ವಿವಿಧ ಪುಷ್ಪಗಳನ್ನು ಆಯ್ದು ಹಾರವನ್ನು ಮಾಡುವ ಕೆಲಸ ನನ್ನದಾಗಿದೆ. ಸಹೃದಯರ ಓದಿ ನನ್ನನ್ನು ಪ್ರೋತ್ಸಾಹಿಸಿದರೆ ಸಾಕು, ಈ ಸಂಗ್ರಹದಲ್ಲಿನ ಲೇಖನಗಳಲ್ಲಿ ನನ್ನ ಸ್ವಂತದ್ದು ಎನಿಸಿ ಕೊಂಡಿರುವುದು ತೀರಾ ಸ್ವಲ್ಪ. ನಾನು ಪತ್ರಿಕೆಗಳಲ್ಲಿ ಓದಿದ, ನೋಡಿದ ವಿಷಯಗಳನ್ನು ನನ್ನ ಬುದ್ಧಿ ಸಾಮರ್ಥಕ್ಕೆ ತಕ್ಕಂತೆ ಸಂಗ್ರಹಿಸಿ ಅದಕ್ಕೊಂದು ರೂಪ ಕೊಡುವ ಕೆಲಸ ಮಾಡಿದ್ದೇನೆ ಎಂದು ಲೇಖಕರು ಪುಸ್ತಕದ ಬೆನ್ನುಡಿ ಯಲ್ಲಿ ತಿಳಿಸಿದ್ದಾರೆ.
ಬಿ.ಎನ್. ಗೋವಿಂದರಾವ್ ಅವರು ಮೂಲತಃ ಭದ್ರಾವತಿ ತಾಲೂಕಿನವರು. ಪ್ರಸ್ತುತ ಹೊಸದುರ್ಗದಲ್ಲಿದ್ದಾರೆ. ಕನ್ನಡದಲ್ಲಿ ಎಂ.ಎ ಮಾಡಿದ್ದಾರೆ. 10 ವರ್ಷಗಳ ಕಾಲ ಪ್ರೌಢಶಾಲೆಯ ಹಿರಿಯ ಉಪಾದ್ಯಾಯರಾಗಿ, 27 ವರ್ಷಗಳ ಕಾಲ ಚಿತ್ರದುರ್ಗ ಜಿಲ್ಲೆಯಲ್ಲಿ ಕಾಲೇಜು ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. "ಎಲ್ಲ ಮರೆತಿರುವಾಗ" ಸಣ್ಣ ಕತೆಗಳ ಸಂಗ್ರಹ ಮೊದಲ ಕೃತಿ. ಮತ್ತೊಂದು ಕೃತಿ ಚಿಂತನ ದೀಪ್ತಿ. ...
READ MORE