ಬಿ.ಎನ್. ಗೋವಿಂದರಾವ್ ಅವರು ಮೂಲತಃ ಭದ್ರಾವತಿ ತಾಲೂಕಿನವರು. ಪ್ರಸ್ತುತ ಹೊಸದುರ್ಗದಲ್ಲಿದ್ದಾರೆ. ಕನ್ನಡದಲ್ಲಿ ಎಂ.ಎ ಮಾಡಿದ್ದಾರೆ. 10 ವರ್ಷಗಳ ಕಾಲ ಪ್ರೌಢಶಾಲೆಯ ಹಿರಿಯ ಉಪಾದ್ಯಾಯರಾಗಿ, 27 ವರ್ಷಗಳ ಕಾಲ ಚಿತ್ರದುರ್ಗ ಜಿಲ್ಲೆಯಲ್ಲಿ ಕಾಲೇಜು ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. "ಎಲ್ಲ ಮರೆತಿರುವಾಗ" ಸಣ್ಣ ಕತೆಗಳ ಸಂಗ್ರಹ ಮೊದಲ ಕೃತಿ. ಮತ್ತೊಂದು ಕೃತಿ ಚಿಂತನ ದೀಪ್ತಿ.