ಬುದ್ಧ ಮತ್ತು ಬೌದ್ಧತಾತ್ವಿಕತೆಯನ್ನು ಕುರಿತಾದ ವಾಚಿಕೆಯೊಂದರ ಅಗತ್ಯ ಕನ್ನಡದಲ್ಲಿ ಬಹಳ ಕಾಲದಿಂದ ಇತ್ತು. ಇದೀಗ ಅದು ಈಡೇರಿದೆ. ಬುದ್ಧನಡೆಯ ಏಳನೆಯ ಪುಸ್ತಕ ಇದು. ಓದುಗರಿಗೆ ಹೊರೆಯಾಗದಂತೆ ದರ್ಶನವೊಂದನ್ನು ಅವರ ಮುಂದಿಡುವುದು ಸರಳ ಸಂಗತಿ ಅಲ್ಲ. ಹೊಸ ಪೀಳಿಗೆಯ ಕನ್ನಡಿಗರು ಅನಗತ್ಯವಾದುದನ್ನು ನಿಷ್ಠುರವಾಗಿ ಪಕ್ಕಕ್ಕೆ ಸಲಿಸಬಲ್ಲ ವಿವೇಕಿಗಳು. ಅವರು ಈ ಹೊತ್ತಿಗೆ ಪ್ರಸ್ತುತವಾದುದನ್ನು ಮಾತ್ರ ಹೆಕ್ಕಿ ತೆಗೆದುಕೊಳ್ಳುವ ಸೂಕ್ಷ್ಮಮತಿಗಳು. ಈ ವಾಚಿಕೆ ಅವರ ಈ ಎಲ್ಲ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡಿದೆ. ಬುದ್ಧದರ್ಶನವನ್ನು ಕುಲತಾದ ವ್ಯಾಖ್ಯಾನದ ಒಂದು ಹೊಸ ಮಾರ್ಗ ಇದೀಗ ಕನ್ನಡದಲ್ಲಿ ತೆರೆದಂತಾಗಿದೆ
ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ...
READ MORE