About the Author

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ  ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ಇವರ ಅನುವಾದಿತ ’ ಸರಹಪಾದ’ ಕೃತಿಗೆ ಲಭಿಸಿರುತ್ತದೆ.   

ಕೃತಿಗಳು: ಕನ್ನಡ ಕಾವ್ಯಮೀಮಾಂಸೆ, ನಾಗಾರ್ಜುನನ ಮೂಲಮಧ್ಯಮಕಕಾರಿಕಾ, ನಾಗಾರ್ಜುನನ ನುಡಿ ಕತೆಗಳು,ನಾಗಾರ್ಜುನ ಅಲ್ಲಮಪ್ರಭು, ಸರಹಪಾದ, ನಾಗರ್ಜುನನ ಮಧ್ಯಮವರ್ಗ, ಬುದ್ಧನೆಂಬ ಜ್ಞಾನಪೂರ್ಣ ಜಗಂಜ್ಯೋತಿ, ಬುದ್ಧ ಗುರುವಿನ ಮಧ್ಯಮ ಮಾರ್ಗ, ಪ್ರತ್ಯೇಕ ಬುದ್ಧ ಅಲ್ಲಮಪ್ರಭು, ಹಿಂದಣ ಹೆಜ್ಜೆಯನ್ನರಿತಲ್ಲದೆ, ಪ್ರಜ್ಞಾ ಪಾರಮಿತ ಹೃದಯ ಸೂತ್ರ, ಬೌದ್ಧ ಮಧ್ಯಮ ವರ್ಗ, ಮಾತಿನ ಮೊದಲು, ಶಂಕರಾನಂದಯೋಗಿ ಮತ್ತು ಶಂಕರಾರ್‍ಯರ ತತ್ವಪದಗಳು, ಸೋಮೇಕಟ್ಟೆ ಕರಿವೃಷಭೇಂದ್ರಸ್ವಾಮಿ ಮತ್ತು ಇತರರ ತತ್ವ ಪದಗಳು, ತುರುವನೂರು ಲಿಂಗಾರ್ಯರ ತತ್ವಪದಗಳು-1, ತುರುವನೂರು ಲಿಂಗಾರ್ಯರ ತತ್ವಪದಗಳು-2, ಶಿವಾನಂದ ಸುಬ್ರಹ್ಮಣ್ಯ ಮತ್ತು ಇತರರ ತತ್ವಪದಗಳು, ಕಲ್ಲೂರು ರುದ್ರಮುನಿದೇವ ಮತ್ತು ಇತರರ ತತ್ವಪದಗಳು, ಬಾಲಲೀಲಾ ಮಹಾಂತ ಇತರ ತತ್ವಪದಗಳು, ಸಿದ್ಧಪ್ರಭು ತತ್ವಗಳು, ಮರಕುಂದಿ ಬಸವಣ್ಣಪ್ಪ ಮತ್ತು ಇತರರ ತತ್ವಪದಗಳು, ದ್ಯಾಗಾಯಿ ಗುಂಡಪ್ಪ ಮತ್ತು ಇತರರ ತತ್ವಪದಗಳು, ದಾವ್ ದೆ ಚಿಂಗ್, ಈ ಕ್ಷಣದ ಶಕ್ತಿ ಮನ ಮಗ್ನತೆ, ಶಂಕರಾನಂದ ಯೋಗಿ ಮತ್ತು ಇತರ ತತ್ವ ಪದಕಾರರ ವಾಚಿಕೆ, ಲಾವ್ ತ್ಸು ದಾವ್ ದ ಜಿಂಗ್,   

ಎಸ್. ನಟರಾಜ ಬೂದಾಳು

Books by Author

Awards

BY THE AUTHOR