ಬೆಂಕಿ ಸಮುದ್ರದ ತಂಪು ಮೀನು

Author : ಭರಮಣ್ಣ ಗುರಿಕಾರ್‌

Pages 120

₹ 100.00




Year of Publication: 2019
Published by: ಮೇಘ ಪ್ರಕಾಶನ
Address: ನಂ.149, 4ನೇ ಅಡ್ಡರಸ್ತೆ, ರಾಜಗೋಪಾಲನಗರ, ಬೆಂಗಳೂರು

Synopsys

ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ ದೌರ್ಜನ್ಯಗಳನ್ನು ಖಂಡಿಸಿ, ಜಾತಿ ತಾರತಮ್ಯವನ್ನು ಪ್ರಶ್ನಿಸಿ ಕವಿತೆಗಳನ್ನು ರಚಿಸಿದ್ದಾರೆ ಯುವ ಕವಿ ಭರಮಣ್ಣ. ಪ್ರೀತಿ ಎಂಬ ಸವಕಳಿಯ ಜೋಳಿಗೆ ಹಿಡಿದು, ಈ ಭೇದಭಾವಗಳ ಸಮಾಜದಲ್ಲಿ ತಾನು ತುಂಬಿಕೊಳ್ಳುತ್ತಿರುವುದಾದರೂ ಏನು ಎಂಬ ಪ್ರಶ್ನೆ ಕವಿಗೆ ಹುಟ್ಟಿದಾಗಲೆಲ್ಲ ಪ್ರಶ್ನಿಸುವುದರ ಮುಖಾಂತರವೇ ಉತ್ತರವನ್ನು ಕಂಡುಕೊಳ್ಳುವ ಯತ್ನವನ್ನು ಇಲ್ಲಿನ ಕವಿತೆಗಳು ಮಾಡುತ್ತವೆ ಎಂದು ಎಂ.ಆರ್‌. ಕಮಲ ಬೆನ್ನುಡಿಯ ಮಾತುಗಳಲ್ಲಿ ತಿಳಿಸಿದ್ದಾರೆ.

About the Author

ಭರಮಣ್ಣ ಗುರಿಕಾರ್‌
(01 June 1993)

ಬಿ.ಬಿ.ಜಿ ಕಾವ್ಯನಾಮದ ಮೂಲಕ ಪರಿಚಿತರಾಗುತ್ತಿರುವ ಯುವ ಕವಿ ಭರಮಣ್ಣ ಗುರಿಕಾರ್‌ ಜನಿಸಿದ್ದು 1993 ಜೂನ್‌ 1ರಂದು. ತಂದೆ ಬಸಪ್ಪ ತಾಯಿ ಬಾಳಮ್ಮ. ಬಳ್ಳಾರಿ ಹಾಗೂ ಬೆಂಗಳೂರಿನಲ್ಲಿ ಶಿಕ್ಷಣ ಪಡೆದಿರುವ ಇವರು ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಇವರ ಚೊಚ್ಚಲ ಕವನ ಸಂಕಲನ ಬೆಂಕಿ ಸಮುದ್ರದ ತಂಪು ಮೀನು. ...

READ MORE

Related Books