ಬಿ.ಬಿ.ಜಿ ಕಾವ್ಯನಾಮದ ಮೂಲಕ ಪರಿಚಿತರಾಗುತ್ತಿರುವ ಯುವ ಕವಿ ಭರಮಣ್ಣ ಗುರಿಕಾರ್ ಜನಿಸಿದ್ದು 1993 ಜೂನ್ 1ರಂದು. ತಂದೆ ಬಸಪ್ಪ ತಾಯಿ ಬಾಳಮ್ಮ. ಬಳ್ಳಾರಿ ಹಾಗೂ ಬೆಂಗಳೂರಿನಲ್ಲಿ ಶಿಕ್ಷಣ ಪಡೆದಿರುವ ಇವರು ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಇವರ ಚೊಚ್ಚಲ ಕವನ ಸಂಕಲನ ಬೆಂಕಿ ಸಮುದ್ರದ ತಂಪು ಮೀನು.