‘ಬಯಲ ಬೆಳಕು’ ಪುಷ್ಪ.ಎಸ್ ಮುರಗೋಡ ಅವರ ಕೃತಿಯಾಗಿದೆ. ಒಬ್ಬ ಸಂತ ಹೇಗಿದ್ದ? ಅವನ ಆಚಾರ ವಿಚಾರಗಳನ್ನು ಉತ್ತಿಬಿತ್ತುವ ತಾಕತ್ತು ಯಾರಲ್ಲಿ ಉದ್ಭವಿಸಲು ಸಾಧ್ಯ? ಯುಗಗಳು ಉರುಳಿದಂತೆಲ್ಲ ನಮ್ಮೊಳಗೆ,ನಮ್ಮಂತೆ ಸಿದಾ ಸಾದಾ ವ್ಯಕ್ತಿ ಹಣತೆಯಂತೆ ನಿಧಾನವಾಗಿ ಬೆಳೆಯತ್ತಾ,ಸೂರ್ಯಂಗೆ ಪ್ರತಿ ಸೂರ್ಯನಂತಾಗಿ ಬೆಳೆಯವ ವ್ಯಕ್ತಿತ್ವ ಅಷ್ಟು ಸುಲಭವಲ್ಲ.ಅಂತಹ ಕೊಡುಗೆಯನ್ನು ನೀಡಿದ ಈ ಶತಮಾನದ ಸಂತನೆಂದರೆ ತಪ್ಪಿಲ್ಲ.ಸ್ವಾಮಿಯವರ ಪ್ರವಚನಗಳನ್ನು ಖುದ್ದಾಗಿಯೂ ಹಾಗೂ ಯೂಟ್ಯೂಬ್ ನಲ್ಲಿಯೂ,ವಾಟ್ಸಪ್ಗಳಲ್ಲಿಯೂ ಕೇಳಿದ ಪುಣ್ಯ ನನ್ನದು. ಬಿಳಿ ನಿಲುವಂಗಿಯನ್ನು ಧರಿಸಿ,ಕಿಸೆಯಿಲ್ಲದ ಅಂಗಿಯನ್ನು ತೊಟ್ಟ ಮೊದಲ ನಿಸ್ವಾರ್ಥ ಯೋಗಿಯೆಂದರೆ ತಪ್ಪಾಗದು.ಊರೂರು ಸೈಕಲ್ ಮೇಲೆ ಅಲೆಯುತ್ತ ಜ್ಞಾನದ ಹಣತೆಯನ್ನು ಹಚ್ಚುತ್ತ ಅಲೆಮಾರಿಯಂತೆ ತಿರುಗುವ ಸಂತ ಮೊದ ಮೊದಲು ಹುಚ್ಚನಂತೆ ಕಂಡರೂ,ಧಿಕ್ಕರಿಸಿದರೂ ಕೊನೆಕೊನೆಗೆ ಉಸಿರಿನ ಭಾಗವಾಗಿ ಬೆರೆತ ಮಹಾನ್ ಚೇತನಕ್ಕೆ ಎಷ್ಟು ನಮಿಸಿದರೂ ಈ ಜನ್ಮ ಸಾಲದು.
ಸಮಾಜವನ್ನು ತಿದ್ದುವ ಸ್ವಾಮೀಜಿಗಳು ಹೇಗಿರಬೇಕು ಎನ್ನುವುದಕ್ಕೆ ಉದಾಹರಣೆಯಂತಿದ್ದವರು ಸಿದ್ದೇಶ್ವರ ಸ್ವಾಮೀಜಿ. ಅನ್ನದಾತ, ಜ್ಞಾನದಾತರಾದ ಸಿದ್ದೇಶ್ವರ ಸ್ವಾಮೀಜಿಗಳು 'ಕಾಯಕ ಯೋಗಿ' ಅಂತನೂ ಗೌರವದಿಂದ ಕರೆಯಲ್ಪಟ್ಟವರು. ತಮ್ಮ ಪ್ರಚವನಗಳ ಮೂಲಕವೇ ಅದೆಷ್ಟೋ ಜನರಿಗೆ ದಾರಿ ದೀಪವಾದ ಸಿದ್ದೇಶ್ವರ ಶ್ರೀಗಳ ಜೀವನವೇ ಸ್ಫೂರ್ತಿಗಾಥೆಯಾಗಿದೆ.
ಪುಷ್ಪ ಎಸ್ ಮುರಗೋಡ ಅವರು ಮೂಲತಃ ಗದಗದವರು. MA,Bed, BLib Science, ಪದವೀಧರರಾದ ಪುಷ್ಪ ಅವರು ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಎಸ್ ಎಸ್ ಮುರಗೋಡ ಇವರ ಪತ್ನಿ. ಕಥೆ ,ಕವನ, ವೈಚಾರಿಕ ,ಆದ್ಯಾತ್ಮಿಕ ,ಮಹಿಳಾಪರ, ಲೇಖನಗಳ ರಚನೆ ,ಉಪನ್ಯಾಸ ನೀಡುವುದರೊಂದಿಗೆ ಐದು ಸಾಹಿತ್ಯ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಚಿಕ್ಕಂದಿನಿಂದಲೇ ಕಥೆ ಬರೆಯುವ ಹವ್ಯಾಸ ಹೊಂದಿದ ಪುಷ್ಪಾ ಅವರು "ಸಂಘರ್ಷ ಮತ್ತು ಇತರ ಕಥೆಗಳು" ಎಂಬ ಶೀರ್ಷಿಕೆ ಯಡಿಯಲ್ಲಿ ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾದ ಆಕಾಶವಾಣಿ ಧಾರವಾಡ ಕೇಂದ್ರದಿಂದ ಬಿತ್ತರಗೊಂಡ 11 ಸುಂದರ ಕಥೆಗಳನ್ನು ...
READ MORE