ಪುಷ್ಪ ಎಸ್ ಮುರಗೋಡ ಅವರು ಮೂಲತಃ ಗದಗದವರು. MA,Bed, BLib Science, ಪದವೀಧರರಾದ ಪುಷ್ಪ ಅವರು ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಎಸ್ ಎಸ್ ಮುರಗೋಡ ಇವರ ಪತ್ನಿ. ಕಥೆ ,ಕವನ, ವೈಚಾರಿಕ ,ಆದ್ಯಾತ್ಮಿಕ ,ಮಹಿಳಾಪರ, ಲೇಖನಗಳ ರಚನೆ ,ಉಪನ್ಯಾಸ ನೀಡುವುದರೊಂದಿಗೆ ಐದು ಸಾಹಿತ್ಯ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಚಿಕ್ಕಂದಿನಿಂದಲೇ ಕಥೆ ಬರೆಯುವ ಹವ್ಯಾಸ ಹೊಂದಿದ ಪುಷ್ಪಾ ಅವರು "ಸಂಘರ್ಷ ಮತ್ತು ಇತರ ಕಥೆಗಳು" ಎಂಬ ಶೀರ್ಷಿಕೆ ಯಡಿಯಲ್ಲಿ ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾದ ಆಕಾಶವಾಣಿ ಧಾರವಾಡ ಕೇಂದ್ರದಿಂದ ಬಿತ್ತರಗೊಂಡ 11 ಸುಂದರ ಕಥೆಗಳನ್ನು ಸಂಕಲಿಸಿ ಕೊಡುವ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಪ್ರವೇಶ ಮಾಡಿದ್ದಾರೆ. ಜೀವನದ ಒಂದು ಸಣ್ಣ ಘಟನೆಯನ್ನು ಆದರಿಸಿ ವಿಷಯ, ಪಾತ್ರ ನಿರೂಪಣೆ ,ಸಂಭಾಷಣೆ ,ಶೈಲಿ, ಓದುವವರ ಮನಸ್ಸನ್ನು ಸೆರೆಹಿಡಿದು ಕೊನೆಯ ತನಕ ಓದಿಸಿಕೊಂಡು ಹೋಗುವಂತಹ ಕಥೆಗಳನ್ನು ರಚಿಸಿ ಉತ್ತಮ ಕಥೆಗಾರ್ತಿ ಎನಿಸಿಕೊಂಡಿದ್ದಾರೆ.
ಕೃತಿಗಳು: ಧ್ವನಿ,ವಿಚಾರ ಕಿರಣ, ಹೃದಯಾಂತರಂಗ, ಬಯಲ ಬೆಳಕು
ಪ್ರಶಸ್ತಿಗಳು: ರಾಮರಾವ್ ದತ್ತಿನಿಧಿ ಪ್ರಶಸ್ತಿ,ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿ