ಬಾರಮಾಸ

Author : ಶಾಂತರಸ ಹೆಂಬೇರಾಳು

Pages 120

₹ 45.00




Year of Publication: 1993
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

`ಬಾರಮಾಸ' ಒಂದು ಕಾವ್ಯಪ್ರಕಾರವಾಗಿದ್ದು ಬಹುಮಟ್ಟಿಗೆ ಎಲ್ಲ ಭಾರತೀಯ ಭಾಷೆಗಳಲ್ಲಿಯೂ ಲಭ್ಯವಿದೆ. ೧೭ನೆಯ ಶತಮಾನದ ಪೂರ್ವಾರ್ಧವಾದ ೧೬೪೦ರಲ್ಲಿ ರಚಿಸಲ್ಪಟ್ಟ ಈಬಾರಮಾಸವನ್ನು ಒಂದು ಜನಪದ ಕಾವ್ಯವೆಂದೂ ಕರೆಯಬಹುದಾಗಿದ್ದುಇದರಲ್ಲಿ ಲೋಕಗೀತೆ, ವಿರಹ ವರ್ಣನೆ, ಪರಿಸರ, ಸಾಮಾಜಿಕ ಜೀವನ, ಋತುವರ್ಣನೆ ಮತ್ತು ಶೃಂಗಾರ ರಸಗಳ ಜೊತೆಗೆ ಪರಿಸರ, ನೆರೆಹೊರೆಯ ಸಾಮಾಜಿಕ ಜೀವನದ ಸುಂದರ ಚಿತ್ರಣವನ್ನು ಕಾಣಬಹುದಾಗಿದೆ.

About the Author

ಶಾಂತರಸ ಹೆಂಬೇರಾಳು
(07 April 1924 - 13 April 2008)

ಕಾವ್ಯ-ಕಥೆ-ಕಾದಂಬರಿ-ಸಂಶೋಧನೆ-ಅನುವಾದ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಹೆಂಬೇರಾಳು ಶಾಂತರಸ ಅವರ ನಿಜನಾಮ ಶಾಂತಯ್ಯ. 1924ರ ಏಪ್ರಿಲ್ 7ರಂದು ಜನಿಸಿದರು. ತಂದೆ ಚೆನ್ನಬಸವಯ್ಯ- ತಾಯಿ ಸಿದ್ಧಲಿಂಗಮ್ಮ. ಬಾಲ್ಯದ ವಿದ್ಯಾಭ್ಯಾಸ ಉರ್ದು ಮಾಧ್ಯಮದಲ್ಲಿ ಸಿರಿವಾರ, ಮುಷ್ಟೂರು, ಗುಲ್ಬರ್ಗ, ರಾಯಚೂರು, ಲಾತೂರುಗಳಲ್ಲಿ ನಡೆಯಿತು. 1939ರಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರಿಂದ ಶಾಲೆಯಿಂದ ಹೊರದೂಡಲಾಗಿತ್ತು. ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ (1985), ರಾಜ್ಯ ನಾಟಕ ಅಕಾಡಮಿಯ ಫೆಲೋಷಿಪ್ (1993), ವಿದ್ಯಾವರ್ಧಕ ಸಂಘದ ಬಹುಮಾನ (1985), ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ (1997) ಮೊದಲಾದವು ಇವರಿಗೆ ಲಭಿಸಿದೆ. ಬೀದರ್ ನಲ್ಲಿ ನಡೆದ ...

READ MORE

Related Books