ಕಾವ್ಯ-ಕಥೆ-ಕಾದಂಬರಿ-ಸಂಶೋಧನೆ-ಅನುವಾದ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಹೆಂಬೇರಾಳು ಶಾಂತರಸ ಅವರ ನಿಜನಾಮ ಶಾಂತಯ್ಯ. 1924ರ ಏಪ್ರಿಲ್ 7ರಂದು ಜನಿಸಿದರು. ತಂದೆ ಚೆನ್ನಬಸವಯ್ಯ- ತಾಯಿ ಸಿದ್ಧಲಿಂಗಮ್ಮ. ಬಾಲ್ಯದ ವಿದ್ಯಾಭ್ಯಾಸ ಉರ್ದು ಮಾಧ್ಯಮದಲ್ಲಿ ಸಿರಿವಾರ, ಮುಷ್ಟೂರು, ಗುಲ್ಬರ್ಗ, ರಾಯಚೂರು, ಲಾತೂರುಗಳಲ್ಲಿ ನಡೆಯಿತು. 1939ರಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರಿಂದ ಶಾಲೆಯಿಂದ ಹೊರದೂಡಲಾಗಿತ್ತು.
ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ (1985), ರಾಜ್ಯ ನಾಟಕ ಅಕಾಡಮಿಯ ಫೆಲೋಷಿಪ್ (1993), ವಿದ್ಯಾವರ್ಧಕ ಸಂಘದ ಬಹುಮಾನ (1985), ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ (1997) ಮೊದಲಾದವು ಇವರಿಗೆ ಲಭಿಸಿದೆ. ಬೀದರ್ ನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಶಾಂತರಸರು 2008ರ ಏಪ್ರಿಲ್ 13ರಂದು ನಿಧನರಾದರು.
ಕನ್ನಡ ಗಜಲ್ (ಕಾವ್ಯ) ಬಯಲು ಸೀಮೆಯ ಬಯಲು (ಕಾವ್ಯ) ಸತ್ಯಸ್ನೇಹಿ (ನಾಟಕ) ನಂಜು ನೊರೆವಾಲು (ನಾಟಕ), ಉಮ್ ರಾವ್ ಜಾನ್ ಅದಾ (ಅನುವಾದ), ಬಸವಪೂರ್ವ ಯುಗದ ಶರಣರು (ಸಂಶೋಧನ), ಪುರಾತನರ ಪುರಾಣ, ಮುಸುಕು ತೆರೆ, ಬೆನ್ನ ಹಿಂದಿನ ಬೆಳಕು ಇತ್ಯಾದಿಗಳು ಇವರ ಕೃತಿಗಳು. ಅವರು 13 ಏಪ್ರಿಲ್ 2008ರಂದು ನಿಧನರಾದರು.