ಬಾಪೂಜಿ ಕಂಡ ಭಾರತ ಕೌಂಡಿನ್ಯ ಅವರ ಕೃತಿಯಾಗಿದೆ. ಭಾರತ ದೇಶದಲ್ಲಿ ಅಹಿಂಸೆ ಪ್ರತಿಪಾದನೆಗಾಗಿ ತನ್ನ ಜೀವನವನ್ನು ಮುಡುಪಾಗಿಟ್ಟು ಸರ್ವರೂ ಸಮಾನರೆಂದು ಸಾರಿದವರು ಮಹಾತ್ಮಗಾಂಧೀಜಿಯವರು, ಸ್ವಚ್ಛತೆಯನ್ನು ಕಾಪಾಡುವಲ್ಲಿ ಶ್ರೀಸಾಮಾನ್ಯನಿಗೆ ತಿಳುವಳಿಕೆ ಮೂಡಿಸುತ್ತಾ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಹಿಂಸೆಯನ್ನು ವಿರೋಧಿಸಿ, ಅಹಿಂಸೆಯ ಮಹತ್ವವನ್ನು ಸಾರುತ್ತಾ ಇಡೀ ವಿಶ್ವಕ್ಕೆ ಮಾದರಿಯಾ ಪ್ರೇರೇಪಣೆಗೊಳಿಸಿ ತನ್ನ ಬದುಕನ್ನು ಸಾರ್ಥಕಗೊಳಿಸಿಕೊಂಡು ಇತರರಿಗೆ ನಿದರ್ಶನವಾಗಿ ಪ್ರಾಣತ್ಯಾಗ ಮಾಡಿದ ಮಹಾತ್ಮ ಗಾಂಧೀಜಿಯ ಕನಸು ಕಂಡ ಭಾರತದ ಭವಿಷ್ಯವನ್ನು ಇಲ್ಲಿ ಚಿತ್ರಿಸಿಲಾಗಿದೆ. ಗಾಂಧೀಜಿಯವರ ಬದುಕು, ಸತ್ಯಾಗ್ರಹ, ಸ್ವಾತಂತ್ರ್ಯ ಹೋರಾಟ ಮುಂತಾದ ಸನ್ನಿವೇಶಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.
ಕೌಂಡಿನ್ಯ ಕಾವ್ಯನಾಮದಿಂದ ಪ್ರಸಿಧ್ದಿಯನ್ನು ಪಡೆದಿರುವ ವೈ.ಎನ್ ನಾಗೇಶ್ ಅವರು ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸೀಪುರದವರು . ತಂದೆ ನಾರಾಯಣ ರಾವ್ ತಾಯಿ ಜಯಲಕ್ಷ್ಮಿ . ಮೂವತ್ತೆರಡು ವರ್ಷಗಳಿಂದ ಸಾಹಿತ್ಯ ಸೇವೆಯನ್ನು ಮಾಡಿಕೊಂಡಿದ್ದಾರೆ. ಇವರು ಮಂಗಳ, ತರಂಗ, ಸುಧಾ, ಕನ್ನಡ ಪ್ರಭ, ಪ್ರಜಾವಾಣಿ ,ಉದಯವಾಣಿ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ 350 ಕ್ಕೂ ಹೆಚ್ಚು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಕನ್ನಡ ಭಾಷಾ ಸಂಶೋಧನಾ ಕೃತಿ, ಚಾರಿತ್ರಿಕ ಕೃತಿ, ಪೌರಾಣಿಕ ಗ್ರಂಥಗಳು ,ಧಾರ್ಮಿಕ ಮತ್ತು ಸಾಮಾನ್ಯ ಲೇಖನಗಳು, ಸಣ್ಣ ಕತೆಗಳು , ಕವನ ಸಂಕಲನಗಳು, ಚಲನಚಿತ್ರಗಳು ರಚಿಸಿದ್ದಾರೆ. ಪ್ರಶಸ್ತಿ ...
READ MORE