ಕೌಂಡಿನ್ಯ ಕಾವ್ಯನಾಮದಿಂದ ಪ್ರಸಿಧ್ದಿಯನ್ನು ಪಡೆದಿರುವ ವೈ.ಎನ್ ನಾಗೇಶ್ ಅವರು ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸೀಪುರದವರು . ತಂದೆ ನಾರಾಯಣ ರಾವ್ ತಾಯಿ ಜಯಲಕ್ಷ್ಮಿ . ಮೂವತ್ತೆರಡು ವರ್ಷಗಳಿಂದ ಸಾಹಿತ್ಯ ಸೇವೆಯನ್ನು ಮಾಡಿಕೊಂಡಿದ್ದಾರೆ. ಇವರು ಮಂಗಳ, ತರಂಗ, ಸುಧಾ, ಕನ್ನಡ ಪ್ರಭ, ಪ್ರಜಾವಾಣಿ ,ಉದಯವಾಣಿ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ 350 ಕ್ಕೂ ಹೆಚ್ಚು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಕನ್ನಡ ಭಾಷಾ ಸಂಶೋಧನಾ ಕೃತಿ, ಚಾರಿತ್ರಿಕ ಕೃತಿ, ಪೌರಾಣಿಕ ಗ್ರಂಥಗಳು ,ಧಾರ್ಮಿಕ ಮತ್ತು ಸಾಮಾನ್ಯ ಲೇಖನಗಳು, ಸಣ್ಣ ಕತೆಗಳು , ಕವನ ಸಂಕಲನಗಳು, ಚಲನಚಿತ್ರಗಳು ರಚಿಸಿದ್ದಾರೆ.
ಪ್ರಶಸ್ತಿ ಪುರಸ್ಕಾರಗಳು: ಹಾಸನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ಜ್ವಾಲನಯ್ಯ ಪುರಸ್ಕಾರ ಪ್ರಶಸ್ತಿ, ಸಹ್ಯಾದ್ರಿ ಶ್ರೀ ಪ್ರಶಸ್ತಿ - ಶಿವಮೊಗ್ಗ, ದಕ್ಷಿಣ ಕನ್ನಡದ 'ಸಾಹಿತ್ಯ ರತ್ನ' ಪ್ರಶಸ್ತಿ, ಶ್ರೇಷ್ಠ ಕಾದಂಬರಿಗಾರ ಪ್ರಶಸ್ತಿ(ಉಡುಪಿ ಜಿಲ್ಲೆ) ಬಿಜಾಪುರದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನದ ಗೌರವ , ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ (ಹೊಳೆನರಸೀಪುರ ತಾಲ್ಲೂಕು) , ಜಿಲ್ಲಾ ಘಟಕ ಸಾಹಿತ್ಯ ಸೌರಭದ ಅಧ್ಯಕ್ಷತೆಯ ಗೌರವ (ಹಾಸನ ಜಿಲ್ಲೆ) .