‘ಅವಿಲು’ ಸಾಧನೆಗೆ ಬೆಳಕಿಂಡಿ ನಾ. ಕಾರಂತ ಪೆರಾಜೆ ಅವರ ಸಾಧನೆಯ ವಿಚಾರಗಳನ್ನು ಒಳಗೊಂಡ ಲೇಖನಸಂಕಲನವಾಗಿದೆ. ಒಳ್ಳೆಯದನ್ನು ಆಯ್ದು ಒಂದೆಡೆ ಸಂಗ್ರಹಿಸುವುದು ಒಳಿತಿನ ವೃದ್ದಿಗೆ ಕಾರಣ. ಮಾತ್ರವಲ್ಲ, ಅದು ಒಂದು ಸೃಜನಶೀಲ ಮನಸ್ಸಿನ ಯೋಗ್ಯತೆಯೂ ಹೌದು. ಈ ಪುಸ್ತಕದಲ್ಲಿ ವಿವಿಧ ವಲಯದಲ್ಲಿ ತಮ್ಮನ್ನು ಉತ್ತುಂಗದೆಡೆ ವಿಸ್ತರಿಸಿಕೊಂಡ ಸಾಧಕರ ಕುರಿತ ಲೇಖನಗಳಿವೆ. ಈವು ಎಲ್ಲಾ ಕಾಲಘಟ್ಟಗಳಲ್ಲೂ ಶ್ರೀಸಾಮಾನ್ಯನಿಗೆ ಸ್ಫೂರ್ತಿ ನೀಡಬಲ್ಲವು.
ಪತ್ರಕರ್ತರಾಗಿರುವ ನಾ. ಕಾರಂತ ಪೆರಾಜೆ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ ಸುಳ್ಯದ ನಿವಾಸಿ ಅಗಿರುವ ಅವರು ಯಕ್ಷಗಾನದಲ್ಲಿ ವಿಶೇಷ ಅಸಕ್ತಿ ಉಳ್ಳವರು. ನಾ. (ನಾರಾಯಣ) ಕಾರಂತ ಪೆರಾಜೆಯವರು ಪತ್ರಕರ್ತ, ಸಾಹಿತಿ, ಯಕ್ಷಗಾನ ಕಲಾವಿದ, ಕೃಷಿಕ ಮತ್ತು ಚಿಂತಕ. ಅವರು ಕೃಷಿ ಮಾಸಿಕ ’ಅಡಿಕೆ ಪತ್ರಿಕೆ’ಯಲ್ಲಿ ಸಹಾಯಕ ಸಂಪಾದಕರಾಗಿದ್ದಾರೆ. ಕೃಷಿ, ಗ್ರಾಮೀಣ ರಂಗದ ಬಗ್ಗೆ, ಯಕ್ಷಗಾನದ ಬಗ್ಗೆ ಮಾಹಿತಿಪೂರ್ಣವಾಗಿ ಆಕರ್ಷಕವಾಗಿ ಬರೆಯುವ ಕಾರಂತರು 'ನೆಲದ ನಾಡಿ' (ಉದಯವಾಣಿ), ಹೊಸದಿಗಂತದಲ್ಲಿ 'ಮಾಂಬಳ' (ಹೊಸದಿಗಂತ) “ದಧಿಗಿಣತೋ' (ಪ್ರಜಾವಾಣಿ) ಅಂಕಣಗಳನ್ನು ಬರೆಯುತ್ತಿದ್ದಾರೆ. 'ತಳಿತಪಸ್ವಿ', 'ಮಾಂಬಳ', 'ಮನಮಿಣುಕು', 'ಮಣ್ಣಮಿಡಿತ', 'ಮಣ್ಣಮಾಸು', ...
READ MORE