ಆಶಾ ರಘು ಅವರು ರಚಿಸಿರುವ ವೇದೋತ್ತರ ಕಾಲಘಟ್ಟದ ಕಾಲ್ಡನಿಕ ಬೃಹತ್ ಕಾದಂಬಲಿ 'ಆವರ್ತ ' ಇದು ಯೋಗಾಭೋಗದ ಸಮನ್ವಯ ತತ್ವವನ್ನು ಸಾರುವ ತಾತ್ವಿಕ ಚಿಂತನೆಯ ಕಥಾ ಹಂದರವನ್ನುಳ್ಳ ಕೃತಿ. ಕಾದಂಬರಿಯ ಮೂಲ ಉದ್ದೇಶ ತಾತ್ವಿಕ ಚಿಂತನೆಯಾದರೂ, ರಮ್ಯ, ರಂಜಕ, ರೋಚಕ, ಆಕರ್ಷಕ ಶೈಲಿಯನ್ನೂ ಹಾಗೂ ನಿರೂಪಣಿಯನ್ನೂ ಇದು ಒಳಗೊಂಡಿದೆ. 2014 ರಲ್ಲಿ ಪ್ರಕಟಗೊಂಡ ಈ ಕಾದಂಬರಿ, ಕನ್ನಡ ಸಾಹಿತ್ಯ ಅಕಾಡಮಿಯ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ ಹಾಗೂ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ರಾಜಲಕ್ಷ್ಮಿ ಬರಗೂರು ರಾಮಚಂದ್ರಪ್ಪ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಈವರೆಗೆ ಎರಡು ಮುದ್ರಣಗಳನ್ನು ಕಂಡಿದ್ದು, ಇದೀಗ ಮೂರನೆಯ ಮುದ್ರಣಕ್ಕೆ ಸಿದ್ಧಗೊಳ್ಳುತ್ತಿದೆ.
ಪ್ರಸ್ತುತ ‘ಆವರ್ತ-ಮಂಥನ’ ಕಿರುಹೊತ್ತಿಗೆಯು ‘ಆವರ್ತ’ ಕಾದಂಬರಿಯನ್ನು ಕುರಿತ ವಿವಿಧ ಸಾಹಿತಿಗಳ ಪತ್ರಿಕೆಗಳ, ಓದುಗರ ಅಭಿಪ್ರಾಯಗಳನ್ನು ಒಳಗೊಂಡಿದೆ.
ದೀಪು ಶೆಟ್ಟಿ ದೊಡ್ಡಮನೆಯವರು ಹುಟ್ಟಿದ್ದು 1985ರ ಜನವರಿ 14 ತಾರೀಖಿನಂದು. ಕಾರ್ಕಳ ತಾಲೂಕಿನವರಾದ ಇವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ವಿಜ್ಞಾನ ಪದವಿ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಐಟಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. 'ಒಡಲು ಓಕುಳಿ' ಇವರ ಮೊದಲ ಕವನ ಸಂಕಲನ. ಕೃತಿಗಳು: ಒಡಲು ಓಕುಳಿ, ಆವರ್ತ-ಮಂಥನ ...
READ MORE