‘ಅಸ್ಪೃಶ್ಯರು’ ಎಂ. ವೆಂಕಟಸ್ವಾಮಿ ಅವರ ಒಂದು ಪರಿಶೀಲನೆಯಾಗಿದೆ. ಭಾರತದಲ್ಲಿನ ಜಾತಿಪದ್ಧತಿ, ಅಸ್ಪೃಶ್ಯತೆ, ಹಿಂದೂ ಧರ್ಮದ ಚಾತುರ್ವಣ್ಯ್ರ ಸಮಾಜದ ಅಮಾನವೀಯ ಕೃತ್ಯಗಳನ್ನೊಳಗೊಂಡಂತೆ ವಿಚಾರಪೂರಿತ ಲೇಖನಗಳಿವೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಗೆ ಸೇರಿದ ಡಾ.ಎಂ.ವೆಂಕಟಸ್ವಾಮಿ ಅವರು 06.11.1955 ರಂದು ಜನಿಸಿದರು, ಪ್ರಾಥಮಿಕ ಶಿಕ್ಷಣ ತನ್ನ ಊರಿನಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಘಟ್ಟುಮಾದಮಂಗಳದಲ್ಲಿ ಪೂರೈಸಿದರು. ಕೆ.ಜಿ.ಎಫ್ನ ಮುನಿಸಿಪಲ್ ಬಾಯ್ಸ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮತ್ತು ಕೆಜಿಎಫ್ ಪ್ರ.ದ.ಕಾಲೇಜಿನಲ್ಲಿ ಬಿ.ಎಸ್ಸಿ. ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (ಭೂವಿಜ್ಞಾನ) ಎಂ.ಎಸ್ಸಿ., ಮುಗಿಸಿದರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾದರು. ಅದಕ್ಕೆ ಮುಂಚೆ ಸ್ವಲ್ಪ ಕಾಲ ಕೆಜಿಎಫ್ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್ನಲ್ಲಿ (SAIL) ಕೆಲಸ ಮಾಡಿದ್ದರು. ‘ಕೋಲಾರ ಚಿನ್ನದ ಗಣಿಗಳು'' ಮಹಾಪ್ರಬಂಧಕ್ಕೆ ...
READ MOREಹೊಸತು- ಅಕ್ಟೋಬರ್ -2003
ಮನುಷ್ಯ-ಮನುಷ್ಯರ ನಡುವೆ ಮೇಲು ಕೀಳು ಎಂಬ ಭೇದ ಭಾವ ಬೆಳೆಯುತ್ತ ಅಸಂಖ್ಯ ಜಾತಿ-ಉಪಜಾತಿಗಳಾಗಿ ಬೆಳೆದು ಒಂದು ವರ್ಗ ಇನ್ನೊಂದನ್ನು ಅಸ್ಪೃಶ್ಯವೆಂದು ಪರಿಗಣಿಸುವಷ್ಟು ಅತಿರೇಕಕ್ಕೂ ಹೋಯಿತು. ಮನುಷ್ಯರ ಮಧ್ಯೆ ಇಂಥ ಭಾವನೆಗಳಿಗೆ ಮೂಲ ಏನಿರಬಹುದು ? ಇಂದು ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತ ಜನಾಂಗೀಯ ದ್ವೇಷಕ್ಕೆ ಎಂಥ ಹಿನ್ನೆಲೆ ಇರಬಹುದು ? ಈ ಪುಸ್ತಕದಲ್ಲಿ ಭಾರತದಲ್ಲಿನ ಜಾತಿಪದ್ಧತಿ, ಅಸ್ಪೃಶ್ಯತೆ, ಹಿಂದೂ ಧರ್ಮದ ಚಾತುರ್ವಣ್ಯ್ರ ಸಮಾಜದ ಅಮಾನವೀಯ ಕೃತ್ಯಗಳನ್ನೊಳಗೊಂಡಂತೆ ವಿಚಾರಪೂರಿತ ಲೇಖನಗಳಿವೆ.