ಅಪ್ಪನ ಆಟೋಗ್ರಾಫ್

Author : ಅನಂತ ಕುಣಿಗಲ್

Pages 128

₹ 150.00




Year of Publication: 2024
Published by: ಅವ್ವ ಪುಸ್ತಕಾಲಯ
Address: ಕೆಂಚನಹಳ್ಳಿ ಅಂಚೆ, ಹೆಚ್.ದುರ್ಗ ಹೋಬಳಿ ಕುಣಿಗಲ್ ತಾಲ್ಲೂಕು, ತುಮಕೂರು-572123 \n\n

Synopsys

‘ಅಪ್ಪನ ಆಟೋಗ್ರಾಫ್’ ಕೃತಿಯು ಅನಂತ ಕುಣಿಗಲ್ ಅವರ ಕೃತಿಯಾಗಿದೆ. ಕೃತಿ ಕುರಿತು ವೀರಕಪುತ್ರ ಶ್ರೀನಿವಾಸ ಅವರು ಬೆನ್ನುಡಿಯಲ್ಲಿ ಹೀಗೆ ಹೇಳಿದ್ದಾರೆ; ಈ ವಿಷಯಗಳು ನನ್ನಲ್ಲೂ ಇದ್ದವಲ್ಲಾ? ನಾನೂ ಬರೆಯಬಹುದಿತ್ತಲ್ಲಾ? ಅಂತ ಯಾರಿಗಾದರೂ ಅನಿಸುವಂತಹ ಬರಹಗಳನ್ನೊಳಗೊಂಡ ಪುಸ್ತಕ ಈ ಅಪ್ಪನ ಆಟೋಗ್ರಾಫ್. ಆದರೆ ಎಲ್ಲರೂ ಬರೆಯಲಾಗುವುದಿಲ್ಲವಲ್ಲ! ಆದ್ದರಿಂದ ಈ ಬರಹಗಳು ಬರೆಯಲಾಗದವರ ಧ್ವನಿಯಾಗುತ್ತವೆ ಮತ್ತು ಓದುವವರ ಬದುಕಾಗುತ್ತವೆ. ಈ ಕೃತಿಯ ಹೆಚ್ಚುಗಾರಿಕೆಯೇ ಅದು. ಅಲ್ಲಲ್ಲಿ ಮೊಟಿವೇಶನಲ್ ಪುಸ್ತಕಗಳನ್ನು ನೆನಪಿಸುತ್ತವೆಯಾದರೂ ಅವುಗಳಂತೆ ಅಸಾಮಾನ್ಯ ಸಂಗತಿಗಳನ್ನು ಹೇಳುವುದಿಲ್ಲ. ಹೆಬ್ಬೆಟ್ಟಿನ ಅಮ್ಮ ಸಹಿ ಮಾಡಲು ಕಲಿತದ್ದು, ಮೊಬೈಲ್ ಹಿಡಿದು ಫೋನ್ ಮಾಡಲು ಕಲಿತದ್ದು ತರಹದ ಪುಟ್ಟಪುಟ್ಟ ಪ್ರಸಂಗಗಳ ಮೂಲಕ ಈ ಕೃತಿ ಉಂಟುಮಾಡುವ ಸ್ಫೂರ್ತಿ ತುಂಬಾ ದೊಡ್ಡದು. ಭಾವುಕ ಬರಹಗಳ ಜೊತೆಗೊಂದಷ್ಟು ಪ್ರಚೋದನಾಕಾರಿ ಮತ್ತು ಮಾಹಿತಿಯುಕ್ತ ಲೇಖನಗಳೂ ಇಲ್ಲಿವೆ. ಈ ಪುಸ್ತಕದ ಬಿಡಿಬಿಡಿ ಬರಹಗಳು, ಬೇರೆ ಬೆರೆ ವಿಷಯಗಳನ್ನು ಓದುವಾಗಲೇ ಲೇಖಕನ ವಯಸ್ಸು ಅಂದಾಜಿಗೆ ಸಿಕ್ಕಿಬಿಡುತ್ತದೆ. ನನ್ನಂತಹ ಅರ್ಧ ಆಯಸ್ಸು ಕಂಡವರಿಗೆ ಈ ಬರಹಗಳು ಅಚ್ಚರಿಯಾಗಿಯೂ, ಸುಲಭವಾಗಿಯೂ ಒಳಗಿದರೆ ಈಗಷ್ಟೇ ಪ್ರಪಂಚ ನೋಡಲಾರಂಭಿಸಿದವರಿಗೆ ಮಾರ್ಗಸೂಚಿಯಂತೆ ಕೈ ಹಿಡಿಯಬಹುದು,” ಎಂದಿದ್ದಾರೆ.

About the Author

ಅನಂತ ಕುಣಿಗಲ್
(20 December 1997)

ಅನಂತ (20-ಡಿಸೆಂಬರ್-1997) ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಂಚನಹಳ್ಳಿ ಗ್ರಾಮದವರು. ತಾಯಿ ಗೌರಮ್ಮ ಮತ್ತು ತಂದೆ ಶ್ರೀಮಾನ್ ಲೇ. ನರಸಯ್ಯ. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದ ನಂತರ ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯಲ್ಲಿ ಥಿಯೇಟರ್ ಡಿಪ್ಲೊಮಾ ತರಬೇತಿ ಮುಗಿಸಿ, ಶಿವಸಂಚಾರ ರೆಪರೇಟರಿಯಲ್ಲಿ ನಟ ಹಾಗೂ ತಂತ್ರಜ್ಞನಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವಾರು ಕನ್ನಡ ಕಿರುಚಿತ್ರಗಳನ್ನು ನಿರ್ಮಿಸಿ, ಶಾಲಾ ಕಾಲೇಜು ಮಕ್ಕಳಿಗೆ ಕಿರು ನಾಟಕಗಳನ್ನು ನಿರ್ದೇಶನ ಮಾಡಿರುತ್ತಾರೆ. ಅವ್ವ ಪುಸ್ತಕಾಲಯ ಎಂಬ ಸಾಹಿತ್ಯ ಬಳಗವನ್ನು ಕಟ್ಟಿಕೊಂಡು ಸಾಹಿತ್ಯ ಸೇವೆಯಲ್ಲಿ ನಿರಂತರಾಗಿರುವ ಇವರು ಸದ್ಯ ಬೆಂಗಳೂರಿನಲ್ಲಿದ್ದುಕೊಂಡು ಕನ್ನಡ ಚಲನಚಿತ್ರಗಳಲ್ಲಿ ...

READ MORE

Related Books