ಆಹಾರ ಸುರಕ್ಷತೆ

Author : ಎ.ಎಸ್. ಕುಮಾರಸ್ವಾಮಿ

Pages 168

₹ 80.00




Year of Publication: 2004
Published by: ಕೃಷಿ ಕಿರಣ
Address: ಶಿವಮೊಗ್ಗ

Synopsys

ಹಸಿವೆಯ ಸ್ವರೂಪ, ಆಹಾರದ ಅವಶ್ಯಕತೆ, ಬೇಡಿಕೆ, ಸಂರಕ್ಷಣೆ ಹೇಗೆ, ಏಕೆ ಇಂತಹ ಹಲವಾರು ಪ್ರಶ್ನೆಗಳಿಗೆ ಈ ಕೃತಿಯು ಪರಿಹಾರ ನೀಡಬಲ್ಲದು. ಮಾನವ ಜನಾಂಗದ ಹಸಿವನ್ನು ತಣಿಸುವುದು, ಆಹಾರ ಕೆಡದಂತೆ ಸಂರಕ್ಷಿಸುವುದು ಹೇಗೆ ಎಂಬುದನ್ನು ಲೇಖಕರು ಕೃತಿಯ ಮೂಲಕ ವಿವರಿಸಿದ್ದಾರೆ.

ಈ ಕೃತಿಯಲ್ಲಿ ಹಸಿವೆಯ ಸ್ವರೂಪ, ಆಹಾರದ ಅವಶ್ಯಕತೆ, ಬೇಡಿಕೆ ಹಾಗೂ ಆಹಾರದ ಮೂಲಗಳು, ಆಹಾರ ಉತ್ಪಾದನಾ ನಿರ್ವಹಣೆ, ಉತ್ಪಾದಿತ ಆಹಾರದ ನಿರ್ವಹಣೆ, ಆಹಾರದ ಬೆಲೆ ನಿರ್ವಹಣೆ, ಆಹಾರ ಸುರಕ್ಷತೆ ಮತ್ತು ಕೃಷಿ ಸುಸ್ಥಿರತೆ ಹಾಗೂ ಕೃಷಿ ನೀತಿ ಬಗ್ಗೆ ಸಂಕ್ಷಿಪ್ತ ಮಾಹಿತಿ ಒದಗಿಸುತ್ತದೆ.

About the Author

ಎ.ಎಸ್. ಕುಮಾರಸ್ವಾಮಿ
(20 January 1953)

ಲೇಖಕ, ಕೃಷಿ ವಿಜ್ಞಾನಿ ಡಾ.ಎ.ಎಸ್. ಕುಮಾರಸ್ವಾಮಿ (ಅಬ್ಬಿಗೆರೆ ಶಿವಲಿಂಗಪ್ಪ ಕುಮಾರಸ್ವಾಮಿ) ಜನಿಸಿದ್ದು 1953 ಜನವರಿ 20 ರಂದು. ದಾವಣಗೆರೆ ಜಿಲ್ಲೆ ದೊಡ್ಡಬ್ಬೀಗೆರೆ ಗ್ರಾಮದವರು. ಸಂತೇಬೆನ್ನೂರಿನಲ್ಲಿ ಎಸ್‌ಎಸ್‌ಎಲ್‌ಸಿ ವರೆಗೂ ಶಿಕ್ಷಣ ಪಡೆದು, ಧಾರವಾಡ ಹಾಗೂ ಬೆಂಗಳೂರಿನಲ್ಲಿ ಕೃಷಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪಡೆದಿದ್ದಾರೆ. ಬೆಂಗಳೂರಿನ ಕೃಷಿ ಮಹಾವಿದ್ಯಾಲಯದಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿ, ಪ್ರಾಧ್ಯಾಪಕರಾಗಿ, ವಲಯ ಕೃಷಿ ಸಂಶೋಧನ ಕೇಂದ್ರದಲ್ಲಿ ತಂಬಾಕು ಬೆಳೆ ಬೇಸಾಯ ಶಾಸ್ತ್ರಜ್ಞರಾಗಿ, ಹಾಸನ ಕೃಷಿ ಕಾಲೇಜು ಸ್ಥಾಪಕ ನಿರ್ದೇಶಕರು ಹಾಗೂ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಹ ಸಂಶೋಧನಾ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ತಮ್ಮ ಅನುಭವ, ...

READ MORE

Related Books