ಬೆಳಕಿನ ಬುಗ್ಗೆ

Author : ನೂರುಲ್ಲಾ ತ್ಯಾಮಗೊಂಡ್ಲು

Pages 76

₹ 60.00




Year of Publication: 2010
Published by: ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಪರಿಷತ್ತು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು18.

Synopsys

ಬೆಳಕಿನ ಬುಗ್ಗೆ-ನೂರುಲ್ಲಾ ತ್ಯಾಮಗೊಂಡ್ಲು ಅವರ ಮೊದಲ ಕವನ ಸಂಕಲನ. ವ್ಯವಸ್ಥೆಯ ಬಗ್ಗೆ ಪ್ರತಿಭಟನಾತ್ಮಕ ರೋಷ, ಲಂಚ-ಭ್ರಷ್ಟಾಚಾರದ ವಿರುದ್ಧ ಆಕ್ರೋಶ, ದೀನ-ದುರ್ಬಲರ ಬಗೆಗಿನ ಅನುಕಂಪ, ಹಿರಿಯರ ಬಗೆಗಿನ ಗೌರವ; ಇವೆಲ್ಲವೂ ಕಾವ್ಯಗಳ ವಸ್ತು. ಕೃತಿಗೆ ಮುನ್ನುಡಿ ಬರೆದಿರುವ ಪ್ರಾಂಶುಪಾಲ ಎಂ.ವಿ. ನೆಗಳೂರು ‘ಭಾವಜೀವಿಯಾದ ಕವಿ ಸಾಹಿತ್ಯಾಸಕ್ತಿ ಹಾಗೂ ಕಾವ್ಯ ರಚನೆಯ ಪ್ರವೃತ್ತಿಯಲ್ಲಿ ಗಟ್ಟಿಗರು. ಅದಕ್ಕೆ ಅವರು ‘ನಾಳೆಯ ಕನಸಿಗೆ ಇಂದು ಭರವಸೆಯ ಹೆಜ್ಜೆ ಹಾಕುವುದು, ಬದುಕಿನ ಎಲ್ಲವನ್ನೂ ಬಚ್ಚಿಟ್ಟು ಮುನ್ನಡೆಯುವುದು’ ಎಂಬ ಸಾಲುಗಳ ಮೂಲಕ ತಮ್ಮ ಮನೋಧರ್ಮವನ್ನು ಸ್ಪಷ್ಟಪಡಿಸಿದ್ದು ಹಾಗೂ ಆ ಮೂಲಕ ಜೀವನ ಸಂದೇಶ ನೀಡಿದ್ದೂ, ಒಂದು ಉತ್ತಮ ಕಾವ್ಯ ಉಂಟು ಮಾಡುವ ಪರಿಣಾಮವೇ ಆಗಿದೆ’ ಎಂದು ಪ್ರಶಂಸಿಸಿದ್ದಾರೆ.

ಕೃತಿಗೆ ಬೆನ್ನುಡಿ ಬರೆದ ವಿಜಯಪುರದ ಚಂದ್ರಶೇಖರ ಹಡಪದ ‘ಸಂಕಲನದಲ್ಲಿಯ ಬಹುತೇಕ ಕವನಗಳು ಚಿಂತನಾಪ್ರೇರಕವಾಗಿವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ನೂರುಲ್ಲಾ ತ್ಯಾಮಗೊಂಡ್ಲು
(01 July 1982)

ನೂರುಲ್ಲಾ ತ್ಯಾಮಗೊಂಡ್ಲು ಅವರು ಹುಟ್ಟಿದ್ದು (ಜನನ: 01-07-1982)ತುಮಕೂರಿನಲ್ಲಿ ಸದ್ಯ ತ್ಯಾಮಗೊಂಡ್ಲುವಿನಲ್ಲಿ ವಾಸ. ಕುವೆಂಪು ವಿಶ್ವವಿದ್ಯಾಲಯದ ದೂರು ಶಿಕ್ಷಣದ ಮೂಲಕ ಎಂ.ಎ. ಪೂರೈಸಿದರು.  ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಕಾನ್ಸ್ ಟೇಬಲ್ ಆಗಿ ಸೇರಿದ್ದು, ನಂತರ ಕೆಪಿಎಸ್ ಸಿ ಪರೀಕ್ಷೆ ಎದುರಿಸಿ ನ್ಯಾಯಾಂಗ ಇಲಾಖೆಯಲ್ಲಿ ಕರ್ಕ್ಲ್ ಆಗಿ ಮಧುಗಿರಿಯ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೂಫಿ ತತ್ವವನ್ನು ಅಪ್ಪಿಕೊಂಡಿದ್ದು, ಈಗಾಗಲೇ ‘ಬೆಳಕಿನ ಬುಗ್ಗೆ” ಕವನ ಸಂಕಲನ ಪ್ರಕಟಿಸಿದ್ದಾರೆ. ಹಂಪಿಯ ಕನ್ನಡ ವಿ.ವಿ. ನಡೆಸುವ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಬಹುಮಾನಿತರು. ‘ನನ್ನಪ್ಪ ಒಂದು ಗ್ಯಾಲಕ್ಸಿ’ ಎಂಬುದು ಇವರ ಎರಡನೇ ಕವನ ಸಂಕಲನ.  ...

READ MORE

Related Books