ನೂರುಲ್ಲಾ ತ್ಯಾಮಗೊಂಡ್ಲು ಅವರು ಹುಟ್ಟಿದ್ದು (ಜನನ: 01-07-1982)ತುಮಕೂರಿನಲ್ಲಿ ಸದ್ಯ ತ್ಯಾಮಗೊಂಡ್ಲುವಿನಲ್ಲಿ ವಾಸ. ಕುವೆಂಪು ವಿಶ್ವವಿದ್ಯಾಲಯದ ದೂರು ಶಿಕ್ಷಣದ ಮೂಲಕ ಎಂ.ಎ. ಪೂರೈಸಿದರು.
ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಕಾನ್ಸ್ ಟೇಬಲ್ ಆಗಿ ಸೇರಿದ್ದು, ನಂತರ ಕೆಪಿಎಸ್ ಸಿ ಪರೀಕ್ಷೆ ಎದುರಿಸಿ ನ್ಯಾಯಾಂಗ ಇಲಾಖೆಯಲ್ಲಿ ಕರ್ಕ್ಲ್ ಆಗಿ ಮಧುಗಿರಿಯ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೂಫಿ ತತ್ವವನ್ನು ಅಪ್ಪಿಕೊಂಡಿದ್ದು, ಈಗಾಗಲೇ ‘ಬೆಳಕಿನ ಬುಗ್ಗೆ” ಕವನ ಸಂಕಲನ ಪ್ರಕಟಿಸಿದ್ದಾರೆ.
ಹಂಪಿಯ ಕನ್ನಡ ವಿ.ವಿ. ನಡೆಸುವ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಬಹುಮಾನಿತರು. ‘ನನ್ನಪ್ಪ ಒಂದು ಗ್ಯಾಲಕ್ಸಿ’ ಎಂಬುದು ಇವರ ಎರಡನೇ ಕವನ ಸಂಕಲನ.