ವರ್ತಮಾನಕ್ಕೆ ಸಾಕ್ಷಿಯಾದ ಕವಿತೆಗಳು

Author : ಪ್ರಭಾಕರ ಬಿಳ್ಳೂರು

Pages 112

₹ 120.00




Year of Publication: 2020
Published by: ಸಾಹಿತ್ಯಲೋಕ ಪಬ್ಲಿಕೇಷನ್ಸ್
Address: #742, 12ನೇ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು-560010.
Phone: 9945939436

Synopsys

ಪ್ರಭಾಕರ ಬಿಳ್ಳೂರು ಅವರು ಬರೆದ ಕವನಗಳ ಸಂಕಲನ-‘ವರ್ತಮಾನಕ್ಕೆ ಸಾಕ್ಷಿಯಾದ ಕವಿತೆಗಳು’. ಇಲ್ಲಿ ಒಟ್ಟು 53 ಕವಿತೆಗಳಿವೆ. ವಸ್ತು ವೈವಿಧ್ಯತೆಯಿಂದ ಗಮನ ಸೆಳೆಯುವ ಇಲ್ಲಿಯ ಕವಿತೆಗಳು ವಿನೂತನ ಶೈಲಿಯಿಂದಲೂ ಕಂಗೊಳಿಸುತ್ತವೆ. ಸದಲಗಾ ಗೀತಾಶ್ರಮದ ಶ್ರೀ ಶ್ರದ್ಧಾನಂದ ಸ್ವಾಮೀಜಿ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ‘ವರ್ತಮಾನಕ್ಕೆ ಸಾಕ್ಷಿಯಾಗುವುದೆಂದರೆ ಕಣ್ಣಾರೆ ಕಾಣುವುದು, ಅದರಲ್ಲಿರುವ ಲೋಪದೋಷಗಳನ್ನು ಸರಿಪಡಿಸುವುದು, ಅಲ್ಲಿ ಬರಬಹುದಾದ ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸಿ ಮುನ್ನಡೆಯುವುದು, ಅದರಿಂದ, ನಮ್ಮ ವರ್ತಮಾನದ ಬದುಕು ಸುಂದರ, ಬಂಧುರ. ವರ್ತಮಾನ ಸುಂದರವಾದರೆ ಭೂತ-ಭವಿಷ್ಯತ್ತುಗಳು ಸುಂದರವಾಗಿರುತ್ತವೆ. ‘ಕವಿತೆಗಳನ್ನು ಬರೆಯುವುದೆಂದರೆ ತಮಗೆ ಧರ್ಮ, ಅದರಂತೆ ಬದುಕುವುದೆಂದರೆ ಅದೇ ಸುಧರ್ಮ’ ವನ್ನು ಎಂದು ಕವಿಗಳು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದ ಭಾವವನ್ನುಸ್ವಾಮೀಜಿ ಅವರು ಪ್ರಶಂಸಿಸಿದ್ದಾರೆ.

About the Author

ಪ್ರಭಾಕರ ಬಿಳ್ಳೂರು
(01 December 1938 - 13 February 2019)

ಪ್ರಭಾಕರ ಬಿಳ್ಳೂರು ಅವರು ಬೆಳಗಾವಿ ಜಿಲ್ಲೆಯ ಅಥಣಿಯವರು (ಜನನ: 01-12-1938) ಅಥಣಿಯಲ್ಲೇ ಪಿಯುಸಿ ನಂತರ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಎಂಎ. ತದನಂತರ ಬಿ.ಇಡಿ ಪದವಿ ಪಡೆದರು. ಶಿರುಗುಪ್ಪಿಯ  ಶ್ರೀ ಸಿದ್ದೇಶ್ವರ ವಿದ್ಯಾಲಯದ ಮುಖ್ಯೋಪಾಧ್ಯಯರಾಗಿ ನಿವೃತ್ತರಾದರು. ಇವರ ಮೊದಲ ನಾಟಕ-ಶ್ರೀ ಧರ್ಮ ರಕ್ಷಕ ಮಹಾವೀರ’. ಮೊದಲ ಕವನ ಸಂಕಲನ-ತಿಳಿನೀರು. ಪೂಜ್ಯ ಮಾತಾಜಿ ಪ್ರಕಾಶನ ಸಂಸ್ಥೆಯೊಂದನ್ನುಸ್ಥಾಪಿಸಿದ್ದರು. ಮಿರ್ಜಿ ಅಣ್ಣಾರಾಯರ ಚಂದ್ರಗಂಗಾ ಜ್ಞಾನಪೀಠ ಪ್ರಕಾಶನವು ಇವರ ‘ತಿಳಿನೀರು’ ಕವನ ಸಂಕಲನವನ್ನು ಪ್ರಕಟಿಸಿತ್ತು. ಸಿಂಪಿಯೊಡೆದ ಮುತ್ತುಗಳು-ಎಂಬುದು ಇವರ ಮತ್ತೊಂದು ಕವನ ಸಂಕಲನ. 2019ರ ಫೆಬ್ರವರಿ 13 ರಂದು ನಿಧನರಾದರು. ...

READ MORE

Related Books