ವನಜಮ್ಮನ ಸೀಟು

Author : ಉಮಾ ರಾವ್

Pages 53

₹ 70.00




Published by: ವಿಕಾಸ ಪ್ರಕಾಶನ
Address: ಬೆಂಗಳೂರು.

Synopsys

ʼವನಜಮ್ಮನ ಸೀಟುʼ  ಎಂಬುದು ಉಮಾ ರಾವ್ ರಚಿಸಿರುವ ಕಾದಂಬರಿ.  ಸೂಕ್ಷ್ಮವಾಗಿ ಅಂಶಗಳನ್ಗು ಗುರುತಿಸಿ, ತಮ್ಮ ಕಥಾನಕವನ್ನು ಹೆಣೆಯುತ್ತಾರೆ. ಅವರು ಸಮುದಾಯವನ್ನು, ಅದರ ವಿಭಿನ್ನ ಸ್ತರಗಳನ್ನು, ಅಂತಸ್ತು, ವರ್ಗ, ಪ್ರಭೇದ, ಮನೋಧರ್ಮಗಳ ಸಹಿತ ತಮ್ಮ ಕೃತಿಯ ಚೌಕಟ್ಟಿನೊಳಕ್ಕೆ ಅತ್ಯಂತ ಸಹಜವಾಗಿ ತರಬಲ್ಲರು. ಮನುಷ್ಯನ ದ್ವಂದ್ವವನ್ನು, ತನ್ನದೇ ಅಂತಃಸ್ಸತ್ವದ ಎದುರು ತಲೆತಗ್ಗಿಸದೇ ಇರಲಾರದ ಅವನ ಆತ್ಮದ ಕುಹಕವನ್ನು, ವಿರೋಧ ಸಾಧ್ಯವಾಗದ ಷಂಡತನವನ್ನು ರೂಪಕವಾಗಿಯೂ ವಸ್ತುಸ್ಥಿತಿಯಾಗಿಯೂ ನಮಗೆ ತೋರಬಲ್ಲರು. ವನಜಮ್ಮನ ನಾಜೂಕು ನಿಲುವು, ಸಾಮಾಜಿಕ ಕಟ್ಟುಪಾಡುಗಳ ಗಡಿರೇಖೆಗಳ ಸ್ಪಷ್ಟವಾದ ಅರಿವು ಮತ್ತು ತನ್ನದೇ ಸ್ವಂತದ ಯುಕ್ತಾಯುಕ್ತ ಪ್ರಜ್ಞೆ ಅಚ್ಚರಿ ಹುಟ್ಟಿಸುವಾಗಲೇ ಇದೆಲ್ಲವೂ ಸಂಘರ್ಷಕ್ಕೆ ಬೆನ್ನಿಕ್ಕುವ ತಂತ್ರವೂ ಇರಬಹುದಲ್ಲವೆ ಎನಿಸುವಾಗಲೂ, ಆ ಪಾತ್ರದ ಚೌಕಟ್ಟಿನಲ್ಲಿ ಈ ಬಗೆಯ ನಿರ್ವಹಣೆ ನಮ್ಮ ಮೆಚ್ಚುಗೆಗೆ ಪಾತ್ರವಾಗುತ್ತದೆ. ಇಡೀ ಕಾದಂಬರಿಯ ಕಥಾನಕದ ನಡೆಯುದ್ದಕ್ಕೂ ಸಿದ್ಧಗೊಳ್ಳುತ್ತ ಹೋಗುವ ಗಮ್ಯ ಕೊನೆಗೂ ವೈಯಕ್ತಿಕ ತುರ್ತಿನದ್ದಷ್ಟೇ ಆಗಿರಬಹುದು, ತಪ್ಪೇನಿಲ್ಲ. ಆದರೆ ಅದಕ್ಕೆ ಒಂದು ಸಾಮಾಜಿಕ ಮುಖವೂ ಇರುವುದು ಸುಳ್ಳಲ್ಲ ಮತ್ತು ಅದರಿಂದಾಗಿಯೇ ನಮಗೆ ಈ ಇಲ್ಲಿಯ ವಸ್ತು ಪ್ರಸ್ತುತವಾಗುವುದು.

About the Author

ಉಮಾ ರಾವ್
(01 September 1948)

1948 ಸೆಪ್ಟಂಬರ್ 1ರಂದು ಜನಿಸಿದ ಇವರು ಜಾಹೀರಾತು ಉದ್ಯಮದಲ್ಲಿ ಕಾಪಿರೈಟರ್, ಪತ್ರಕರ್ತೆಯಾಗಿ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಿದ್ದಾರೆ. ಸೃಜನಶೀಲ, ಪ್ರಗತಿಪರ ವಿಚಾರಧಾರೆಗಳನ್ನು ಪ್ರತಿಪಾದಿಸುವ, ಸೂಕ್ಷ್ಮ ಸಂವೇದನೆಯುಳ್ಳ ಲೇಖಕಿಯಾಗಿ ಮುಖ್ಯವೆನಿಸುತ್ತಾರೆ. 80ರ ದಶಕದಲ್ಲಿ, ಉಮಾರಾವ್ ರವರು 'ಫ್ರೀಲಾನ್ಸ್ ಕಾಪಿರೈಟರ್' ಹಾಗೂ 'ಜರ್ನಲಿಸ್ಟ್' ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಉಮಾರವರ ಬರಹ, ಕಥೆಗಳು ಕನ್ನಡದ ಹಲವಾರು ದಿನಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಮಹಿಳಾ ವರ್ಷ ದತ್ತಿ ನಿಧಿ ಪ್ರಶಸ್ತಿ, ಗೊರುರು ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ ಸಾವಿತ್ರಮ್ಮ ಪ್ರಶಸ್ತಿ, ಮುಂಬೈ ಡೈರಿಗೆ ಬಹುಮಾನ ಲಭಿಸಿದೆ. ಅಗಸ್ತ್ಯ, ಕಾಡು ಹಾದಿ, ...

READ MORE

Related Books