‘ಬೀಸು’ ಕೃತಿಯು ಶೇಷನಾರಾಯಣ ಅವರ ಕಾದಂಬರಿಯಾಗಿದೆ. 1983 ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ಈ ಪುಸ್ತಕಕ್ಕೆ ಲಭಿಸಿರುತ್ತದೆ.
ಪ್ರಸಿದ್ಧ ಕತೆಗಾರ, ಬರಹಗಾರರಾದ ಶೇಷನಾರಾಯಣರು ಹುಟ್ಟಿದ್ದು ಕೊಯಮತ್ತೂರು ಜಿಲ್ಲೆಯ ತಾಳವಾಡಿ ಫಿರ್ಕಾಗೆ ಸೇರಿದ ಪಾಳ್ಯದಲ್ಲಿ. ತಂದೆ ಬಿ.ವಿ. ಸುಬ್ರಹ್ಮಣ್ಯ, ತಾಯಿ ಕಾವೇರಮ್ಮ. ಓದಿದ್ದು ನಾಲ್ಕನೆಯ ತರಗತಿವರೆಗೆ. ಶಾಲಾ ಕಾಲೇಜು ಸೇರಿ ಅಲ್ಲಿನ ಜೀವನವನ್ನು ಅನುಭವಿಸಬೇಕಿದ್ದ ದಿನಗಳಲ್ಲಿ ಕೆಲಸಕ್ಕಾಗಿ ಅಲೆದು, ಪಡೆದದ್ದು ಇಡೀ ಭಾರತ ದರ್ಶನ. ತಿರುಪತಿ ತಿಮ್ಮಪ್ಪನ ಫೋಟೋ ಮಾರಾಟ, ಅಷ್ಟೇಕೆ ಗಾರೆ ಕೆಲಸ, ರೈಲುಬಸ್ಸು ನಿಲ್ದಾಣಗಳಲ್ಲಿ ಹೊರೆಹೊತ್ತ ಕೂಲಿಯಾಗಿ, ಇವರಿಗೇ ತಿಳಿಯದೆ ಅದೆಷ್ಟು ಸಾಹಿತಿಗಳ ಹೊರೆ ಹೊತ್ತಿದ್ದಾರೋ ? ಲಾರಿಗಳಿಗೆ ಸರಕು ತುಂಬುವ ಕೂಲಿಯಾಗಿ ಹೀಗೆ ಒಂದೇ, ಎರಡೇ . ಭಾರತವೆಲ್ಲಾ ಸುತ್ತಿ ಗಂಗೆ, ನರ್ಮದೆ, ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ : ಕಾದಂಬರಿ