‘ಯಾಕ ಚಿಂತಿ ಮಾಡತಿದಿ ಎಲೆ ಮನವೇ’ ಲೇಖಕ ಡಾ. ಲಕ್ಷ್ಮಣ ಕೌಂಟೆ ಅವರು ರಚಿಸಿರುವ ತತ್ತ್ವ ಪದಕಾರ ಕಡಕೋಳ ಮಡಿವಾಳಪ್ಪನವರ ಜೀವನಾಧಾರಿತ ಕಾದಂಬರಿ. ಕಡಕೋಳ ಮಡಿವಾಳಪ್ಪನವರು ಶಿಶುನಾಳ ಶರೀಫರಿಗಿಂತ ಮೂರು-ನಾಲ್ಕು ದಶಕಗಳ ಮುಂಚೆಯೇ ತತ್ತ್ವಪದಕಾರರಾಗಿ ಹೆಸರಿವಾಸಿಯಾದವರು. ಅತ್ಯಂತ ಕ್ರಾಂತಿಕಾರಿಯಾದ, ಸಮಾಜದಲ್ಲಿನ ಅಲ್ಲದ ನಡೆಗಳನ್ನು ಖಡಾಖಂಡಿತವಾಗಿ ಟೀಕಿಸುವ ಬಂಡಾಯಗಾರ ಮಠಾಧೀಶರು. ಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣದ ಬಸವಾದಿ ಶರಣರು ಹೇಗೋ ಹಾಗೆಯೇ ಹದಿನೆಂಟನೆಯ ಶತಮಾನದಲ್ಲಿ ಕಡಕೋಳ ಮಡಿವಾಳಪ್ಪನವರು. ಈ ಕಾದಂಬರಿಯಲ್ಲಿ ಮಡಿವಾಳಪ್ಪನವರ ಬದುಕಿನ ಕ್ರಾಂತಿಯನ್ನೇ ಕತೆಯಾಗಿಸಿ ಅರ್ಥಪೂರ್ಣ ಕೃತಿಯಾಗಿಸಿದ್ದಾರೆ ಲೇಖಕ ಲಕ್ಷ್ಮಣ್ ಕೌಂಟೆ.
ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...
READ MORE