ಟಿ.ಕೆ. ರಾಮರಾವ್ ಅವರು ಬರೆದ ಕಾದಂಬರಿ-ಕಹಳೆ ಬಂಡೆ. ವಸ್ತುವಿನ ಆಯ್ಕೆ, ನಿರೂಪಣಾ ಶೈಲಿ, ಸನ್ನಿವೇಶ-ಘಟನೆಗಳನ್ನು ಹೆಣೆಯುವಲ್ಲಿರುವ ಕಲಾತ್ಮಕತೆ ಓದುಗರನ್ನು ಸೆಳೆಯುತ್ತದೆ. ಕಹಳೆ ಬಂಡೆ ಒಂದು ತಾಣವಾಗಿ, ಕಥಾವಸ್ತುವಾಗಿರುವುದು ಇಲ್ಲಿಯ ವಿಶೇಷ.
ಪತ್ತೇದಾರಿ ಕಾದಂಬರಿಕಾರ ಟಿ.ಕೆ. ರಾಮರಾಯರು (ಜನನ:07-10-1931) ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದವರು. ತಂದೆ ಟಿ. ಕೃಷ್ಣಮೂರ್ತಿ. ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಆಗಿದ್ದವರು, ತಾಯಿ ನಾಗಮ್ಮ. ಕಡೂರು, ಅರಸೀಕೆರೆ ಇತರೆಡೆ ಆರಂಭಿಕ ಶಿಕ್ಷಣ, ಕೋಲಾರದಲ್ಲಿ. ಹೈಸ್ಕೂಲ್ ಶಿಕ್ಷಣ, ಪತ್ತೇದಾರಿ ಕಾದಂಬರಿ ‘ಭಾಸ್ಕರ ಅಥವಾ ಸೇಡು’. ಕಾಲೇಜು ಓದುತ್ತಿರುವಾಗಲೇ ಅಲೆಕ್ಸಾಂಡರ್ ಡ್ಯೂಮ, ವಿಕ್ಟರ್ ಹ್ಯೂಗೋ, ಥಾಮರ್ಸ್ ಹಾರ್ಡಿ, ಬರ್ನಾರ್ಡ್ ಷಾ -ಇವರ ಅಚ್ಚುಮೆಚ್ಚಿನ ಲೇಖಕರು. ಬಿ.ಎಸ್‌ಸಿ. ಆನರ್ಸ್ ಪದವೀಧರರು. ಗಾಂಧಿನಗರದ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ಮದರಾಸಿನಲ್ಲಿ ರೈಲ್ವೆಗಾರ್ಡ್ ಎಂದು ಕೆಲಸ ಮಾಡಿದರು. ರೈಲ್ವೆಯಲ್ಲಿದ್ದ ತಂದೆಯವರ ನಿಧನದಿಂದ ಇವರಿಗೆ ಮಾನವೀಯ ದೃಷ್ಟಿಯಿಂದ ಕೆಲಸ ನೀಡಲಾಗಿತು. ಆದರೆ, ಅಣ್ಣನ ಸಾವು ಸಂಭವಿಸಿತು. ಕುಟುಂಬ ...
READ MORE