‘ಎಂದೆಂದಿಗೂ’ ಕೃತಿಯು ಸತ್ಯನಾರಾಯಣ ಆಲದರ್ತಿ ಅವರ ಕಾದಂಬರಿಯಾಗಿದೆ. ಪ್ರಾರಂಭದಿಂದ ಕೊನೆಯವರೆಗೂ ಹಲವಾರು ಪ್ರಮುಖ ಪಾತ್ರಗಳಿದ್ದು ಎಲ್ಲವನ್ನು ತನ್ನದೇ ದಾಟಿಯಲ್ಲಿ ಈ ಕೃತಿಯು ನಿರೂಪಿಸುತ್ತದೆ. ಈ ಕಾದಂಬರಿ ಬಹುಮುಖ್ಯವಾಗಿ ಅಂತರ್ಜಾತೀಯ ವಿವಾಹದ ದುರಂತವನ್ನು ಹೇಳುತ್ತದೆ ಎಂದೆನಿಸಿದರೂ ಅದರ ಒಡಲೊಳಗೆ ಅನೇಕ ವೈಚಾರಿಕ ಅಂಶಗಳನ್ನು, ಸಿದ್ದಾಂತಗಳನ್ನು, ನಂಬಿಕೆಗಳನ್ನು ಮೂಢನಂಬಿಕೆಗಳನ್ನು, ಇತಿಹಾಸ, ಸಂಸ್ಕೃತಿ ಮುಂತಾದವುಗಳ ದರ್ಶನ ಮಾಡಿಸುತ್ತಾ ಹೋಗುತ್ತದೆ. ಅಲ್ಲದೆ ಓದುಗನೊಂದಿಗೆ ಸಂವಾದಿಸುತ್ತಾ, ಚರ್ಚಿಸುತ್ತಾ ಸಾಗುತ್ತದೆ. ಯೌವನದ ತುರಿಯಾವಸ್ಥೆಯಲ್ಲಿಯ ಪ್ರೇಮ ಕಾಮದ ಅನೇಕ ಸನ್ನಿವೇಶಗಳು, ಘಟನೆಗಳು ಅತ್ಯಂತ ಸಾಮಾನ್ಯವಾಗಿ ಸರಳವಾಗಿ ಚಿತ್ರಿತಗೊಂಡರೂ, ಹಿನ್ನೆಲೆಯಲ್ಲಿ ಪ್ರಾದೇಶಿಕವಾದ ಐತಿಹಾಸಿಕ, ಸೈದ್ಧಾಂತಿಕ ದೃಶ್ಯಗಳನ್ನು ಕೃತಿಕಾರರು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ಲೇಖಕ ಸತ್ಯನಾರಾಯಣ ಆಲದರ್ತಿ ಅವರು ಮೂಲತಃ ಯಾದಗಿರಿಯವರು. ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿರುವ ಅವರು ಪ್ರಸ್ತುತ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಕೃತಿಗಳು: ಎಂದೆಂದಿಗೂ(ಕಾದಂಬರಿ) ...
READ MORE