‘ಅತಿಮಾನುಷ’ ಗುರುರಾಜ ಕೊಡ್ಕಣಿ ಅವರ ಮೂರನೆಯ ಕಾದಂಬರಿ. ಮೊದಲೆರಡು ಕಾದಂಬರಿ ಗಳಂತೆಯೇ ಇದರ ಕಥಾವಸ್ತು ಕೂಡ ಹಾರರ್ ಥ್ರಿಲ್ಲರ್. ಯಾವುದೋ ಸಿದ್ಧಾಂತ, ಫಿಲಾಸಫಿಗಳ ಹಂಗಿಲ್ಲದ ಶುದ್ಧಾನುಶುದ್ಧ ಮನೋರಂಜನೆ ಮಾತ್ರವೇ ಈ ಕಾದಂಬರಿಯ ಉದ್ದೇಶ. ಸಾವು, ನೋವು, ಸೇಡು, ಮಾಟ ಮಂತ್ರ, ನಿಗೂಢತೆಯನ್ನು ಭೇದಿಸುವ ಪ್ರಯತ್ನ, ಕೌಟುಂಬಿಕ ಕಲಹ, ಮನೋವಿಜ್ಞಾನ ಹೀಗೆ ಇಂತಹ ಕಥೆಯಲ್ಲಿ ಏನೇನಿರಬೇಕೋ ಅದೆಲ್ಲವೂ ಸೂಕ್ತವಾಗಿ ಹೊಂದಿಕೆಯಾಗುವ ಕಥಾವಸ್ತು ಇಲ್ಲಿದೆ. ವರ್ತಮಾನದ ತಲ್ಲಣಗಳಿವೆ ಇತಿಹಾಸದ ಬೇರುಗಳಿವೆ. ಅವು ಕಗ್ಗಂಟಾಗಿವೆ. ಇದನ್ನು ರೋಚಕವಾಗಿ ಬಿಡಿಸುತ್ತಲೇ ಕಥೆ ಕುತೂಹಲಕರವಾಗಿ ಬೆಳೆಯುತ್ತದೆ. ಅಧ್ಯಾಯದಿಂದ ಅಧ್ಯಾಯಕ್ಕೆ ನಿಗೂಢತೆಯ ಕಡೆಗೆ ಸಾಗುವ ಪರ್ವನ ಪಾತ್ರದಂತೆ, ನಾಗವೇಣಿ ಪಾತ್ರ ಕೂಡ ಕಾಡುತ್ತದೆ. ಅಂಚಿನಲ್ಲಿ ಬಂದಿಳಿಯುವ ಸಂಧ್ಯಾ ಕೂಡ ಓದುಗರ ಸಹಾನುಭೂತಿಗೆ ಪಾತ್ರರಾಗುತ್ತಾಳೆ. ಹಾಗೆ ನೋಡಿದರೆ ಗಟ್ಟಿಯಾದ ಪಾತ್ರ ಚಿತ್ರಣವೇ ಈ ಕಾದಂಬರಿಯ ಜೀವಾಳ ಎನ್ನ ಬಹುದು.
ಕಾದಂಬರಿಕಾರ, ಅಂಕಣಕಾರ, ಅನುವಾದಕ ಗುರುರಾಜ ಕೊಡ್ಕಣಿ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ ಓದಿದ್ದು ಇಂಜಿನಿಯರಿಂಗ್, ಪ್ರಸ್ತುತ ಭಾರತೀಯ ಜೀವ ವಿಮಾ ನಿಗಮದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಹಾಯ್ ಬೆಂಗಳೂರು’ ಮತ್ತು ‘ಹಿಮಾಗ್ನಿ’ ವಾರಪತ್ರಿಕೆಗಳ ಅಂಕಣಕಾರರಾಗಿ ಬರಹದ ಬದುಕು ಆರಂಭಿಸಿದ ಅವರು ನಂತರದಲ್ಲಿ ಕಾದಂಬರಿಕಾರ, ಅನುವಾದಕರಾಗಿ ಗುರುತಿಸಿಕೊಂಡರು. ಉಳಿದಂತೆ ‘ಅಂಕಣಕ್ಕೆ ಅನುವಾದಿತ ಕಥೆಗಳು’ ಎನ್ನುವ ಇಂಗ್ಲಿಷ್ ಸಣ್ಣ ಕತೆಗಳ ಅನುವಾದಿತ ಕಥಾಸಂಕಲನ ಕೂಡ ಪ್ರಕಟವಾಗಿರುತ್ತದೆ. ಅಷ್ಟೇಅಲ್ಲದೆ ಲಘು ಹರಟೆಯ ಶೈಲಿಯ ಬರಹಗಳ ಸಂಕಲನ, ‘ಸವಿ ಸವಿನೆನಪು ಸಾವಿರ ನೆನಪು’ ಎನ್ನುವ ಇ-ಬುಕ್ ಸಹ ಪ್ರಕಟಗೊಂಡಿದೆ. ಕೃತಿಗಳು: ಶತಕಂಪಿನೀ, ವಿಕ್ಷಿಪ್ತ, ...
READ MORE