ಲೇಖಕ ದೊಡ್ಡೇರಿ ವೆಂಕಟಗಿರಿರಾವ್ ಅವರ ಕಾದಂಬರಿ-ಸಂಪ್ರದಾನ. ಸಾಮಾಜಿಕ ವಿಷಯವಸ್ತುವನ್ನಾಧರಿಸಿದ ಕಾದಂಬರಿಯು ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಓದುಗರ ಗಮನ ಸೆಳೆಯುತ್ತದೆ.
.ದೊಡ್ಡೇರಿ ವೆಂಕಟರಾವ್ಅವರು ಚಿತ್ರಗ್ರಹಣ ಪ್ರವೀಣರೂ, ಕಾದಂಬರಿಕಾರರು. ಸಾಹಿತ್ಯ ಕೃಷಿ, ಛಾಯಾಗ್ರಹಣದಲ್ಲಿ ಪ್ರವೀಣರು. ಇವರು 1913 ಡಿಸೆಂಬರ್ 28 ರಂದು ಸೊರಬ ತಾಲ್ಲೂಕಿನ ದೊಡ್ಡೇರಿಯಲ್ಲಿ ಜನಿಸಿದರು. ಸಾಹಿತ್ಯ ಕೃಷಿಯ ಆರಂಭದಲ್ಲಿ “ಕಲಾಕುಮಾರ” ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದರು. ವೃತ್ತಿಯಲ್ಲಿ ವೈದ್ಯರು. ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮುಕ್ತಾ, ಅವಧಾನ, ದೃಷ್ಟಿದಾನ ಅವರ ಪ್ರಮುಖ ಕಾದಂಬರಿಗಳು. ಪುಟ್ಟಣ್ಣ ಕಣಗಾಲ ಅವರ “ಅಮೃತ ಘಳಿಗೆ”, ಇವರ ಕಾದಂಬರಿ (ಅವಧಾನ) ಆಧಾರಿತವಾದದ್ದು. ಇಷ್ಟಕಾಮ್ಯ ಇವರ ಕಾದಂಬರಿ ಆಧಾರಿತ ಚಲನಚಿತ್ರವಾಗಿದ್ದು, ಅದೇ ಹೆಸರಿನಲ್ಲಿ ಪ್ರಕಟಗೊಂಡಿದೆ. ಅವರು ಮನೋವಿಜ್ಞಾನದ ವಿಷಯವನ್ನಾಧರಿಸಿ “ವಿಕೃತ ಕಾಮ, ಪ್ರಸವ ಜ್ಞಾನ, ಸಂತಾನ ಸಂಯಮ” ಎಂಬ ...
READ MORE