ಎಂ. ಸಿ. ಪದ್ಮಾ ಅವರ ‘ನಿಶಿ ಕಡೆದ ನಕ್ಷತ್ರ’ ಸಾಮಾಜಿಕ ಕಾದಂಬರಿ. ಕುಟುಂಬ ಜೀವನದಲ್ಲಿ ಉದ್ಭವಿಸುವ ಸ್ವಾರ್ಥದ ಅಲೆಗಳನ್ನು ದೃಢ ಮನಸ್ಸಿನಿಂದ ಎದುರಿಸಿ ದಡ ಸೇರಲು ತವಕಿಸುವ ಒಂದು ಹೆಣ್ಣಿನ ಕಥೆ ಇದರಲ್ಲಿದೆ. ಲೇಖಕಿ ಪದ್ಮಾ ಅವರು ಇದನ್ನು ಅತಿ ಗೋಳಿನ ಅಥವಾ ಉನ್ನತ ಆದರ್ಶಗಳ ಕಲ್ಪನೆಯಾಗಿ ಬರೆದಿಲ್ಲ. ಇಂದಿನ ಆಧುನಿಕ, ನಾಗರಿಕ ಸಂಸಾರಗಳಲ್ಲೂ ಕಾಣಬಹುದಾದ ತಣ್ಣನೆಯ ಅಸೂಯೆ, ಸೋಗಿನ ನಮ್ರತೆ ಈ ಕಾದಂಬರಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಸುಜಾತಾ ಇಲ್ಲಿ ಕಥಾನಾಯಕಿ.
ಹೆಣ್ಣಿನ ಅಂತರಾಳವನ್ನು ಅರಿತು, ಅದಕ್ಕೊಂದು ಸಾಹಿತ್ಯ ರೂಪಕ ಕೊಟ್ಟು ಕಾದಂಬರಿಗಳನ್ನು ರಚಿಸುತ್ತಿದ್ದರು ’ಪದ್ಮಾ ಎಂ.ಸಿ’ ಅವರು. ಅವರು 1946 ಮಾರ್ಚ್ 19ರಂದು ಬೆಂಗಳೂರಿನಲ್ಲಿ ಜನಿಸಿದರು. ’ಪ್ರೇಮಮಯಿ, ಸವತಿ ಕಸೂರಿ, ಸುಪ್ರಭಾತ, ಶಶಿಕಿರಣ, ಮಂಜು ಕರಗಿತು, ಪ್ರೇಮ ವಸಂತ, ಅಂತರಾಳ, ಸತಿ’ ಅವರ ಪ್ರಮುಖ ಸ್ತ್ರೀ ಸಂವೇದನೆಯುಳ್ಳ ಕಾದಂಬರಿಗಲು. “ಚಿಟ್ಟೆಯಾಗಿ ಹಾರಿತು” ಅವರ ಮೊದಲ ಕಥಾ ಸಂಕಲನ. ತಮಿಳಿನಿಂದ ಕನ್ನಡಕ್ಕೆ ’ದೀಪದ ಹುಳು’ ಕೃತಿಯನ್ನು ಅನುವಾದಿಸಿದ್ದಾರೆ. ...
READ MORE