ಛಿನ್ನಮಸ್ತಾ

Author : ಆರ್.ಪಿ. ಹೆಗಡೆ

₹ 120.00




Published by: ರವೀಂದ್ರ ಪುಸ್ತಕಾಲಯ
Address: ಚಾಮರಾಜ ಪೇಟೆ, ಸಾಗರ -577 401.(ಜಿಲ್ಲೆ: ಶಿವಮೊಗ್ಗ)

Synopsys

'ಛಿನ್ನಮಸ್ತಾ' ಕಾದಂಬರಿಯು ಮೂಲತಃ ಅಸ್ಸಾಮೀ ಕಾದಂಬರಿ.ಈ ಕೃತಿಯನ್ನು ಕನ್ನಡಕ್ಕೆ ತಂದವರು ಆರ್.ಪಿ.ಹೆಗಡೆಯವರು. ಜ್ಞಾನಪೀಠ ಪುರಸ್ಕೃತ ಲೇಖಕಿಯರ ಕೃತಿ ಮಾಲಿಕೆಯಡಿ ಕಾದಂಬರಿ ಪ್ರಕಟವಾಗಿದೆ. ವಿಭಿನ್ನ ಅನುಭವ ಲೋಕವೊಂದನ್ನು ತೆರೆದಿಡುತ್ತದೆ. ಕಾದಂಬರಿಯ ಆಕೃತಿ ತನ್ನದೇ ಆದ ಒಂದು ಹೊಸತನದಿಂದ ಕೂಡಿದೆ. ಹೆಚ್ಚಿನ ಸನ್ನಿವೇಶಗಳು ಮಂಜು ಮುಸುಕಿದ ಬ್ರಾಹ್ಮೀಮುಹೂರ್ತದ ನಸುಗತ್ತಲಿನಲ್ಲಿ ಅಥವಾ ಸಂಜೆಗತ್ತಲಿನಲ್ಲಿ ನಡೆದರೆ ಇನ್ನುಳಿದಂತೆ ಸದಾ ಸುರಿಯುತ್ತಿರುವ ಮಳೆ ಅಥವಾ ಮಂಜು ಇಲ್ಲಿನ ಪರಿಸರಕ್ಕೂ ಹೊದಿಸುವ ಒಂದು ಬಗೆಯ ನಿಗೂಢತೆ ಕಾದಂಬರಿಗೆ ಬೇಕಾದ ವಿಶಿಷ್ಟ ಧ್ವನಿಯನ್ನು ಕೊಟ್ಟಿರುವಂತಿದೆ. ಸ್ವಲ್ಪಮಟ್ಟಿಗೆ ಕನ್ನಡದ ಓದುಗರಿಗೆ ಹೊಸತೇ ಆದ ಒಂದು ಜಗತ್ತಿನ ಅನಾವರಣ ಈ ಕಾದಂಬರಿಯಲ್ಲಡಗಿದೆ. ಇಲ್ಲಿ ತೆರೆದುಕೊಳ್ಳುವ ಪ್ರಕೃತಿ ಕಣ್ಣಿಗೆ ಕಟ್ಟುವಂತಿದೆ. ಸಾಮಾನ್ಯ ಜನಜೀವನದ ಚಿತ್ರಣ ಹದವಾಗಿ ಬೆರೆತು ಕಾದಂಬರಿಗೆ ಒಂದು ಘನತೆಯನ್ನು ನೀಡಿದೆ. ಒಂದು ದೈವೀಪ್ರೇರಣೆಯ ಪ್ರಭಾವಲಯದೊಳಗೆ ಪ್ರವೇಶಿಸಿದ ವಿಭಿನ್ನ ಮನಸ್ಥಿತಿಯ, ಸಮಸ್ಯೆಗಳ, ನೋವು-ನಲಿವಿನ ಮಂದಿಯ ಮನಸ್ಥಿತಿಯನ್ನು ಅದರ ಎಲ್ಲ ವಿವರಗಳಲ್ಲಿ ಚಿತ್ರಿಸಿದ ಬಗೆ ಗಮನ ಸೆಳೆಯುತ್ತದೆ. ಜಾತ್ರೆಯ ಉನ್ಮಾದ, ನರ್ತನದ ಆವೇಗ-ಭಕ್ತಿಯೊಳಗಿನ ಆವೇಶ ಮತ್ತು ಕ್ರೌರ್ಯದ ಅನಾವರಣ ಕೂಡ ಇಲ್ಲಿ ಕಲಾತ್ಮಕವಾಗಿ ಕಥಾನಕದ ನಡೆಗೆ ಸಾಂದರ್ಭಿಕ ಮಹತ್ವ ತಂದು ಕೊಟ್ಟಿದೆ.

About the Author

ಆರ್.ಪಿ. ಹೆಗಡೆ - 29 January 2019)

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಪದವಿ ಕಾಲೇಜಿನಲ್ಲಿ ಸುದೀರ್ಘ - ಅವಧಿಯವರೆಗೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಆರ್ ಪಿ ಹೆಗಡೆ ಅವರು ಸದ್ಯ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಅನುವಾದ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಎಂಟು, ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ 25ಕ್ಕೂ ಹೆಚ್ಚು ಕೃತಿಗಳು ಮತ್ತು ಕನ್ನಡದಿಂದ ಹಿಂದಿಗೆ ಅನುವಾದಿಸಿದ ನಾಲ್ಕು ಕೃತಿಗಳು ಪ್ರಕಟಗೊಂಡಿವೆ. ಇದಲ್ಲದೆ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿರುವ ಅನೇಕ ಸಣ್ಣ ಕಥೆಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅನುವಾದ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದಿರುವ ಹೆಗಡೆಯವರಿಗೆ ಶಿರಸಿಯ ಕವಿ ಕಾವ್ಯ ...

READ MORE

Related Books