‘ಸಂಪ್ರಾಪ್ತಿ’ ಗಿರಿಮನೆ ಶ್ಯಾಮರಾವ್ ಅವರ ಕಾದಂಬರಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಮನುಷ್ಯ ಜೀವಿಗಳಲ್ಲಿ ವಿಭಿನ್ನ ಗುಣ ಸಹಜ. ವೈವಿಧ್ಯತೆ ಜಗತ್ತಿನ ನಿಯಮ. ಹಾಗಾಗಿ ಅತ್ಯುತ್ತಮ ಸಂಸ್ಕೃತಿ ಹೊಂದಿದವರಿರುವಂತೆ ಅತ್ಯಂತ ಕೀಳು ಮನಃಸ್ಥಿತಿಯವರೂ ಇದ್ದೇ ಇರುತ್ತಾರೆ. ಪ್ರತಿಯೊಬ್ಬರಲ್ಲೂ ಒಂದೊಂದು ಗುಣ ಪ್ರಧಾನವಾಗಿರುತ್ತದೆ. ಒಳ್ಳೆಯದು ಅಥವಾ ಕೆಟ್ಟದ್ದು, ಅವರಲ್ಲಿ ತಪ್ಪೇ ಮಾಡದವರು ತಮ್ಮಿಂದ ಒಂದು ಸಣ್ಣ ತಪ್ಪಾದರೂ ನೊಂದುಕೊಳ್ಳುತ್ತಾರೆ. ತಪ್ಪು ಮಾಡುವವರು ಯಾವ ಎಗ್ಗೂ ಇಲ್ಲದೆ ಮಾಡಿ ಮರೆತುಬಿಡುತ್ತಾರೆ. ಕೇವಲ ಮನುಷ್ಯರು ನಾವು. ಆದರೆ ಯಾರು ಉತ್ತಮ ಗುಣ ಹೊಂದಿರುತ್ತಾರೋ, ಯಾರಿಗೆ ತನ್ನನ್ನು ತಾನು ತಿದ್ದಿಕೊಳ್ಳಬೇಕೆಂದಿರುತ್ತದೋ ಅವರು ಉತ್ತಮರಾಗುತ್ತಾರೆ. ಮನಸ್ಸಿನ ಒಳಹೊರಗನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ! ಹಾಗಾಗಿ ಮಾನಸಿಕ ಸಮಸ್ಯೆಗಳ ಬಗ್ಗೆ ನನಗೆ ತಿಳಿದಷ್ಟು ವಿಷಯವನ್ನು ಕಾದಂಬರಿಗಳ ಮೂಲಕ ಪ್ರಸ್ತುತ ಪಡಿಸಲು ಯತ್ನಿಸುತ್ತಿದ್ದೇನೆ.
ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ...
READ MORE